ನನ್ನ ಜೀವನದಲ್ಲಿ ಮುಂದೆಂದು ಸಾಯುವ ಯೋಚನೆ ಮಾಡುವುದಿಲ್ಲ..!

0
109

ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ ಅಂದರೆ ತಪ್ಪಾಗಲಾರದು. ಜೀವನದಲ್ಲಿ ಜಿಗುಪ್ಸೆ ಅರಿತು ಸಾವಿಗೆ ತುತ್ತಾಗಬೇಕೆಂದು ನಿರ್ಧಾರ ಮಾಡುವವರು ಹೆಚ್ಚು ಯುವಕ, ಯುವತಿಯರು ಎಂದೇ ಹೇಳಬಹುದು. ಆದರೆ ಮಂಡ್ಯದಲ್ಲಿ ಒಂದು ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಹೌದು, ಯುವಕ ಅಥವಾ ಯುವತಿಯರು ಆತ್ಮಹತ್ಯೆಗೆ ಯತ್ನಿಸಿದರೆ ಅದಕ್ಕೆ ಪ್ರಮುಖ ಕಾರಣ ಪ್ರೀತಿ, ಮದುವೆ ಅಥವಾ ಬೇರೆ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಯೋಚನೆಗೆ ಬರುತ್ತಾರೆಂದು ಹೇಳಬಹುದು. ಆದರೆ ಮಂಡ್ಯದ ೭೩ ವರ್ಷದ ವೃದ್ಧೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ದೃಢ ನಿರ್ಧಾರದಿಂದ ನಾಲೆಯ ಬಳಿ ಬಂದಿದ್ದಾರೆ.!

ಕೆಲ ಸಮಯ ನಾಲೆಯ ಬಳಿ ಕುಳಿತಿದ್ದ ಅಜ್ಜಿ. ನಾಲೆಗೆ ಬಿದ್ದು ಸಾವನ್ನಪ್ಪುವ ಯೋಚನೆಯಲ್ಲಿದ್ದರು ಎಂಬ ವರದಿಗಳು ಕೇಳಿ ಬಂದಿದೆ. ಸಾವು ಎಂದರೆ ಯಾರಿಗಾದರೂ ಭಯ ಹುಟ್ಟಿಸುವಂತ ಕ್ಷಣ.! ಆತ್ಮಹತ್ಯೆ ಎಂಬ ಯೋಚನೆ ಮಾಡುವುದೇ ಮೊದಲ ಕೆಟ್ಟ ಆಲೋಚನೆ! ಅದರಲ್ಲೂ ಸಾಯಲೇಬೇಕು ಎಂದು ಹೋಗಿ ಅನಿವಾರ್ಯವಾಗಿ ಬದುಕುಳಿದರೆ ಮತ್ತೆ ಸಾಯುವ ನಿರ್ಧಾರವನ್ನು ತ್ಯಜಿಸಿ ಬಿಡುತ್ತಾರೆ ಎಂಬುದು ಖಂಡಿತ.! ಅದೇ ರೀತಿಯಲ್ಲಿ ಅಜ್ಜಿ ಕೂಡ ಸಾವಿನಿಂದ ಪಾರಾಗಿದ್ದಾರೆ. ನಾಲೆಗೆ ಹಾರಿ ಪ್ರಾಣ ಕಳೆದುಕೊಳ್ಳುವ ಯೋಚನೆ ಮಾಡಿದ್ದ ವಯಸ್ಸಾದ ವೃದ್ಧೆ ನಾಲೆಯ ಬಳಿ ನಿಂತಾಗ ನೀರಿನ ಪ್ರಮಾಣ ಹೆಚ್ಚಾಗಿ, ಯಾರೂ ವ್ಯಕ್ತಿ ಕೊಚ್ಚಿ ಹೋಗುತ್ತಿರುವುದನ್ನು ಪ್ರತ್ಯಕ್ಷವಾಗಿ! ಕಂಡ ವೃದ್ದೆ ಆ ದೃಶ್ಯ ನೋಡಿ ಕಿರುಚಾಡಿ ಅಲ್ಲಿಂದ ದೂರ ಸರಿದಿದ್ದಾರೆ.

ಬಳಿಕ ಸ್ಥಳಕ್ಕೆ ಧಾವಿಸಿದ ಮಂಡ್ಯದ ಪೊಲೀಸರು ವೃದ್ಧೆಯನ್ನು ಏನಾಯಿತೆಂದು ಕೇಳಿದಾಗ.? ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಬಂದಿದ್ದೆ, ಆದರೆ ನಾಲೆಯಲ್ಲಿ ಯಾರೋ ಕೊಚ್ಚಿಕೊಂಡು ಹೋಗಿದ್ದನ್ನು ನಾನು ಪ್ರತ್ಯಕ್ಷವಾಗಿ ನೋಡಿದೆ. ನಾನು ಸಾಯುವುದಿಲ್ಲ, ನನ್ನ ಜೀವನದಲ್ಲಿ ಮುಂದೆಂದು ಸಾಯುವ ಯೋಚನೆ ಮಾಡುವುದಿಲ್ಲ.! ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಮಂಡ್ಯ ಪೊಲೀಸರು ಈ ಘಟನೆಯನ್ನು ಆಲಿಸಿ ವೃದ್ಧೆಯನ್ನು ಅವರ ಮನೆಗೆ ಕ್ಷೇಮವಾಗಿ ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here