ಚೀನಾ ವಿರುದ್ದ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ : ೨೦೨ ಎಕರೆ ವಿವಾದಿತ ಪ್ರದೇಶ ವಶ..!

0
104

ಭಾರತೀಯ ಸೇನೆ ಚೀನಾಕ್ಕೆ ಮತ್ತೊಂದು ಭರ್ಜರಿ ಶಾಕ್ ನೀಡಿದೆ. ೧೯೮೬ರಲ್ಲಿ ಚೀನಾ, ಭಾರತೀಯ ಸೇನೆಯ ವಶದಲ್ಲಿದ್ದ ಅರುಣಾಚಲ ಪ್ರದೇಶದ ಸುಮ್‌ದೊರೊಂಗ್ ಚು ಫ್ಲಾಷ್‌ಪಾಯಿಂಟ್ ಬಳಿಯ ವಿವಾದಿತ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿತ್ತು. ಸೇನೆಯ ಕಾರ್ಯತಾಂತ್ರಿಕ ದೃಷ್ಟಿಯಿಂದ ಈ ಪ್ರದೇಶ ಅತ್ಯಂತ ಮಹತ್ವದ್ದಾಗಿತ್ತು. ಚೀನಾ ಮತ್ತು ಭಾರತದ ನಡುವೆ ಗಡಿ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿರುವ ಹೊತ್ತಿನಲ್ಲೇ ಭಾರತೀಯ ಸೇನೆ ಭರ್ಜರಿ ಕಾರ್ಯಾರಣೆ ನಡೆಸಿ ಸುಮ್‌ದೊರೊಂಗ್ ಚು ಫ್ಲಾಷ್‌ಪಾಯಿಂಟ್ ಬಳಿಯ ವಿವಾದಿತ ೨೦೨ ಎಕರೆ ಪ್ರದೇಶವನ್ನು ತನ್ನ ಹಿಡಿತಕ್ಕೆ ಪಡೆದುಕೊಂಡಿದೆ.

ಇನ್ನು ಈ ಹಿಂದೆ ಈ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಭಾರತ ಮತ್ತು ಚೀನಾ ಸೇನೆಗಳು ಅನೇಕ ಬಾರಿ ಸೆಣಸಾಟ ನಡೆಸಿವೆ. ೧೯೮೬ರಲ್ಲಿ ನಡೆದ ನಿರಂತರ ಗಡಿ ಸಂಘರ್ಷದಲ್ಲಿ ಎರಡೂ ಸೇನೆಗಳ ಸುಮಾರು ೨೦೦೦ಕ್ಕೂ ಹೆಚ್ಚು ಸೈನಿಕರು ಪ್ರಾಣ ತ್ಯಾಗ ಮಾಡಿದ್ದರು. ಚೀನಾ ಈ ಪ್ರದೇಶದಲ್ಲಿ ಹೆಚ್ಚಿನ ಸೈನಿಕ ಬಲವನ್ನು ಹೊಂದಿದ್ದು ಆಯಕಟ್ಟಿನ ಪರ್ವತಗಳ ಮೇಲೆ ಹಿಡಿತ ಸಾಧಿಸಿ, ಭಾರತೀಯ ಸೇನೆಗೆ ತಲೆನೋವು ತಂದಿಟ್ಟಿತ್ತು. ಆದರೆ ಇದೀಗ ಭಾರತೀಯ ಸೇನೆ ಚೀನಾಗೆ ಚಳ್ಳೆಹಣ್ಣು ತಿನ್ನಿಸಿ ಈ ಸುಮ್‌ದೊರೊಂಗ್ ಚು ಫ್ಲಾಷ್‌ಪಾಯಿಂಟ್ ಅನ್ನು ವಶಕ್ಕೆ ಪಡೆದಿದೆ. ಆ ಮೂಲಕ ಚೀನಾ ಸೇನೆಯ ವಿರುದ್ದ ಮೇಲುಗೈ ಸಾಧಿಸಿದೆ.

