ಮಳೆಗಾಲದಲ್ಲಿ ಅನೇಕ ಆಹಾರಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ರೆ, ಆರೋಗ್ಯ ಹದಗೆಡುವುದು ಪಕ್ಕಾ. ಮಳೆಗಾಲದ ತಂಪಾದ ವಾತಾವರಣಕ್ಕೆ ರುಚಿ ರುಚಿ ತಿಂಡಿ ತಿನ್ನುವ ಮನಸ್ಸಾಗುತ್ತದೆ. ಆದರೆ ಸಿಕ್ಕ ಸಿಕ್ಕ ತಿಂಡಿಗಳನ್ನು ತಿನ್ನುವ ಬದಲು ಮಳೆಗಾಲದಲ್ಲಿ ಆಹಾರ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕಾಗುತ್ತದೆ.
• ಆಲೂಗಡ್ಡೆ ಮತ್ತು ಮುಂಗಾರು ಬೆಳೆ : ಆಲೂಗಡ್ಡೆ, ಬೆಂಡೆಕಾಯಿ, ಅವರೆಕಾಳು, ಹೂ ಕೋಸು ಈ ತರಕಾರಿಗಳನ್ನು ಸೇವಿಸದೆ ಇರುವುದೇ ಒಳ್ಳೆಯದು. ಇದು ಆರಾಮವಾಗಿ ಜೀರ್ಣವಾಗುವುದಿಲ್ಲ.
• ಅಣಬೆ : ಮಳೆಗಾಲದಲ್ಲಿ ಅಣಬೆ ತಿನ್ನುವುದು ಒಳ್ಳೆಯದಲ್ಲ. ಇದರಿಂದ ಸೋಂಕು ತಗಲುವ ಅಪಾಯವಿರುತ್ತದೆ. ಉಳಿದ ಕಾಲಕ್ಕಿಂತ ಮಳೆಗಾಲದಲ್ಲಿ ಈ ಪ್ರಮಾಣ ಜಾಸ್ತಿ ಇರುತ್ತದೆ.

• ಹೊರಗಿನ ತಿಂಡಿ : ಹೊರಗಿನ ತಿಂಡಿ ಯಾವ ಸಮಯದಲ್ಲಿಯೂ ಒಳ್ಳೆಯದಲ್ಲ. ಮಳೆಗಾಲದಲ್ಲಂತೂ ಇದರ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಎಣ್ಣೆ ಹಾಗೂ ನೀರು ಶುದ್ಧವಾಗಿರದ ಕಾರಣ ನಾನಾ ಖಾಯಿಲೆಗಳು ಕಾಡುತ್ತವೆ.
• ಎಲೆಕೋಸು ಮತ್ತು ಪಾಲಕ್ : ಮಳೆಗಾಲದಲ್ಲಿ ನಮ್ಮ ಜೀರ್ಣಕ್ರಿಯೆ ದುರ್ಬಲವಾಗಿರುತ್ತದೆ. ಹಾಗಾಗಿ ಎಲೆಕೋಸು ಹಾಗೂ ಪಾಲಾಕ್ ಸೊಪ್ಪುಗಳು ಮಳೆಗಾಲದಲ್ಲಿ ಒಳ್ಳೆಯದಲ್ಲ. ಅದ್ರಲ್ಲಿ ಸಣ್ಣ ಕೀಟಾಣು ಹಾಗೂ ಮೊಟ್ಟೆಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅದೂ ನಮ್ಮ ಹೊಟ್ಟೆಗೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

• ತರಕಾರಿ ಮತ್ತು ತಂಪೂ ಪಾನೀಯ : ಮಳೆಗಾಲದಲ್ಲಿ ಹಸಿ ತರಕಾರಿ ತಿನ್ನುವುದು ಒಳ್ಳೆಯದಲ್ಲ. ಎಲ್ಲ ತರಕಾರಿಗಳನ್ನು ಬೇಯಿಸಿ ತಿನ್ನಿರಿ. ಬೇಯಿಸಿದಾಗ ಕೀಟಾಣುಗಳು ನಾಶವಾಗುತ್ತವೆ.
ಈ ಆಹಾರ ಪ್ರದಾರ್ಥಗಳನ್ನು ಸೇವಿಸಬಹುದು.
• ಬೆಳ್ಳುಳ್ಳಿ : ಮಳೆಗಾಲದಲ್ಲಿ ಬೆಳ್ಳುಳ್ಳಿ ಬಹಳ ಒಳ್ಳೆಯದು. ಇದರಲ್ಲಿ ರೋಗ ನಿರೋಧಕ ಶಕ್ತಿ ಇದೆ. ಮಳೆಗಾಲದಲ್ಲಿ ಬಿಸಿ ಬಿಸಿ ಪಾನೀಯ ಸೇವಿಸಲು ಮನಸ್ಸು ಬಯಸುತ್ತದೆ.

• ಹಾಗಲಕಾಯಿ, ಲಿಂಬು ಮತ್ತು ಮೆಂತ್ಯ : ಸ್ವಲ್ಪ ಕಹಿ ಹಾಗೂ ಹುಳಿ ಮಿಶ್ರಿತ ಈ ಆಹಾರ ಸೇವನೆ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
• ಪ್ರತಿದಿನ ಮೂರ್ನಾಲ್ಕು ತುಳಸಿ ಎಲೆಗಳ ಸೇವನೆ ಬಹಳ ಒಳ್ಳೆಯದು. ತುಳಸಿಯಲ್ಲಿ ವೈರಸ್ ನಿರೋಧಕ ಶಕ್ತಿ ಹಾಗೂ ಆಂಟಿ ಆಕ್ಸಿಡೆಂಟ್ ಅಂಶವಿರುತ್ತದೆ.

• ಹರ್ಬಲ್ ಚಹಾ : ಮಳೆಗಾಲದಲ್ಲಿ ಹರ್ಬಲ್ ಚಹಾ ಆರೋಗ್ಯಕ್ಕೆ ಉತ್ತಮ. ನಿಮಗೆ ಇಷ್ಟವಾದ್ರೆ ಶುಂಠಿ, ಮೆಣಸು ಮತ್ತು ಜೇನನ್ನು ಕೂಡ ಹಾಕಿಕೊಂಡು ಟೀ ಕುಡಿಯಬಹುದು.