ಡಿ ಬಾಸ್‍ ಮುಂದೆ ನಾನಿನ್ನೂ ಜ್ಯೂನಿಯರ್‍ ಅಂದ್ರು ನಿಖಿಲ್‍

0
169

ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷೆಯನ್ನು ಮೂಡಿಸಿದ್ದ ಕುರುಕ್ಷೇತ್ರ ಚಿತ್ರಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಇದೇ ತಿಂಗಳು 9ನೇ ತಾರೀಖು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಈ ಚಿತ್ರ ತೆರೆ ಮೇಲೆ ಬರಲಿದೆ. ಈಗಾಗಲೇ ಟ್ರೈಲರ್‍ ಬಾರಿ ಸದ್ದು ಮಾಡಿದ್ದು, ಟ್ರೈಲರ್‍ ನಲ್ಲಿ ನಿಖಿಲ್‍ ಕುಮಾರಸ್ವಾಮಿ ಅವರ ಧ್ವನಿ ಕೇಳಿಸಿಲ್ಲ ಎಂದು ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದರು.
ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡಿ ಒಂದಷ್ಟು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಟ್ರೈಲರ್‍ ನಲ್ಲಿ ಯಾರದ್ದೋ ಧ್ವನಿ ಕೇಳಿದಾಗ ನಾನೊಬ್ಬ ಕಲಾವಿದನಾಗಿ ಅದರ ಬಗ್ಗೆ ನನಗೇ ಇದು ನನ್ನ ವೃತ್ತಿಧರ್ಮ ಅಲ್ಲ ಅನಿಸಿತು. ಇಷ್ಟೊಂದು ನಿಧಾನ ಆಗಲಿಕ್ಕೆ ಲೋಕಸಭಾ ಚುನಾವಣೆ ಹಾಗೂ ಅದರ ಎಲ್ಲಾ ಬೆಳವಣಿಗೆಗಳ ಬಗ್ಗೆ ನೀವೆಲ್ಲಾ ನೋಡಿದ್ದೀರಿ. ಹಾಗಾಗಿ ನಾನು ಇವತ್ತು ಧ್ವನಿ ಮುದ್ರಣ ಮಾಡಲು ಬಂದಿದ್ದೇನೆ ಎಂದು ಸ್ಪಷ್ಟ ಪಡಿಸಿದರು.

ಕುರುಕ್ಷೇತ್ರ ಚಿತ್ರ ಬಹಳ ವಿಶಿಷ್ಟವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇಷ್ಟೆಲ್ಲಾ ಕಲಾವಿದರನ್ನು ಒಂದೆಡೆ ಕಲೆ ಹಾಕಿ ಚಿತ್ರವನ್ನು ನಿರ್ಮಾಣ ಮಾಡುವುದು ನಿಜಕ್ಕೂ ಸಾಹಸವೇ ಸರಿ. ಪ್ರತಿ ಪಾತ್ರಕ್ಕೂ ಜೀವ ತುಂಬುವ ಕೆಲಸವನ್ನು ಎಲ್ಲಾ ಕಲಾವಿದರು ಮಾಡಿದ್ದಾರೆ.
ಡಿ ಬಾಸ್‍ ಮತ್ತು ಯಶ್‍ ಕುರಿತು ನಿಖಿಲ್‍ ಕುಮಾರಸ್ವಾಮಿ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಕಾಲ ಬಹಳ ಕಷ್ಟಪಟ್ಟು ಒಂದು ಹಂತಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೇ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನನಗೆ ಯಾವುದೇ ಕಲಾವಿದರ ನಡುವೆ ಯಾವುದೇ ಮನಸ್ತಾಪಗಳಿಲ್ಲ. ಇದು ದರ್ಶನ್‍ ಅವರ ಅಭಿನಯದ 50ನೇ ಚಿತ್ರವಾಗಿದ್ದು, ದರ್ಶನ್‍ ಅವರಿಗಿಂತ ಜ್ಯೂನಿಯರ್‍ ಕಲಾವಿದ. ಆದರೆ ಗಾಂಧಿ ನಗರದಲ್ಲಿ ಗಾಳಿ ಸುದ್ದಿಯೊಂದು ಹರಡಿದೆ. ನಾನು ಯಾವುದೇ ಸೀನಿಯರ್‍ ಕಲಾವಿದರಿಗೆ ಗೌರವ ಕೊಡುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ನಾನು ಯಾವುದೇ ಸಂದರ್ಭದಲ್ಲೂ ಹಾಗೆ ಗರ್ವ ಪಡುವುದಿಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here