ಕೇಂದ್ರ ಸರ್ಕಾರದಿಂದ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ..!

0
121

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಹಾಗೂ ಅನಿಲದ ದರವನ್ನು ಆಧರಿಸಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲ ವಾರದಂದು ಎಲ್ ಪಿಜಿ ಸಿಲಿಂಡರ್ ದರವನ್ನು ದೇಶದಾದ್ಯಂತ ನಿರ್ಧಾರ ಮಾಡಿ ಪರಿಷ್ಕರಣೆ ಮಾಡಲಾಗುತ್ತದೆ.  ಕೊರೋನಾ ಮಾರಿಯಿಂದ ತೊಂದರೆಗೆ ಸಿಲುಕಿರುವ ಜನರಿಗೆ ಮತ್ತೊಮ್ಮೆ ವಾಣಿಜ್ಯ ಉದ್ದೇಶಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡಿರುವುದು ದುಬಾರಿಯಾಗಿ ಪರಿಣಮಿಸಲಿದೆ. ಆದರೇ ಖುಷಿಯ ವಿಚಾರವೆಂದರೇ ಈ ಬಾರಿ ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸ ಮಾಡದೇ ಹಳೆ ಬೆಲೆಯನ್ನೆ ನಿಗದಿ ಪಡಿಸಲಾಗಿದೆ.


ಕೊರೋನಾ ಸೋಂಕು ಮಾರ್ಚ್ ತಿಂಗಳಲ್ಲಿ ದೇಶದಾದ್ಯಂತ ವ್ಯಾಪಿಸಿ ಲಾಕ್‍ಡೌನ್ ಏರಿಕೆ ಮಾಡಲಾಗಿತ್ತು, ಜನರ ದಿನಬಳಕೆಯ ವಸ್ತುಗಳ ದರವನ್ನು ಕಡಿಮೆ ಮಾಡಲಾಗಿತ್ತು, ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಗೃಹಬಳೆಕೆಯ ಸಬ್ಸಿಡಿ ರಹಿತ ಅಡುಗೆ ಅನಿಲದ ಸಿಲಿಂಡರ್ ಬೆಲೆಗಳನ್ನು ಮತ್ತೊಮ್ಮೆ ಕಡಿಮೆ ಮಾಡಲಾಗಿತ್ತು. ಆದರೆ ಲಾಕ್‍ಡೌನ್ ತೆರವುಗೊಂಡ ಬಳಿಕ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ನಂತರ ಬಹುತೇಕ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬಂದಿದೆ.

ವಾಣಿಜ್ಯ ಸಿಲಿಂಡರ್ ದರ:
ಪ್ರಸ್ತುತ 19 ಕೆ.ಜಿಯ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್‍ನ ಬೆಲೆಯನ್ನು 75 ರೂ ಏರಿಕೆ ಮಾಡಲಾಗಿದೆ. ಹೊಸ ದರ ನವೆಂಬರ್ 1ರಿಂದಲೇ ಜಾರಿಗೆ ಬಂದಿದೆ. ದೆಹಲಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಪ್ರತಿ ಸಿಲಿಂಡರ್‍ಗೆ 1166 ರೂ ಇದ್ದ ದರವನ್ನು ಈಗ ಪ್ರತಿ ಸಿಲಿಂಡರ್‍ಗೆ 1241.50ರೂ ನಿಗದಿ ಮಾಡಲಾಗಿದೆ. ಇನ್ನು ಮೆಟ್ರೋ ಸಿಟಿಗಳಾದ ಚೆನ್ನೈ ನಲ್ಲಿ 19.5 ಕೆ.ಜಿ ತೂಕದ ಸಿಲಿಂಡರ್‍ನ ಬೆಲೆ 1354ರೂ ನಿಗದಿ ಮಾಡಲಾಗಿದೆ.

ಅಡುಗೆ ಸಿಲಿಂಡರ್ ದರ:
ಗೃಹ ಬಳಕೆಯ ಸಬ್ಸಿಡಿ ರಹಿತ 14.2 ಕೆ.ಜಿ ತೂಕದ ಸಿಲಿಂಡರ್‍ನ ಬೆಲೆ ದೇಶದ ರಾಜಧಾನಿ ದೆಹಲಿಯಲ್ಲಿ 594ರೂ ನಷ್ಟಿದ್ದರೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 597ರೂ ನಷ್ಟಿದೆ. ಚೆನ್ನೈನಲ್ಲಿ 14.2 ಕೆ.ಜಿ ಸಿಲಿಂಡರ್‍ನ ಬೆಲೆ 610ರೂ ನಿಗದಿ ಮಾಡಲಾಗಿದೆ.

ದರ ನಿಗದಿಯ ಬಗ್ಗೆ ಮಾಹಿತಿ:
ಸರ್ಕಾರಿ ಸ್ವಾಮ್ಯದಲ್ಲಿರುವ ಇಂಧನ ಕಂಪನಿಗಳಾದ ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಇಂಧನಗಳ ಧರ, ಸೀಮೆ ಎಣ್ಣೆ ಬೆಲೆ, ಜೆಟ್ ಇಂಧನದ ಬೆಲೆ, ಸಬಿಸಿ ರಹಿತ ಎಲ್‍ಪಿಜಿ ಇಂಧನದ ಬೆಲೆಯ ಬಗ್ಗೆ ನಿರ್ಧಾರ ಕೈಗೊಂಡು ಬೆಲೆಯನ್ನು ನಿಗದಿ ಪಡಿಸುತ್ತವೆ.

ಆರು ತಿಂಗಳಿಗೊಮ್ಮೆ ನೈಸರ್ಗಿಕ ಅನಿಲದ ಬೆಲೆಯನ್ನು ನಿರ್ಧಾರ ತೆಗೆದು ಕೊಳ್ಳಲಿದ್ದು ಸರಾಸರಿ ದರವನ್ನು ನಿಗದಿ ಪಡಿಸಲಾಗುತ್ತದೆ. ಆದರೇ ಈ ಹೊಸ ದರಗಳು ಪ್ರಧಾನ್ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ನಿಗದಿ ಮಾಡಲಾಗುವುದಿಲ್ಲ

LEAVE A REPLY

Please enter your comment!
Please enter your name here