ಒಂದು ತುಂಡು ಬೆಲ್ಲ ತಿಂದ್ರೆ ಈ ಖಾಯಿಲೆಗಳು ಕ್ಷಣದಲ್ಲಿ ಮಾಯ !

0
624

ಆಹಾರ ನಮ್ಮ ಜೀವನಶೈಲಿಯನ್ನು ಲೆಕ್ಕಾಚಾರ ಹಾಕುತ್ತದೆಯಂತೆ. ಅದರಲ್ಲೂ ನಾವು ಇತ್ತೀಚಿನ ದಿನಗಳಲ್ಲಿ ಸೀಸನಲ್ ಫ್ರೋಟ್ ಹಾಗೂ ತರಕಾರಿಗಳಿಗೆ ಮಾರು ಹೋಗುತ್ತೇವೆ. ಅಂದರೇ ಸೌತೆಕಾಯಿ ಮತ್ತು ಕಲ್ಲಂಗಡಿ ಹಣ್ಣು ಗಳನ್ನು ಬಿರು ಬಿಸಿಲಿನ ಬೇಸಿಗೆಯ ಕಾಲದಲ್ಲಿ ಸೇವಿಸುತ್ತವೆ. ಅದಕ್ಕೆ ಕಾರಣ ಇದರಲ್ಲಿ ಹೆಚ್ಚಿನ ನೀರಿನ ಮಟ್ಟವಿದ್ದು ಅದು ನಮ್ಮ ದೇಹವನ್ನು ತಂಪಾಗಿಸುತ್ತದೆ. ಅಂತಹದರಲ್ಲಿ ಚಳಿಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಸಮವೆನಿಸುವ ಬೆಲ್ಲವೂ ಒಂದು.

 

ಚಳಿಗಾಗಲದಲ್ಲಿ ಬೆಲ್ಲ ಒಂದು ಉಷ್ಣ ಸಂಬಂಧಿ ಪದಾರ್ಥದಂತೆ ಕೆಲಸಮಾಡುತ್ತದೆ. ಅಂದರೆ ಮಾನವನ ದೇಹದಲ್ಲಿ ಬೆಲ್ಲವೂ ಬಿಸಿ ಉತ್ಪತ್ತಿ ಮಾಡುತ್ತದೆ. ಇದರಲ್ಲಿ ಕ್ಯಾಲೊರಿಗಳ ಅಂಶ ಜೋರಾಗಿದ್ದು ನಮ್ಮ ದೇಹವನ್ನು ಬಿಸಿಯಾಗಿಡುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನು ಸಹ ನೀಡುತ್ತದೆ. ನಮಗೆ ಶೀತ ಆದ ವೇಳೆ ಸ್ವಲ್ಪ ಬೆಲ್ಲ ತಿನ್ನುತ್ತಾ ಬಂದರೆ ಶೀತ, ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳು ಬಹಳ ಬೇಗನೆ ಕಳೆದುಹೋಗುತ್ತದೆ.

 

ಬೆಲ್ಲದ ಸೇವನೆಯಿಂದ ದೇಹದ ಉಷ್ಣಾಂಶ ಏರಿಕೆಯಾಗಿ ರೋಗಾಣುಗಳ ಬೆಳವಣಿಗೆಯನ್ನು ತಡೆಯುತ್ತದೆ ಬೆಲ್ಲದಲ್ಲಿ ಕಬ್ಬಿಣ, ಮೆಗ್ನೀಷಿಯಂ, ಜಿಂಕ್, ಸೆಲೆನಿಯಮ್ ಮತ್ತು ಪೊಟ್ಯಾಸಿಯಂ ಅಂಶಗಳು ಅಡಗಿದ್ದು, ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ದೇಹಕ್ಕೆ ಯಾವುದೇ ಬಗೆಯ ಸೋಂಕು ಉಂಟಾಗುವುದನ್ನು ದೂರ ಮಾಡುತ್ತದೆ.

 

ಇನ್ನು ಗಂಟಲು ನೋವು, ಗಂಟಲು ಕೆರೆತ, ಒಣ ಕೆಮ್ಮು ಇತ್ಯಾದಿ ಸಮಸ್ಯೆಗಳನ್ನು ನಿಧಾನಗತಿಯಲ್ಲಿ ಮಾಡಿ ನಿವಾರಣೆ ಮಾಡುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಸಂಖ್ಯೆಯನ್ನು ಕಾಯ್ದುಕೊಳ್ಳುವ ಮೂಲಕ ರಕ್ತದಲ್ಲಿ ಅನಗತ್ಯ ವಸ್ತುಗಳನ್ನು ತೆಗೆದು ಹಾಕಿ ರಕ್ತವನ್ನು ಶುದ್ಧೀಕರಣ ಮಾಡುತ್ತದೆ. ಇದರಿಂದ ರಕ್ತ ಸಂಚಾರದಲ್ಲಿ ಯಾವುದೇ ಬಗೆಯ ರೋಗಕಾರಕ ಸೂಕ್ಷ್ಮಾಣುಗಳು ಸುಳಿಯದಂತೆ ಎಚ್ಚರಿಕೆ ವಹಿಸುತ್ತದೆ.ಶ್ವಾಸನಾಳ, ಹೊಟ್ಟೆಯ ಭಾಗ, ಕರುಳಿನ ಭಾಗ, ಶ್ವಾಸಕೋಶ ಮತ್ತು ಅನ್ನನಾಳ ಗಳಿಂದ ಅನಗತ್ಯ ಕಣಗಳನ್ನು ತೆಗೆದು ಹಾಕುವುದರ ಮೂಲಕ ಮನುಷ್ಯನ ದೇಹ ಯಾವುದೇ ಬಗೆಯ ದುಷ್ಟ ಕಾಯಿಲೆಗಳಿಗೆ ಒಳಗಾಗದಂತೆ ಬೆಲ್ಲವೂ ಕಾಪಾಡುತ್ತದೆ.

ಹೀಗೆ ಬೆಲ್ಲ ಕೇವಲ ಅಡುಗೆಗೆ ಮಾತ್ರವಲ್ಲದೇ ನಮ್ಮ ದೇಹದ ಹಲವು ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುವುದರಲ್ಲಿ ಅನುಮಾನವಿಲ್ಲ.

LEAVE A REPLY

Please enter your comment!
Please enter your name here