ನಾನು ಯಾವುದನ್ನೂ ಲೆಕ್ಕಿಸದೆ, ಕನ್ನಡಿಗರನ್ನು ಪ್ರೀತಿಸುತ್ತೇನೆ ; ರಶ್ಮಿಕಾ ಮಂದಣ್ಣ !

0
220

ಸಿನಿಮಾಗಿಂತ ಬೇರೆ ವಿಷಯದಲ್ಲೆ, ಕಿರಿಕ್ ಮಾಡಿಕೊಳ್ಳುತ್ತಿದ್ದ ರಷ್ಮಿಕಾ ಮಂದಣ್ಣ, ಈಗೊಂದು ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದಾರೆ !

ತಮಿಳು ವಾಹಿನಿಯಲ್ಲಿ ತಮಿಳಿನಲ್ಲಿ ಮಾತನಾಡುತ್ತಾ, ತನಗೆ ಕನ್ನಡ ಮಾತನಾಡುವುದು ಕಷ್ಟಎಂದಿದ್ದಕ್ಕೆ ಕನ್ನಡಪರ ಸಂಘಟನೆಗಳೂ ಆಕ್ರೋಶ ವ್ಯಕ್ತಪಡಿಸಿದ್ದರು.. ಹಾಗೆಯೆ ಕನ್ನಡ ಚಿತ್ರರಂಗದ ಆಶೀರ್ವಾದ ಪಡೆದು ಬೆಳೆದು ಪರಭಾಷೆಗೆ ಹೋಗಿ ಅಲ್ಲಿಯು ಬೆಳೆದ ಅನೇಕ ಸ್ನೇಹಿತರಿದ್ದಾರೆ! ಅವರೆಲ್ಲ ಇಂದು ಕನ್ನಡಲ್ಲೇ ಮಾತಾಡಿ ಕನ್ನಡವನ್ನ ಅಪಾರ ಗೌರವಿಸುತ್ತಾರೆ. ಅದು ಅವರ ಕನ್ನಡದ ಸಂಸ್ಕೃತಿ! ಆ ಗುಣವಿರದ ಇಂದಿನ ಪೀಳಿಗೆಯ ನಡಾವಳಿ ದುರಾದೃಷ್ಟಕರ! ಕನ್ನಡ ಪ್ರೇಕ್ಷಕನ ಚಪ್ಪಾಳೆ ಬಿದ್ದೇ ನಿಮ್ಮ ಬೆಳವಣಿಗೆ ಆದದ್ದು ನೆನಪಿರಲಿ’ ಎಂದು ಜಗ್ಗೇಶ್‌ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು..

ಇಷ್ಟು ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲೂ ಈ ಕಿರಿಕ್ ರಾಣಿ, ಕಿರಿಕ್ ಮಾಡಿಕೊಂಡಿದ್ದಾಳೆ!

ರಶ್ಮಿಕಾ ಪಾದಾರ್ಪಣೆ ಮಾಡುತ್ತಿರುವ ತಮಿಳು ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಮಾಡಿರಲಿಲ್ಲ.. ಆದರೆ ಚಿತ್ರತಂಡ ಸುಲ್ತಾನ್ ಎಂದು ಹೆಸರಿಟ್ಟಿತ್ತು.. ಈ ಟೈಟಲ್ ಅನ್ನು ಎಲ್ಲೂ ರಿವಿಲ್ ಮಾಡಬಾರದು ಎಂದು ನಿರ್ದೇಶಕರು ಚಿತ್ರತಂಡದವರಿಗೆ ಹೇಳಿದ್ದರು ! ಆದರೆ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಾಲ್ಕನೆ ದಿನದ ‘ಸುಲ್ತಾನ್’ ಶೂಟಿಂಗ್, ನನ್ನ ಲುಕ್ ಹೇಗಿದೆ ಎನ್ನುವುದು ನಿಮಗೆ ಕಾಣಿಸುವುದಿಲ್ಲ”ಎಂದು ಒಂದು ಫೋಟೋವನ್ನು ಶೇರ್ ಮಾಡಿದ್ದಾರೆ ! ಇದನ್ನು ಕಂಡ ಚಿತ್ರತಂಡ ರಶ್ಮಿಕಾ ವಿರುದ್ಧ ಗರಂ ಆಗಿದ್ದಾರೆ.. ಹಾಗೆಯೇ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರಂತೆ!

ಈ ಎಲ್ಲಾ ವಿಚಾರಗಳಿಂದಲೂ ಬೇಸತ್ತಿದ್ದ ರಶ್ಮಿಕಾ ಮಂದಣ್ಣ, ಈಗ ಕನ್ನಡಿಗರ ಮೇಲೆ ಪ್ರೀತಿ ತೋರಿಸಿದ್ದಾರೆ !
ನೆನ್ನೆ ಸೋಷಿಯಲ್​ ಮೀಡಿಯಾ ಇನ್​​ಸ್ಟಾಗ್ರಾಮ್​ ಮೂಲಕ ರಶ್ಮಿಕಾ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸಾಕಷ್ಟು ಅಭಿಮಾನಿಗಳು ರಶ್ಮಿಕಾ ಕುರಿತು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದ್ದಾರೆ. ದೇವರಕೊಂಡ ಜೊತೆಗಿನ ಫ್ರೆಂಡ್​ಶಿಪ್​, ಬ್ಯೂಟಿ, ಹೇರ್ ಸ್ಟೈಲ್​ ಮುಂತಾದ ಪ್ರಶ್ನೆಗಳಿವೆ. ಇದರ ನಡುವೆ ಕನ್ನಡಿಗರೊಬ್ಬರು ‘ಕನ್ನಡದ ಅಭಿಮಾನಿಗಳ ಕುರಿತು ಒಂದು ಪದದಲ್ಲಿ ಬಣ್ಣಿಸುವಂತೆ ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ‘ಕನ್ನಡಿಗರು ಏನೇ ಅಂದ್ರು, ನಾನು ಅವ್ರನ್ನ ತುಂಬಾ ಪ್ರೀತಿಸ್ತೀನಿ’ ಅಂತಾ ತಿಳಿಸಿದ್ದಾರೆ. ಈ ಮೂಲಕ ನಾನು ಕನ್ನಡತಿ, ಕನ್ನಡಿಗರು ಏನೇ ಅಂದ್ರು ನಾನು ಬೇಜಾರು ಮಾಡಿಕೊಳ್ಳಲ್ಲ ಅಂದಿದ್ದಾರೆ.

LEAVE A REPLY

Please enter your comment!
Please enter your name here