‘ಹೆದರಿಕೊಂಡು ಓಡಿ ಹೋಗುವ ಕೆಂಪೆಗೌಡನ ಮಗ ನಾನಲ್ಲ’ ಡಿಕೆಶಿ ಗುಡುಗು..!

0
1596

ಕಾಂಗ್ರೆಸ್‍ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಅವರಿಗೆ ಇಡಿ ಸಂಕಷ್ಟ ಶುರುವಾಗಿದೆ. ಇಡಿ ಸಮನ್ಸ್ ರದ್ದು ಮಾಡುವಂತೆ ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ಹೈಕೋರ್ಟ್ ತಳ್ಳಿ ಹಾಕಿದ ಬೆನ್ನಲ್ಲೇ, ಇಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ. ಇಂದು ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಕೋರಿದೆ. ಈ ನಡುವೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ದ ಗುಡುಗಿದ್ದಾರೆ.

ಕೇಂದ್ರ ಸರ್ಕಾರ ರಾಜಕೀಯವಾಗಿ ನನ್ನನ್ನು ಮುಗಿಸಲು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿಯ ಈ ಷಡ್ಯಂತ್ರಕ್ಕೆ ಹೆದರುವ ಜಾಯಮಾನ ನನ್ನದಲ್ಲ. ಕಾನೂನಾತ್ಮಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಾನು ಇದೆಲ್ಲವನ್ನ ನಾನು ಎದುರಿಸುತ್ತೇನೆ. ಹೆದರಿಕೊಂಡು ಓಡಿ ಹೋಗುವ ಕೆಂಪೆಗೌಡನ ಮಗ ನಾನಲ್ಲ ಎಂದು ಗುಡುಗಿದ್ದಾರೆ.

ಇನ್ನು ಈ ಹಿಂದೆ ನಾನು ಗುಜರಾತ್, ಮಹಾರಾಷ್ಟ್ರ ಮತ್ತು ನಮ್ಮ ರಾಜ್ಯದ ಶಾಸಕರನ್ನು ರಕ್ಷಣೆ ಮಾಡಿದ್ದೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಮಾಡಿದ ಕಾರ್ಯ ಈಗ ನನಗೆ ಉರುಳಾಗಿದೆ. ಹೀಗಾಗಿಯೇ ಇಡಿ ಮೂಲಕ ನನ್ನನ್ನು ಹಣಿಯಲು ಪ್ರಯತ್ನ ನಡೆದಿದೆ. ಆದರೆ ನಾನು ಇದೆಲ್ಲವನ್ನು ಎದುರಿಸುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಹೀಗಾಗಿ ಎಲ್ಲವನ್ನೂ ಎದುರಿಸುತ್ತೇನೆ ಎಂದರು.

LEAVE A REPLY

Please enter your comment!
Please enter your name here