”ನಾನು ಭಾರತದಲ್ಲೇ ಎತ್ತರ ಪೊಲೀಸ್‌ ಅಧಿಕಾರಿ ಎಂಬುದಕ್ಕೆ ನನಗೆ ಹೆಮ್ಮೆ: ಜಗದೀಪ್‌ ಸಿಂಗ್

0
100

ಪಂಜಾಬ್‌ನ ಟ್ರಾಫಿಕ್ ಪೊಲೀಸ್‌ ಅಧಿಕಾರಿಯಾಗಿರುವ ಜಗದೀಪ್‌ ಸಿಂಗ್, 7 ಅಡಿ 6 ಇಂಚು ಎತ್ತರವಿದ್ದು ಸ್ಥಳೀಯ ಪೊಲೀಸರೊಂದಿಗೆ ಕೆಲಸ ಮಾಡುತ್ತಾರೆ. ಇವರು ಜಗತ್ತಿನ ಅತಿ ಎತ್ತರದ ಪೊಲೀಸ್‌ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ. ಹೀಗಾಗಿ, ರಸ್ತೆಯಲ್ಲಿ ಏನಾದರೂ ಟ್ರಾಫಿಕ್‌ ಅಡಚಣೆಗಳುಂಟಾದರೆ ಅದನ್ನು ತಡೆಯುವ ಸಾಮರ್ಥ್ಯ ಅವರಿಗಿದೆ. ಇನ್ನು, ಸಿಂಗ್‌ ತಮಗೆ ವೈಯಕ್ತಿಕ ಬಟ್ಟೆ ಹೊಲೆಯುವ ದರ್ಜಿಯನ್ನು ಇಟ್ಟುಕೊಂಡಿದ್ದು, ಟ್ರಾಫಿಕ್ ಪೊಲೀಸ್‌ ಅಧಿಕಾರಿಯಾಗಿರುವ ಜಗದೀಪ್‌ ಸಿಂಗ್‌ ಅವರಿಗೆ ಪೊಲೀಸ್ ಯೂನಿಫಾರ್ಮ್ ಹೊಲಿದುಕೊಡುವುದೇ ಅವರ ಕೆಲಸ ಎಂದು ವರದಿಗಳು ಹೇಳಿವೆ. ಅಲ್ಲದೆ, ಅವರ ಶೂ ಸೈಜ್ 19 ಆಗಿದ್ದು, ಇದು ಭಾರತದಲ್ಲಿ ದೊರೆಯುವುದಿಲ್ಲ. ಬದಲಾಗಿ ಬೇರೆ ದೇಶದಿಂದ ತರಿಸಿಕೊಳ್ಳಬೇಕಿದೆ.

ಕಳೆದ ಎರಡು ದಶಕಗಳಿಂದ ಸಿಂಗ್ ಪಂಜಾಬ್ ಪೊಲೀಸರ ಜತೆಗೆ ಕೆಲಸ ಮಾಡುತ್ತಿದ್ದು, ಅವರ ಎತ್ತರವೇ ಅವರನ್ನು ಅಮೃತಸರದಲ್ಲಿ ಸ್ಥಳೀಯ ಸೆಲೆಬ್ರಿಟಿಯನ್ನಾಗಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡುವ ಸಿಂಗ್, ”ನಾನು ಭಾರತದಲ್ಲೇ ಎತ್ತರ ಪೊಲೀಸ್‌ ಅಧಿಕಾರಿಎಂಬುದಕ್ಕೆ ತನಗೆ ಹೆಮ್ಮೆಯಾಗುತ್ತದೆ. ತಾನು 7 ಅಡಿ 6 ಇಂಚು ಎತ್ತರವಿದ್ದು, ತನ್ನ ತೂಕ 190 ಕೆಜಿಯಾಗಿದೆ. ಈ ಬಗ್ಗೆ ನಾನು ಹೆಚ್ಚು ಖುಷಿ ಪಡುತ್ತೇನೆ. ನನ್ನ ಕಾಲಿನ ಸೈಜಿನ ಶೂಗಳು ಭಾರತದಲ್ಲಿ ದೊರೆಯುವುದಿಲ್ಲ. ಬೇರೆ ದೇಶಗಳಿಂದ ಆರ್ಡರ್ ಕೊಟ್ಟು ತರಿಸಿಕೊಳ್ಳಬೇಕಿದೆ” ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇನ್ನು, ”ತನ್ನ ಜೀವನದಲ್ಲಿ ನನಗೆ ಹಲವು ತೊಂದರೆಗಳಿವೆ. ನನ್ನ ಸೈಜಿಗೆ ತಕ್ಕಂತ ಬಟ್ಟೆ ಕೊಂಡುಕೊಳ್ಳಲು ಆಗುವುದಿಲ್ಲ, ಸಾಮಾನ್ಯವಾದ ವಾಷ್ ರೂಂ ಅನ್ನೂ ಬಳಸಲು ಸಾಧ್ಯವಿಲ್ಲ. ಅಲ್ಲದೆ, ನನ್ನ ಕಾರಿನಲ್ಲೇ ನಾನು ಪ್ರಯಾಣಿಸಬೇಕಿದ್ದು, ಸ್ಥಳೀಯ ಬಸ್‌ ಅಥವಾ ಕ್ಯಾಬ್‌ನಲ್ಲಿ ಹೋಗಲು ಸಾಧ್ಯವಿಲ್ಲ. ಅವುಗಳು ನನಗೆ ತುಂಬಾ ಚಿಕ್ಕದು” ಎಂದು ಸಿಂಗ್ ಹೇಳಿಕೊಳ್ಳುತ್ತಾರೆ.

ಅಲ್ಲದೆ, ಅವರ ಎತ್ತರವನ್ನು ನೋಡಿ ಯಾರೂ ಮದುವೆಗೆ ಮುಂದಾಗುತ್ತಿರಲಿಲ್ಲ ಎಂದೂ ನೋವು ಹೇಳಿಕೊಂಡಿದ್ದಾರೆ. ಸದ್ಯ, ಜಗದೀಪ್‌ ಸಿಂಗ್‌ಗೆ ಸುಖ್ಬೀರ್‌ ಸಿಂಗ್ ಎಂಬ ಪತ್ನಿಯಿದ್ದು, ಆಕೆ 5 ಅಡಿ 11 ಇಂಚು ಎತ್ತರವಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸುಖ್ಬೀರ್‌, ”ತಾನು ಪಂಜಾಬ್‌ನ ಅತಿ ಎತ್ತರದ ವ್ಯಕ್ತಿ ಹಾಗೂ ಜಗತ್ತಿನಲ್ಲೇ ಅತಿ ಎತ್ತರದ ಪೊಲೀಸ್ ಅಧಿಕಾರಿಯನ್ನು ಮದುವೆ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಜನತೆ ಬಂದು ತಮ್ಮ ಜತೆಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಭಾರತದಲ್ಲಾಗಲೀ, ವಿಶ್ವದಲ್ಲಾಗಲೀ ಅವರಿಗಿಂತ ಎತ್ತರದ ವ್ಯಕ್ತಿ ಯಾರೂ ಇಲ್ಲ ಎಂದುಕೊಂಡಿದ್ದೇನೆ” ಎಂದೂ ಜಗದೀಪ್‌ ಸಿಂಗ್‌ ಪತ್ನಿ ಸುಖ್ಬೀರ್‌ ಸಿಂಗ್ ಹೆಮ್ಮೆ ಪಡುತ್ತಾರೆ.

LEAVE A REPLY

Please enter your comment!
Please enter your name here