ಪ್ರವಾಹ ಪರಿಸ್ಥಿತಿಯಲ್ಲೂ ಕೀಳು ರಾಜಕೀಯ ಮಾಡಿದ ಬಿಜೆಪಿ ಶಾಸಕ..!

0
181

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ರಾಜಕೀಯ ಪರಧಿಯನ್ನು ಮೀರಿ ವರ್ತಿಸುತ್ತಿದ್ದಾರೆ. ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಹಲವು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದ ನೈತಿಕತೆ ಇದೀಗ ಅಂದಃಪತನದತ್ತ ಸಾಗುತ್ತಿದೆ. ರಾಜ್ಯದ ಜನತೆ ಭೀಕರ ಪ್ರವಾಹಕ್ಕೆ ತುತ್ತಾಗಿರುವ ಸಂದರ್ಭದಲ್ಲಿಯೇ ಕಾಂಗ್ರೆಸ್ ನಾಯಕರು ಬಿರಿಯಾನಿ ಪಾರ್ಟಿ ಮಾಡಿರುವುದು ಸುದ್ದಿಯಾದ ಬೆನ್ನಲ್ಲೇ, ಇದೀಗ ಬಿಜೆಪಿಯ ಒಬ್ಬ ಶಾಸಕ ನೈತಿಕತೆಯನ್ನು ಮೀರಿ ಪ್ರವಾಹದಲ್ಲೂ ರಾಜಕೀಯವನ್ನು ಎಳೆತಂದಿದ್ದಾರೆ.

ಹೌದು, ಬಾಗಲಕೋಟೆ ಕ್ಷೇತ್ರದ ಬಿಜೆಪಿ ಶಾಸಕ ವೀರಣ್ಣ ಚಿರಂತಿಮಠ, ಪ್ರವಾಹ ಪೀಡಿತರ ಭೇಟಿಗೆ ತೆರಳಿ ತಮ್ಮ ಪಕ್ಷದ ಪ್ರಚಾರ ಮಾಡಿರುವ ಘಟನೆ ನಡೆದಿದೆ. ಪ್ರವಾಹ ಸಂತ್ರಸ್ತರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ್ದ ವೀರಣ್ಣ ಚಿರಂತಿನಮಠ ಅವರು ಅಲ್ಲಿನ ಸ್ಥಳೀಯರ ಕಷ್ಟ ವಿಚಾರಿಸುವ ಬದಲಿಗೆ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ.

ಸಂತ್ರಸ್ತರ ಬಳಿ ವೀರಣ್ಣ ಚಿರಂತಿಮಠ ಅವರು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಅನ್ನು ಹೀನ ಭಾಷೆಯಲ್ಲಿ ಬೈದಿರುವ ಚಿರಂತಿನಮಠ ಅವರು, “ಬಿಜೆಪಿಯು 370 ತೆಗೆದುಹಾಕಿದೆ, ನೀವು ಕಾಂಗ್ರೆಸ್ ಕಡೆಗೆ ಹೋಗಬೇಡಿ, ಬಿಜೆಪಿಗೆ ಬನ್ನಿ’ ಎಂದಿದ್ದಾರೆ. ವೀರಣ್ಣ ಚರಂತಿಮಠ ಅವರು ಪ್ರವಾಹದಂತಹಾ ಪರಿಸ್ಥಿತಿಯನ್ನು ರಾಜಕೀಯ ಮಾಡಲು ಬಳಸಿರುವ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here