ಕಿರುತೆರೆಯಲ್ಲಿ ರಂಜಿಸಲು ಬರುತ್ತಿದೆ “ನಾನು ನನ್ನ ಕನಸು”!

0
115

ಧಾರಾವಾಹಿ, ಮನೆ ಮಂದಿಯೆಲ್ಲ ಕುಳಿತು ಕೊಂಡು ತಮ್ಮ ನೆಚ್ಚಿನ ಕಿರುತೆರೆ ನಟರ ಧಾರಾವಾಹಿಯನ್ನು ನೋಡಿಕೊಂಡು ಕಾಲವನ್ನು ಕಳೆಯುತ್ತಾರೆ .. ಹೆಣ್ಣು ಮಕ್ಕಳಿಗಂತೂ ಧಾರಾವಾಹಿ ಎಂದರೆ ಅಚ್ಚುಮೆಚ್ಚು.. ಗ್ರಾಮಗಳಲ್ಲಿ ಬೆಳ್ಳಿತೆರೆ ನೋಡುವವರಿಗಿಂತ ಕಿರುತೆರೆ ನೋಡುವವರೇ ಹೆಚ್ಚು ..

ಇತ್ತೀಚೆಗೆ ಬೇರೆ ಬೇರೆ ಚಾನೆಲ್ಗಳಲ್ಲಿ ಧಾರಾವಾಹಿಗಳ ಟ್ರೆಂಡ್ ಸೆಟ್ ಮಾಡುತ್ತಿವೆ.. ದಿನನಿತ್ಯದ ಯಾವುದೇ ಕೆಲಸ ಬಿಟ್ಟರೂ, ಕೆಲವು ಹೆಸರಾಂತ ಧಾರಾವಾಹಿಯನ್ನು ಮಿಸ್ ಮಾಡದೇ ನೋಡುತ್ತಾರೆ..

ಈ ಸಾಲಿಗೆ ಈಗ ಉದಯ ಚಾನೆಲ್ನಲ್ಲಿ ಜನರನ್ನು ರಂಜಿಸಲು “ನಾನು ನನ್ನ ಕನಸು” ಎಂಬ ಧಾರಾವಾಹಿ ಬರುತ್ತಿದೆ

ಹೊಚ್ಚ ಹೊಸ ಸಿನಿಮಾ, ಧಾರಾವಾಹಿಗಳ ಮೂಲಕ ವೀಕ್ಷಕರ ಪ್ರಶಂಸೆ ನಿಟ್ಟಿಸಿ ಕೊಳ್ಳುವುದರಲ್ಲಿ ಉದಯ ಟಿವಿ ಯಶಸ್ವಿಯಾಗಿದೆ !

ಈಗ “ನಾನು ನನ್ನ ಕನಸು” ಎಂಬ ಧಾರಾವಾಹಿಯ ಮುಖಾಂತರ ಹೊಸದೊಂದು ಕನಸನ್ನು ಹೊತ್ತು ಬರುತ್ತಿದೆ !

ಈ ಹಿಂದೆ ಪ್ರಕಾಶ್ ರೈ, ಸಿತಾರ ಮತ್ತು ಅಮೂಲ್ಯ ರವರು ನಾನು ನನ್ನ ಕನಸು ಎಂಬ ಸಿನಿಮಾದಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಅಪಾರ ಪ್ರಶಂಸೆಯನ್ನೂ ಗಿಟ್ಟಿಸಿಕೊಂಡಿದ್ದರು !.

ಇದೀಗ ಇದೇ ಶೀರ್ಷಿಕೆಯಲ್ಲಿ ಧಾರಾವಾಹಿ ಬರುತ್ತಿದೆ ..

