ನಾನು ಯಾವುದೇ ಪಕ್ಷವನ್ನು ಸೇರುವ ಮಾತೇ ಇಲ್ಲ. ಜೆಡಿಎಸ್ ಪಕ್ಷದ ಶಾಸಕನಾಗಿಯೇ ಉಳಿಯುತ್ತೇನೆ ಎನ್ನುತ್ತಲೇ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒಳ್ಳೆಯ ಆಡಳಿತವನ್ನು ರಾಜ್ಯದಲ್ಲಿ ನಡೆಸುತ್ತಿದ್ದಾರೆ. ಉತ್ತಮ ಆಡಳಿತ ನೀಡಲಿದ್ದಾರೆ ಎಂಬುದಾಗಿ ಮತ್ತೆ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಸಿಎಂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ, ನಾನು ಜೆಡಿಎಸ್ ಪಕ್ಷದ ಶಾಸಕ. ಜೆಡಿಎಸ್ ಪಕ್ಷದ ಶಾಸಕನಾಗಿಯೇ ಇರುತ್ತೇನೆ. ಕಾಂಗ್ರೆಸ್ ಆಗಲಿ, ಬಿಜೆಪಿಗೆ ಆಗಲಿ ಹೋಗುವುದಿಲ್ಲ. ಜೊತೆಗೆ ನಾನು ಯಾವುದೇ ಪಕ್ಷದ ಕಡೆಗೆ ಮುಖ ಮಾಡುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸಿದರು.
ಇದೇ ಸಂದರ್ಭದಲ್ಲಿ ಮತ್ತೆ ಸಿಎಂ ಬಿಎಸ್ ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಬೀಸಿದ ಜಿಟಿ ದೇವೇಗೌಡ, ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸರ್ಕಾರವನ್ನು ಮುನ್ನೆಡೆಸುವ ಶಕ್ತಿ ಸಾಮರ್ಥ್ಯ ಇದೆ.ಆದ್ರೇ ಉಪ ಚುನಾವಣೆಯ ಫಲಿತಾಂಶದ ನಂತ್ರ ಅಷ್ಟೇ ಕಷ್ಟವೂ ಇದೆ. ಆದರೂ ಅವರು ಯಶಸ್ವಿಯಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಉತ್ತಮ ಆಡಳಿತವನ್ನು ರಾಜ್ಯದ ಜನತೆಗೆ ನೀಡುತ್ತಿದ್ದಾರೆ ಎಂಬುದಾಗಿ ಹಾಡಿ ಹೊಗಳಿದರು.