ಮರಾಠ ಪ್ರಾಧಿಕಾರ ರಚನೆ ನಿರ್ಧಾರ ಹಿಂಪಡೆಯದಿದ್ದರೆ ಡಿಸೆಂಬರ್ ೫ ಕ್ಕೆ ರಾಜ್ಯ ಬಂದ್ ಗೆ ಕರೆ!

0
82

ಬೆಂಗಳೂರು: ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ ೫ ರಂದು ಕರ್ನಾಟಕ ಬಂದ್ ಮಾಡಲು ಚಿಂತನೆ ನಡೆಸಿದೆ.
ಮರಾಠ ಪ್ರಾಧಿಕಾರ ರಚನೆ ಹಿಂಪಡೆಯಲು ಒತ್ತಾಯ ಮಾಡಿದ್ದು, ನವೆಂಬರ್ 27 ರವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ನ.27 ರ ಒಳಗೆ ರಾಜ್ಯ ಸರ್ಕಾರ ನಿರ್ಧಾರ ಹಿಂಪಡೆಯದಿದ್ದರೆ‌ ಡಿಸೆಂಬರ್ ೫ ಕ್ಕೆ ಕರ್ನಾಟಕ ಬಂದ್ ಮಾಡಲಾಗುತ್ತದೆ ಎಂದು ಕನ್ನಡಪರ ಸಂಘಟನೆಗಳು ಕರೆ ನೀಡಿದ್ದಾರೆ.

ಮರಾಠ ಪ್ರಾಧಿಕಾರ ರಚನೆ ವಿರುದ್ಧ ಇಂದು ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಸಿಎಂ ರಾಜೀನಾಮೆ ನೀಡಿ ಇಲ್ಲ ಮರಾಠ ಪ್ರಾಧಿಕಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ವಾಹನಗಳ ತಡೆ ನಡೆಸಿದ ವಾಟಾಳ್ ನಾಗರಾಜ್ ಹಾಗೂ ಸಾ ರ ಗೋವಿಂದ್ ನೇತೃತ್ವದ ಕನ್ನಡ ಸಂಘಟನೆಗಳು ಬಿ.ಎಸ್‌ ಯಡಿಯೂರಪ್ಪ ಪ್ರತಿಕೃತಿ ದಹನ ಮಾಡಿದರು. ಗುರುವಾರದಂದು ಎಲ್ಲಾ ಕನ್ನಡಪರ ಸಂಘಟನೆಗಳ ಅಧ್ಯಕ್ಷರ ಸಭೆ ನೆಡೆಸಲು ತೀರ್ಮಾನಿಸಿದ್ದಾರೆ.

ಇನ್ನು ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿರುವ , ಓಲಾ ಉಬರ್ ಸಂಘದ ಅಧ್ಯಕ್ಷ, ತನ್ವೀರ್ ಈ ವರೆಗೆ ಚಾಲಕರ ಕ್ಷೇಮಕ್ಕಾಗಿ ಪ್ರಾಧಿಕಾರ ಮಾಡಿಲ್ಲ‌. ಈಗ ಮರಾಠ ಪ್ರಾಧಿಕಾರ ಅಂತಾರೆ. ಈ ಬಗ್ಗೆ ವಾಟಾಳ್ ನಾಗರಾಜ್ ಸರ್ಕಾರದ ಜೊತೆ ಮಾತನಾಡಿದ್ದಾರೆ. ವಾಪಾಸು ಪಡೆಯದಿದ್ದರೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕನ್ನಡಕ್ಕಾಗಿ ನಮ್ಮ ಬೆಂಬಲ ಸದಾ ಇರುತ್ತದೆ. ಆದರೆ ಬಂದ್ ವಿಚಾರ ಎಲ್ಲ ಚಾಲಕರೊಂದಿಗೆ ಸಭೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.

ಇನ್ನು ಕರ್ನಾಟಕ ಬಂದ್ ವಿಚಾರವಾಗಿ ಕನ್ನಡಪರ ಸಘಟನೆ ಮುಖಂಡ ಪ್ರವೀಣ್ ಶೆಟ್ಟಿ ಮಾತನಾಡಿ, ಮರಾಠ ಪ್ರಾಧಿಕಾರ ರಚನೆ ಕೆಲಸವನ್ನ ತೀವ್ರ ವಿರೋಧ ಮಾಡುತ್ತೇವೆ. ರಾಜ್ಯದಲ್ಲಿ ಕನ್ನಡಿಗರಿಗೇ ಸರಿಯಾದ ವ್ಯವಸ್ಥೆ ಇಲ್ಲ. ಈ ನಡುವೆ ರಾಜ್ಯ ಸರ್ಕಾರ ಐವತ್ತು ಕೋಟಿ ರೂ ಬಿಡುಗಡೆ ಮಾಡಿ ಓಟಿನ ರಾಜಕಾರಣ ಮಾಡುತ್ತಿದೆ. ಅಲೆಮಾರಿ ಜನಾಂಗ, ಹಿಂದುಳಿದ ಜನಾಂಗದವರ ಪರಿಸ್ಥಿತಿ ಕಷ್ಟ ಇದ್ದು, ಅವರ ಬಗ್ಗೆ ಸರ್ಕಾರ ಗಮನಕೊಡಲಿ. ಈ ಹೋರಾಟ ತೀವ್ರಗೊಳ್ಳಲಿದೆ . ಹೋರಾಟಕ್ಕೆ ಸದಾ ಬೆಂಬಲ ನಮ್ಮದು ಇದ್ದೇ ಇದೆ. ಆದರೆ ವಾಟಾಳ್ ನಾಗಾರಾಜ್ ಬಂದ್ ಗೆ ಕರೆ ನೀಡಿದ್ದಾರೆ. ಈ ಸಂಬಂಧ ಪದಾದಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಬೀದಿ ಬದಿ ವ್ಯಾಪಾರಿ ಸಂಘಟನೆಯ ರಂಗಸ್ವಾಮಿ ಮಾತನಾಡಿ, ಕನ್ನಡಿಗರಿಗಾಗಿ ಕೇವಲ ಐದು ಕೋಟಿ, ಮರಾಠ ಪ್ರಾಧಿಕಾರಕ್ಕಾಗಿ ಐವತ್ತು ಕೋಟಿ ರೂ ಇಟ್ಟಿರುವುದು ಯಾವ ನ್ಯಾಯ. ಇದು ಕೇವಲ ಓಟಿಗಾಗಿ ಮಾಡುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಬಾರದು. ನಮ್ಮ ಕಡೆಯಿಂದ ಬಂದ್ ಸಂಪೂರ್ಣ ಯಶಸ್ವಿ ಮಾಡಲು ಸಿದ್ಧತೆ ಮಾಡುತ್ತಿದ್ದೇವೆ. ನಮ್ಮ ಬೆಂಬಲ ಇದೆ ಎಂದರು.