ತಂದೆಯ ಕನಸು ತನ್ನ ಮಗಳನ್ನು ಡಾಕ್ಟರ್ ಮಾಡಬೇಕು ಎನ್ನುವುದು.. ಆದರೆ ಡಾಕ್ಟರ್ ಆಗಬೇಕು ಎನ್ನುವ ನಿಟ್ಟಿನಲ್ಲಿ ಅನೇಕ ಅವಮಾನ ಅಡತಡೆಗಳು ಇರುತ್ತದೆ ಇವೆಲ್ಲವನ್ನೂ ದಾಟಿ ಅಪ್ಪನ ಕನಸನ್ನು ಮಗಳು ಈಡೇರಿಸುತ್ತಾಳೆ ಇಲ್ಲವಾ ಎಂಬುದೇ ಧಾರಾವಾಹಿಯ ಸಾರಾಂಶ !

ಇನ್ನು ತಂದೆಯ ಪಾತ್ರದಲ್ಲಿ ಹೆಸರಾಂತ ನಟ ರಾಜೇಶ್ ನಟರಂಗ ನಟಿಸಿದ್ದಾರೆ.. ಇನ್ನು ಮಗಳ ಪಾತ್ರದಲ್ಲಿ ಮುದ್ದು ಮುಖದ ಮೇಲೆ ಸುಂದರವಾದ ಮುಗುಳ್ನಗೆಯ ಶ್ರಿತಾ ನಟಿಸಿದ್ದಾರೆ.. ಯಾರಿದು ಶ್ರೀತಾ? ಶ್ರಿತಾ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ.. ಯಾಕೆಂದರೆ ಕಿರುತೆರೆಯಲ್ಲಿ ಅವಳ ಹೆಸರು ಮುದ್ದುಗುಮ್ಮ ..

ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ಅಂಜಲಿ ಧಾರಾವಾಹಿಯಲ್ಲಿ ಅಂಜಲಿಯಾಗಿ.. ಮಹಾದೇವಿ ಧಾರಾವಾಹಿಯಲ್ಲಿ ಹಿರಣ್ಮಯಿಯಾಗಿ ಈಗ ನಾನು ನನ್ನ ಕನಸು ಧಾರಾವಾಹಿಯಲ್ಲಿ ಅನು ಆಗಿ ರಂಜಿಸಲು ಬರುತ್ತಿದ್ದಾಳೆ ..

ಬಹಳ ವರ್ಷಗಳ ವಿರಾಮದ ನಂತರ ನಿಶಿತಾ ಗೌಡ ಮತ್ತೆ ಕಿರುತೆರೆಯಲ್ಲಿ ನಟಿಸುತ್ತಿರುವುದು ವಿಶೇಷ. ಇತರ ಮುಖ್ಯಪಾತ್ರಗಳಲ್ಲಿ ವಿಶಾಲ್ ರಘು, ಹರೀಶ್,ಬಾಲನಟರಾಗಿ ಸ್ಕಂದ ನಟಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ನಾನು ನನ್ನ ಕನಸು ಧಾರಾವಾಹಿಯ ಪ್ರಮೋಷನ್ ‍ಗೆ ಖ್ಯಾತ ಸಿನೆಮಾತಾರೆ “ಪ್ರಿಯಾಂಕ ಉಪೇಂದ್ರ” ಅವರು ಭಾಗಿಯಾಗಿರುವುದು ದೊಡ್ಡ ವಿಶೇಷ. ಇದರ ಪ್ರೋಮೋಗಳಲ್ಲಿ ಕಾಣಿಸಿಕೊಂಡಿರುವುದಷ್ಟೇ ಅಲ್ಲದೆ, ಕಥೆಯ ಮುಖ್ಯ ಘಟ್ಟಗಳನ್ನು ತೆರೆಯ ಮೇಲೆ ಬಂದು ಹೇಳಲಿದ್ದಾರೆ.

ಇನ್ನು ನಾನು ನನ್ನ ಕನಸು ಆಗಸ್ಟ್ ೫ ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಬರೆದಿದೆ

LEAVE A REPLY

Please enter your comment!
Please enter your name here