ಇನ್ನು ಸುಮ್‌ದೊರೊಂಗ್ ಚು ನದಿಯಾಗಿದ್ದು, ಅರುಣಾಚಲ ಪ್ರದೇಶದ ತವಂಗ್ ಜಿಲ್ಲೆಯಲ್ಲಿ ಹರಿಯುತ್ತದೆ. ಈ ನದಿ ಚೀನಾದ ಈಶಾನ್ಯಕ್ಕೆ ಹರಿಯುತ್ತದೆ. ಸೈನಿಕ ಕಾರ್ಯಾಚರಣೆಯ ದೃಷ್ಟಿಯಿಂದ ಅತ್ಯಂತ ಆಯಾಕಟ್ಟಿನ ಜಾಗವಿದು. ಹೀಗಾಗಿ ಸುಮ್‌ದೊರೊಂಗ್ ಚು ಪ್ರದೇಶವನ್ನು ವಶಕ್ಕೆ ಪಡೆಯಲು ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸಾಕಷ್ಟು ಪ್ರಯತ್ನ ನಡೆಸಿದ್ದರು. ೧೯೮೦ರ ದಶಕದಲ್ಲಿ ಸುಮ್‌ದೊರೊಂಗ್ ಚು ಫ್ಲಾಷ್‌ಪಾಯಿಂಟ್ ಅನ್ನು ಉಳಿಸಿಕೊಳ್ಳಲು ಇಂದಿರಾ ಗಾಂಧಿ ಸಾಕಷ್ಟು ಪ್ರಯತ್ನ ನಡೆಸಿ ವಿಫಲರಾಗಿದ್ದರು. ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳಲು ಇಂದಿರಾ ಗಾಂಧಿ ನಡೆಸಿದ ಪ್ರಯತ್ನಗಳು ಕೂಡಾ ಫಲ ನೀಡಿರಲಿಲ್ಲ.

ಇನ್ನು ಸುಮ್‌ದೊರೊಂಗ್ ಚು ಫ್ಲಾಷ್‌ಪಾಯಿಂಟ್ ಬಳಿ ಈ ಹಿಂದೆ ಚೀನಾ ಮತ್ತು ಭಾರತೀಯ ಸೇನೆಗಳು ಬೇಸಿಗೆಯಲ್ಲಿ ನಿಯೋಜನೆಗೊಂಡು ಚಳಿಗಾಲದಲ್ಲಿ ಅಲ್ಲಿಂದ ಹೊರ ಬರುತ್ತಿದ್ದವು. ಇದನ್ನೇ ಅಸ್ತçವನ್ನಾಗಿ ಬಳಸಿಕೊಂಡ ಚೀನಾ ಸುಮ್‌ದೊರೊಂಗ್ ಚು ಫ್ಲಾಷ್‌ಪಾಯಿಂಟ್ ಬಳಿ ಹೆಲಿಪ್ಯಾಡ್ ನಿರ್ಮಿಸಿತ್ತು. ಈ ವೇಳೆ ಇಂದಿರಾ ಗಾಂಧಿ ಸರ್ಕಾರ ಈ ಪ್ರದೇಶವನ್ನು ಖಾಲಿ ಮಾಡಿದ್ದಲ್ಲಿ ಅದನ್ನು ಅತಿಕ್ರಮಣ ಮಾಡಿಕೊಳ್ಳುವುದಿಲ್ಲ ಎಂದು ಹೇಳಿತ್ತು. ಆದರೆ ಚೀನಾ ಸೇನೆ ಇದನ್ನು ತಿರಸ್ಕರಿಸಿತ್ತು. ಚೀನಾದ ಈ ನಡೆಯ ವಿರುದ್ದ ೧೯೮೬ರಿಂದಲೂ ಭಾರತ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ.

LEAVE A REPLY

Please enter your comment!
Please enter your name here