ಮೋದಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳಿಂದಾಗಿ ಪಾಪಿ ಪಾಕಿಸ್ತಾನ ಅಕ್ಷರಶಃ ನಲುಗಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ಅರ್ಟಿಕಲ್ 370ನ್ನು ರದ್ದು ಮಾಡುವ ಮೂಲಕ ಜಮ್ಮು-ಕಾಶ್ಮೀರವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆದಿದೆ. ಯಾವಾಗ ಕೇಂದ್ರ ಸರ್ಕಾರ ಕಾಶ್ಮೀರದ ಮೇಲೆ ಬಿಗಿ ಹಿಡಿತ ಸಾಧಿಸಿತೊ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇಂಗು ತಿಂದ ಮಂಗನಂತಾಗಿದ್ದಾರೆ.
ಮೋದಿ ಮತ್ತೆ ಏನು ಮಾಡಿ ಬಿಡ್ತಾರೋ? ಅಮಿತ್ ಶಾ ಅದೆಂಥ ಸರ್ಪ್ರೈಸ್ ಕೊಡ್ತಾರೋ? ಅನ್ನೋ ಆತಂಕ ಇಮ್ರಾನ್ ಮನದಲ್ಲಿ ಮನೆ ಮಾಡುತ್ತಿರುವಂತೆ ಕಾಣುತ್ತಿದೆ. ಇನ್ನು ಭಾರತಕ್ಕೆ ಪಾಠ ಕಲಿಸಬೇಕು ಅಂತಾ ವ್ಯಾಪಾರ-ವಹಿವಾಟು ರದ್ದು ಮಾಡಿದರೆ, ಅದು ರಿವರ್ಸ್ ಹೊಡೆದು ಅಲ್ಲಿ ಟೊಮೆಟೋ ಬೆಲೆ 400 ರೂಪಾಯಿ ದಾಟುವಂತೆ ಮಾಡಿದೆ. ಇನ್ನು ಅಮೆರಿಕಾ, ಬ್ರಿಟನ್, ರಷ್ಯಾ, ಚೀನಾ ಸೇರಿದಂತೆ ಮುಸ್ಲಿಂ ಬಾಹುಳ್ಯದ ದೇಶಗಳೂ “ಇದು ಉಭಯ ದೇಶಗಳ ನಡುವಿನ ಆಂತರಿಕ ವಿಚಾರ” ಎಂದು ಹೇಳಿ ಸುಮ್ಮನಾಗಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪಾಕಿಸ್ತಾನ ಏಕಾಂಗಿಯಾಗಿದೆ. ಹೀಗಾಗಿ ಈ ಭಯದಲ್ಲಿ ಟ್ವೀಟ್ ಮಾಡಿರೋ ಪಾಕ್ ಪ್ರಧಾನಿ ತಮ್ಮ ಹೆದರಿಕೆಯನ್ನು ಹಂಚಿಕೊಂಡಿದ್ದಾರೆ..!

“ಆರ್ಎಸ್ಎಸ್ ಅವರ ಹಿಂದೂ ನಿರಂಕುಶ ಪ್ರಭುತ್ವದ ಸಿದ್ಧಾಂತದಿಂದ ನನಗೆ ಭಯವಾಗುತ್ತಿದೆ. ಅವರದ್ದು ನಾಝೀ ಹಾಗೂ ಆರ್ಯನ್ ಸಂಘಟನೆಯಂತಹ ಪ್ರಭುತ್ವವಾಗಿದೆ. ಇದು ಜಮ್ಮು ಕಾಶ್ಮೀರದಲ್ಲೂ ಕೊನೆಯಾಗಲ್ಲ. ಯಾಕೆಂದ್ರೆ ಅವರ ಟಾರ್ಗೆಟ್ ಪಾಕಿಸ್ತಾನ..! ಮುಂದಿನ ದಿನಗಳಲ್ಲಿ ಭಾರತ ಪಾಕಿಸ್ತಾನವನ್ನ ಟಾರ್ಗೆಟ್ ಮಾಡಲಿದೆ, ಇದು ನನ್ನಲ್ಲಿ ಭಯ ಹುಟ್ಟಿಸುತ್ತಿದೆ” ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.