ಇದೇ ಡಿಸೆಂಬರ್ ನಲ್ಲಿ ಮೊಬೈಲ್ ಸಿಮ್ ಗಳು ಹೊಸ – ಹೊಸ ಪ್ಲಾನ್ ಗಳನ್ನು ದರ ಏರಿಕೆ ಮಾಡಿ ನೀಡಿದೆ. ಏತನ್ಮಧ್ಯೆ ಬಿಎಸ್ ಎನ್ ಎಲ್ ಸಂಸ್ಥೆ ಇವರ ಹೊಡೆತಕ್ಕೆ ಸಿಲುಕಿ ನಷ್ಟದಲ್ಲಿ ಸಿಲುಕಿದೆ. ಬಹುದಿನಗಳ ಬಳಿಕ ಬಿಎಸ್ ಎನ್ ಎಲ್ ತನ್ನ 4G ಸೇವೆಯನ್ನು ಕೊನೆಗೂ ಆರಂಭಿಸಿದೆ. ಅಲ್ಲದೇ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ.
ಮಿಕ್ಕೆಲ್ಲಾ ಸಿಮ್ ಗಳು ತಮ್ಮ 4G ಸೇವೆ ಪ್ರಾರಂಭಿಸಿ ಒಂದು ವರ್ಷಗಳು ಉರುಳಿದರೂ ಬಿಎಸ್ಎನ್ಎಲ್ ಸಂಸ್ಥೆ ಮಾತ್ರ 3Gಯಲ್ಲೇ ಉಳಿದಿತ್ತು. ಇದೀಗ 4G ಸೇವೆಯ ಪ್ರಾರಂಭದ ಜೊತೆಗೆ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಒಂದು ಮಾಹಿತಿಗಳ ಪ್ರಕಾರ 2020ರ ಮಾರ್ಚ್ ವೇಳೆಗೆ ದೇಶದ ಎಲ್ಲಾ ಭಾಗಗಳಲ್ಲೂ 4G ಸೇವೆಗೆ ಬರಲಿದೆ. ಅಂದರೆ ಡಿಸೆಂಬರ್ ಅಂತ್ಯದ ವೇಳೆ ಎಲ್ಲಾ ಪ್ರದೇಶಗಳಿಗೆ ಈ ಸೇವೆ ದೊರಕಲಿದೆ.
4G ಸೇವೆಗಾಗಿ ಪ್ರಿಪೇಯ್ಡ್ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. ಆರಂಭಿಕ 4G ಪ್ಲಾನ್ ಬೆಲೆಯು 96 ರೂ. ಆಗಿದ್ದು, ಈ ಪ್ಲಾನ್ನಲ್ಲಿ ದೈನಂದಿನ ಬಳಕೆಗಾಗಿ 10ಜಿಬಿ ಡೇಟಾ ನೀಡುತ್ತಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಮತ್ತೊಂದು 236 ರೂ. ಬೆಲೆಯ ಪ್ಲಾನ್ ಬಿಡುಗಡೆ ಮಾಡಿದ್ದು, 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಗ್ರಾಹಕರು ಇವೆರಡು ಪ್ಲಾನ್ಗಳ ನ್ನು ಒಮ್ಮೆ ಅಳವಡಿಸಿದರೆ ಪೂರ್ಣ ವ್ಯಾಲಿಡಿಟಿ ಜೊತೆಗೆ 10GB ಡೇಟಾ ಸಿಗಲಿದ್ದು ಗ್ರಾಹಕರಿಗೆ ಇದರಿಂದ ಬಂಪರ್ ಆಫರ್ ಸಿಗಲಿದೆ.