ತಮಗಿರುವ ಕಾಯಿಲೆ ರಿವೀಲ್ ಮಾಡಿದ ನಟಿ ಇಲಿಯಾನ..!

0
391

ತೆಲುಗು ಮತ್ತು ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಇಲಿಯಾನ ತಮಗಿರುವ ಕಾಯಿಲೆ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆಯುವ ಮುೂಲಕ ಎಲ್ಲರಿಗೂ ಬಹಿರಂಗವಾಗಿ ತಿಳಿಸಿದ್ದಾರೆ. ಹೌದು, ಸಾಕಷ್ಟು ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಹೆಚ್ಚು ಹೆಸರು ಮಾಡಿರುವ ನಟಿ ಇಲಿಯಾನ, ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಾವು ಅನುಭವಿಸುತ್ತಿರುವ ಕಾಯಿಲೆ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಏನಿದು.? ನಟಿ ಇಲಿಯಾನ ಅವರು ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರುವುದು ಖಂಡಿತ.

ನಟಿ ಇಲಿಯಾನ ಮಾಡಿರುವ ಟ್ವೀಟ್ ನಲ್ಲಿ ಅವರು ನಿದ್ದೆಗಣ್ಣಿನಲ್ಲಿ ಎದ್ದು ನಡೆದಾಡುವ ಅಭ್ಯಾಸವಿದೆಯಂತೆ ಹಾಗೂ ಬೆಳಗ್ಗೆ ಎದ್ದಾಗ ಕಾಲುಗಳು ಊದಿಕೊಂಡಿರುತ್ತದೆಯಂತೆ. ಈ ರೀತಿಯ ತೊಂದರೆಗಳಿಂದ ನಾನು ಅನುಭವಿಸುತ್ತಿದ್ದೇನೆ ಯಾಕೆ ಎಂಬುದು ನನಗೆ ಇಲ್ಲಿಯವರೆಗೂ ಅರ್ಥವಾಗುತ್ತಿಲ್ಲ.! ಬೆಳಗ್ಗೆ ಎದ್ದು ನೋಡಿದರೆ ನನ್ನ ಕಾಲಿನಲ್ಲಿ ಆಶ್ಚರ್ಯಕರ ರೀತಿಯಲ್ಲಿ ಗಾಯಗಳಾಗಿರುತ್ತವೆ.

ಕಾಲು ತುಂಬಾ ಊದಿಕೊಂಡಿರುತ್ತದೆ. ಮಲಗಿದ ಬಳಿಕ ಹೇಗೆ ನಾನು ಎದ್ದು ಓಡಾಡುತ್ತೇನೆ ಎಂಬುದು ನನಗೆ ತಿಳಿದಿಲ್ಲ. ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇಲಿಯಾನ ಅವರ ಟ್ವೀಟ್ ನೋಡಿದ ನೆಟ್ಟಿಗರು, ನಿಮ್ಮ ರೂಂನಲ್ಲಿ ಒಂದು ಕ್ಯಾಮೆರಾ ಅಳವಡಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರೆ. ಮತ್ತೊಬ್ಬರು ಎಲ್ಲೋ ಮಲಗುತ್ತಿದ್ದೀರ ಮತ್ತೆ ಮತ್ತೊಂದು ಕಡೆ ಎದ್ದೇಳುತ್ತಿದ್ದೀರಿ ಅನ್ನಿಸುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಇಲಿಯಾನ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ನಟಿ ಇಲಿಯಾನ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಟ್ವೀಟ್ ನಿಂದ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರ ಮೂಡಿದೆ ಎಂದು ಹೇಳಬಹುದು.

LEAVE A REPLY

Please enter your comment!
Please enter your name here