ಕನ್ನಡದ ಈ ಸಿನಿಮಾ ನೋಡಿದರೇ ನಿಮ್ಮ ಅಕೌಂಟ್‌ ಗೆ ಬಂದು ಬೀಳತ್ತೆ ಒಂದು ಕೋಟಿ ರೂಪಾಯಿ !

0
246

ಖ್ಯಾತ ನಿರ್ದೇಶಕ ಮಂಜು ಮಾಂಡವ್ಯ ರ ನೇತೃತ್ವದಲ್ಲಿ ಈಗ ಶ್ರೀ ಭರತ‌ ಬಾಹುಬಲಿ ಚಿತ್ರ ಈಗ ತೆರೆ ಮೇಲೆ ಬರಲು ದಿನಗಣನೆ ಆರಂಭವಾಗಿದೆ. ಈಗಾಗಲೇ ನಟ ಚಿಕ್ಕಣ್ಣ ಮುಖ್ಯ ಭೂಮಿಕೆಯ ಭರತ ಬಾಹುಬಲಿ ಚಿತ್ರ ಟ್ರೇಲರ್ ಹಾಡುಗಳ ಮೂಲಕ ಸಖತ್ ಸೌಂಡ್ ಮಾಡುತ್ತಿದೆ. ಮತ್ತೊಂದು ವಿಚಾರವೆಂದರೇ ಈ ಚಿತ್ರದಲ್ಲಿ ‘ಆಪರೇಷನ್ ಅಲಮೇಲಮ್ಮ’ ಚಿತ್ರದ ಮೂಲಕ ಚಂದನವನದಲ್ಲಿ ಸಂಚಲನ ಮೂಡಿಸಿದ್ದ ನಟ ರಿಷಿ ಈಚಿತ್ರಕ್ಕೂ ಬಟ್ಟ ಹಚ್ಚಿದ್ದಾರೆ.

 


ಹಾಗಾದರೇ ಈ ಚಿತ್ರದಲ್ಲಿ ರಿಷಿ ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಂಜು ಮಾಂಡವ್ಯ ಹಾಗೂ ರಿಷಿ ಇಬ್ಬರೂ ಸ್ನೇಹಿತರಾಗಿದ್ದು ಅದೇ ಸ್ನೇಹದಲ್ಲಿ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ರಿಷಿ ನಟಿಸಲಿದ್ದಾರೆ. ಜನರನ್ನು ಚಿತ್ರಮಂದಿರದತ್ತ ಸೆಳೆಯಲು ಇದೇ ಚಿತ್ರತಂಡ ಒಂದು ಕೋಟಿ ಬಹುಮಾನ ಘೋಷಿಸಿದ್ದಾರೆ. ಕರ್ನಾಟಕದ ಯಾವುದೇ ಚಿತ್ರಮಂದಿರದಲ್ಲಾದರೂ ‘ಭರತ ಬಾಹುಬಲಿ’ ಚಿತ್ರವನ್ನು ನೋಡಿ.

 

 

ಈ ವೇಳೆ ಚಿತ್ರತಂಡ ಸಿನಿಮಾ ಟಿಕೆಟ್ ಜೊತೆಗೆ ನೀಡಲಾಗುವ ಕೂಪನ್ ಜೊತೆಗಿಟ್ಟುಕೊಂಡರೆ ಸಾಕು. ಚಿತ್ರ ತಂಡವು ಲಕ್ಕಿ ಪಿಕ್ ನಲ್ಲಿ 20 ಜನ ಅದೃಷ್ಟವಂತರನ್ನು ಆಯ್ಕೆ ಮಾಡಿ ನಂಬರ್ ಘೋಷಿಸುತ್ತದೆ. ಬಳಿಕ ಕಾರು ಹಾಗೂ ಆಭರಣಗಳನ್ನು ಅದೃಷ್ಟವಂತ ಪ್ರೇಕ್ಷಕರಿಗೆ ನೀಡಲಾಗುತ್ತದೆ.

 


ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಟ್ರೇಲರ್ ರಿಲೀಸ್ ಮಾಡಿ ಗೆಳೆಯನ ಚಿತ್ರಕ್ಕೆ ಸಾಥ್ ನೀಡಿದರು. ಟಿ. ಶಿವಪ್ರಕಾಶ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರ ಭರ್ಜರಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು ಇದೇ ತಿಂಗಳು ಚಿತ್ರಮಂದಿರದಲ್ಲಿ ಶ್ರೀ ಭರತ ಬಾಹುಬಲಿ ತೆರೆಗಪ್ಪಳಿಸಲಿದೆ.
ಇನ್ನೇಕೆ ತಡ ಹಾಗಾದರೆ ಚಿತ್ರ ಬಿಡುಗಡೆಯಾದ ದಿನವೇ ಮೂವಿ ನೋಡಿ ಕೋಟ್ಯಾಧೀಶ್ವರರಾಗಿ.

LEAVE A REPLY

Please enter your comment!
Please enter your name here