ಈ ದೇವಾಲಯದ ಹೆಸರು ಕೇಳಿದರೆ ಪಾಕಿಸ್ತಾನ ಗಡ ಗಡ!

0
128

ನಮ್ಮ ದೇಶದಲ್ಲಿ ಎಷ್ಟೆಲ್ಲ ಮಂದಿರಗಳಿವೆ.ಆದರೆ ಪಾಕಿಸ್ತಾನವೆ ಹೆದುರುವ ಒಂದು ದೇವಾಲಯ ನಮ್ಮ ದೇಶದಲ್ಲಿದೆ. 1965 ರಲ್ಲಿ ಭಾರತ-ಪಾಕಿಸ್ತಾನ ಯುದ್ದದ ನಂತರವಂತು ಈ ಮಂದಿರವು ದೇಶ ವಿದೇಶಗಳಲ್ಲಿ ತನ್ನ ಚಮತ್ಕಾರದಿಂದಾಗಿ ಪ್ರಸಿದ್ದಿ ಹೊಂದಿದೆ. ಪಾಕಿಸ್ತಾನ ಇಂದಿಗೂ ಈ ದೇವಾಸ್ತಾನದ ಹೆಸರು ಕೇಳಿದರೆ ಹೆದರುತ್ತಂತೆ. ಈ ವಿಶೇಷ ಮಂದಿರ ಇರುವುದು ರಾಜಸ್ತಾನದಲ್ಲಿ.ರಾಜಸ್ತಾನದ ಜೈನಲ್‍ಮೆರ್ ನಿಂದ 130 ಕಿ.ಮಿ ದೂರದಲ್ಲಿರುವ `ತಾನೋಟ್ ಮಾತಾ’ ಮಂದಿರವು 1200 ವರ್ಷಗಳಷ್ಟು ಹಳೆಯದ್ದು. ಪಾಕಿಸ್ತಾನ ಸೇನೆಯು ಎಸೆದ ಮೂರು ಸಾವಿರ ಬಾಂಬ್‍ಗಳು ದೇವಾಲಯವನ್ನು ಏನು ಮಾಡೋಕು ಆಗಲಿಲ್ಲವಂತೆ. ಅದರಲ್ಲೂ 450 ಬಾಂಬ್‍ಗಳು ಹೊಡೆದೆ ಇಲ್ಲವಂತೆ. ಈ ಬಾಂಬ್‍ಗಳು ಇಂದಿಗೂ ದೇವಸ್ತಾನದ ಬಳಿಯ ಸಂಗ್ರಹಾಲಯದಲ್ಲಿ ಪ್ರವಾಸಿಗರಿಗೆ ಕಾಣಿಸುವಂತೆ ಇಟ್ಟಿದ್ದಾರೆ.

1965 ರ ಯುದ್ದದ ನಂತರ ಈ ಮಂದಿರದ ಜವಬ್ದಾರಿಯನ್ನು ಸೀಮಾ ಸುರಷಾ ಪಡೆ ವಹಿಸಿಕೊಂಡಿದೆ. ತಾನೋಟ್ ಮಾತಾ ಮಂದಿರದಲ್ಲಿ ಪ್ರತಿ ವರ್ಷ ನವರಾತ್ರಿಯಂದು ಎರಡು ಬಾರಿ ಉತ್ಸವ ನಡೆಯುತ್ತದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತದೆ. ತಾನೋಟ್ ಮಾತಾ ಇಂಗ್ಲಾಜ್ ಮಾತೆಯ ರೂಪವಾಗಿದ್ದಾಳೆ.ಇದು ಬಹಳ ಸಕ್ತಿಶಾಲು ದೇವಿ. ಬೇಡಿಕೆಯನ್ನ ಇಡೇರಿಸುತ್ತಾಳೆ. ಆಕೆಯ ಆಶಿರ್ವಾದ ಯಾವಾಗಲು ಭಕ್ತರ ತಲೆಯ ಮೇಲೆ ಇರುತ್ತದೆ.ಒಂದು ವಿಶೇಷ ಶಕ್ತಿ ವೈರಿಗಳಲ್ಲಿ ಸೆಣಸಡಲು ಶಕ್ತಿ ನೀಡುತ್ತದೆ ಎಂಬುದು ಸೀಮಾ ಸುರಾಕ್ಷಾ ಸೈನಿಕರ ಅಭಿಪ್ರಾಯ.ಈ ದೇವಸ್ತಾನಕ್ಕೆ ಬರುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಊಟ ಹಾಗೂ ವಿಶ್ರಾಂತಿ ಗೃಹ ಸಹ ಇದೆ. ವಿಶ್ರಾಮ ಗೃಹದಲ್ಲಿ ತಂಗಲು ಬರುವರರ ಬಳಿ ಗುರುತಿನ ಚೀಟಿ ಇದ್ದರೆ ಮಾತ್ರ ತಂಗಲು ಬಿಡುತ್ತಾರೆ..

LEAVE A REPLY

Please enter your comment!
Please enter your name here