ಕೆಆರ್ ಪೇಟೆ ಟಿಕೆಟ್ ಆಕಾಂಕ್ಷಿ ನಾನಲ್ಲ – ನಿಖಿಲ್ ಸ್ಪಷ್ಟನೆ..

0
149

ಕೆ.ಅರ್.ಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ ಎಂದು ಜೆಡಿಎಸ್ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿರವರು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಕಛೇರಿ ಜೆಪಿ ಭವನದಲ್ಲಿ ಇಂದು ಮಾತಾನಾಡಿದ ಅವರು, ಮಾಧ್ಯಮಗಳಲ್ಲಿ ನನ್ನ ಹೆಸರು ಏಕೆ ಕೇಳಿ ಬರುತ್ತಿದೆ ಎಂಬುವುದು ತಿಳಿಯುತ್ತಿಲ್ಲ . ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ತುಂಬಾ ಜನ ಆಕಾಂಕ್ಷಿಗಳಿದ್ದು ಖುದ್ದು ನಾನೇ ಕ್ಷೇತ್ರದ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಮಾಡಿ ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರಿಗೆ ನೀಡುತ್ತೇನೆ ಎಂದರು.
ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ವರಿಷ್ಠರು ಏನು ನಿರ್ಧಾರ ಮಾಡುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ.
ನನಗೆ ಶಾಸಕನಾಗಬೇಕೆಂಬ ಆಸೆ ಇದ್ದಿದ್ದರೆ ರಾಮನಗರದಲ್ಲೇ ಉಪಚುನಾವಣೆ ಎದುರಿಸುತ್ತಿದ್ದೆ. ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಬೇಕಾದ್ರು ನಾನು ಸ್ಪರ್ಧೆ ನಡೆಸಬಹುದಿತ್ತು ಆದರೆ ನಾನು ಜನರ ಜೊತೆಗಿರಲು ಬಯಸುತ್ತೇನೆ, ವರಿಷ್ಠರು ನೀಡಿರುವ ಪಕ್ಷದ ಕೆಲಸ ಮಾಡುತ್ತೇನೆ ಅಷ್ಟೇ ಎಂದರು. ಕೆ.ಆರ್.ಪೇಟೆ ಜೆಡಿಎಸ್ ಭದ್ರ ಕೋಟೆಯಾಗಿದ್ದು ಈ ಬಾರಿಯು ನಾವು ಗೆಲುವು ಸಾಧಿಸುತ್ತೆವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿ.ಟಿ. ದೇವೇಗೌಡರು ನನ್ನ ತಂದೆ ಸಮಾನ:
ಇದೇ ಸಂದರ್ಭದಲ್ಲಿ ಜಿ.ಡಿ. ದೇವೇಗೌಡರ ಬಗ್ಗೆ ಮಾತನಾಡಿದ ಅವರು, ಜಿಟಿ ದೇವೇಗೌಡರು ನನ್ನ ತಂದೆಯ ಸಮಾನ, ಜಿ.ಟಿ. ಹರೀಶ್ ನನ್ನ ಸಹೋದರ ಇದ್ದಂತೆ ಇಬ್ಬರದು ಮೈಸೂರು ಜಿಲ್ಲೆಗೆ ಅಪಾರ ಕೊಡುಗೆ ಇದೆ. ಜಿ.ಟಿ.ಹರೀಶ್ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ, ನೋವಿನಲ್ಲಿ ಸ್ವಲ್ಪ ಅವರ ಹಾಗೆ ಮಾತನಾಡಿರಬಹುದು ಅವರ ಮನವೊಲಿಸುವ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದರು.
ಮುಂಬರುವ 17 ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ. ಪ್ರತಿ ಕ್ಷೇತ್ರದಲ್ಲಿ ಸಭೆ ಮಾಡಿ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಿ ವರಿಷ್ಠರಿಗೆ ನೀಡುವ ಕಾರ್ಯ ಮಾಡುತ್ತೇನೆ. ಈ ಮೂಲಕ ಎಲ್ಲಾ ಕ್ಷೇತ್ರಗಳಲ್ಲು ಗೆಲುವಿಗಾಗಿ ನಾವು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಜೆಪಿ ಭವನದಲ್ಲಿ ಯುವ ಘಟಕದ ಅಧ್ಯಕ್ಷರ ಸಭೆ : ಇನ್ನು ನಿಖಿಲ್ ಕುಮಾರಸ್ವಾಮಿರವರು ಯುವ ಘಟಕದ ರಾಜ್ಯಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ನಂತರ ಮೊದಲ ಬಾರಿಗೆ 30 ಜಿಲ್ಲೆಗಳ ಯುವ ಘಟಕದ ಅಧ್ಯಕ್ಷರ ಸಭೆ ಕರೆದು ಚರ್ಚಿಸಿದರು. ಈ ಸಭೆಯಲ್ಲಿ ಕುಮಾರಸ್ವಾಮಿರವರ ಸರ್ಕಾರ ಹೋಗಿದೆ ಎಂದು ಯಾರು ಚಿಂತೆ ಮಾಡಬೇಕಿಲ್ಲ ಅವರ ಅವಧಿಯಲ್ಲಿ ಮಾಡಿರುವ ರೈತರ ಸಾಲಮನ್ನಾ, ಋಣಮುಕ್ತ ಕಾಯ್ದೆ, ಬಡವರ ಬಂಧು ಸೇರಿದಂತೆ ಹಲವು ಯೋಜನೆಗಳನ್ನು ಅವರು ನೀಡಿದ್ದು ಜನರಿಗೆ ಮುಟ್ಟಿಸುವ ಕೆಲಸ ಮಾಡೋಣ ಎಂದು ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷರುಗಳಿಗೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here