ಸರ್ಕಾರ ನೀಡುವ 2,000-5,000 ಪರಿಹಾರ ಬೇಡವೆನ್ನಿ.!‘ನನ್ನ ಜಮೀನು ಮಾರಿ ಪರಿಹಾರ ಕೊಡುತ್ತೇನೆ. ಸರ್ಕಾರ ನೀಡುವ 2000, 5000 ರೂಪಾಯಿ ಪರಿಹಾರ ಮೊತ್ತವನ್ನು ಬೇಡವೆನ್ನಿ’ ಎಂದು ಬಿಜೆಪಿ ಶಾಸಕ ಅಮೃತ ದೇಸಾಯಿ ನೀಡಿರುವ ಹೇಳಿಕೆ ನೀಡಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಹೇಳಿಕೆಯನ್ನು ಧಾರವಾಡದ ಕರಡಿಗುಡ್ಡದಲ್ಲಿ ಶಾಸಕರು ನೀಡಿದ್ದು, ಸರ್ಕಾರವೇನಾದರೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡದಿದ್ದರೆ ನಾನೇ ನನ್ನ ಜಮೀನು ಮಾರಿ ನಿಮಗೆ ಪರಿಹಾರ ನೀಡುತ್ತೇನೆ. ಎರಡೇ ದಿನಗಳಲ್ಲಿ ಪರಿಹಾರದ ಹಣ ನಿಮ್ಮ ಮನೆಗೆ ತಲುಪುತ್ತದೆ. ಯಾರೂ ಸಹ ಧೃತಿಗೆಡಬೇಡಿ, ನಿಮ್ಮೊಂದಿಗೆ ನಾವಿದ್ದೇನೆ. ನಿಮ್ಮ ಕ್ಷೇತ್ರದ ಶಾಸಕನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಭರವಸೆ ನೀಡಿದ್ದಾರೆ.