ಹೋಟೆಲ್ ಉದ್ಯಮದ ಮಧುಕರ್ ಶೆಟ್ಟಿ ಮಾತನಾಡಿ, ಕರ್ನಾಟಕ ಬಂದ್ ಗೆ ಈಗ ಕರೆ ನೀಡಲಾಗಿದೆ. ಆದರೆ ಧರ್ಮದ ಹೆಸರಿನಲ್ಲಿ ಯಾವುದೇ ಹೇಳಿಕೆಯನ್ನು ಈಗ ನೀಡುವುದಿಲ್ಲ. ಕರ್ನಾಟಕ ರಾಜ್ಯ ಪ್ರದೇಶ ಹೋಟೆಲ್ ಮತ್ತು ಉಪಹಾರ ಮಂದಿರದ ಸಭೆ ಕರೆದು ಕರ್ನಾಟಕ ಬಂದ್ ಗೆ ಬೆಂಬಲ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದರು.

ಮಕ್ಕಳ ಜ್ಞಾಪಕ ಶಕ್ತಿ, ಏಕಾಗ್ರತೆ, ಚುರುಕುತನ ಮತ್ತು ಕೌಶಲ್ಯ ಅಭಿವೃದ್ಧಿ ವೃದ್ಧಿಸಲು ಆಯುರ್ವೇದದ ಉತ್ಪನ್ನವಾದ ‘ಬ್ರಹ್ಮ ಶಂಕರ ‘ ಪರಿಹಾರ ಒದಗಿಸುತ್ತದೆ . ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನುರಿತ ಮತ್ತು ಅನುಭವಿ ಆಯುರ್ವೇದದ ತಜ್ಞ ವೈದ್ಯರ ಸಹಾಯದಿಂದ ನಿರಂತರ ಸಂಶೋಧನೆಗೆ ಪ್ರೋತ್ಸಾಹ ನೀಡಿದ ಪರಿಣಾಮವಾಗಿ ನೈಸರ್ಗಿಕವಾಗಿ ಬ್ರಹ್ಮ ಶಂಕರ ರೂಪುಗೊಂಡಿದೆ.

ಬ್ರಹ್ಮ ಶಂಕರದಲ್ಲಿ ಪ್ರಧಾನವಾಗಿ ಬ್ರಾಹ್ಮೀ ಎಲೆ, ಮಂಡೂಕ ಪರಿಣಿ,ಶಂಖ ಪುಷ್ಟಿ, ಅಶ್ವಗಂಧ,ಮಾಲ್ಕಂಗನಿ,ಜಟಮಾನಸಿ,ತಗರ್ ಅಥವಾ ಸುಗಂಧ ಬಾಲಾ, ಅಮೃತ ಬಳ್ಳಿ,ಸಂಜೆ,ವೀಟ್ ಜರ್ಮ್ ಅಥವಾ ಗೋಧಿ ಭ್ರೂಣವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಸಂಪೂರ್ಣ ನೈಸರ್ಗಿಕವಾಗಿ ಬ್ರಹ್ಮಶಂಕರದಲ್ಲಿ ಸೇರಿಸಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿದೆ.ಬ್ರಾಹ್ಮೀ ಎಂದರೆ ಸರಸ್ವತಿ . ಮಕ್ಕಳು ಬ್ರಾಹ್ಮೀ ಮುಹೂರ್ತದಲ್ಲಿ ಓದಿದರೆ ಮರೆಯುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.ಮಕ್ಕಳ ದೇಹ ಬಹಳ ಸೂಕ್ಷ್ಮವಾಗಿದ್ದು ಬಹುಬೇಗ ಜ್ವರ,ಕೆಮ್ಮು,ಸೋಂಕುಗಳಿಗೆ ತುತ್ತಾಗುತ್ತಾರೆ.ಬ್ರಹ್ಮಶಂಕರ ನಿಮ್ಮ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅವರನ್ನು ಸಧೃಡ ರನ್ನಾಗಿ ಮಾಡುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.

ಒಂದು ಆರೋಗ್ಯವಂತ, ಜ್ಞಾನವಂತ , ಬುದ್ಧಿವಂತ ಸಮಾಜಕ್ಕಾಗಿ ‘ಬ್ರಹ್ಮ ಶಂಕರ ‘ ನಿಮ್ಮ ಮಕ್ಕಳಿಗೆ ಅತ್ಯವಶ್ಯಕವಾಗಿದೆ

BUY NOW

LEAVE A REPLY

Please enter your comment!
Please enter your name here