ಪ್ರೇಯಸಿ ಜೊತೆ ತಗ್ಲಾಕೊಂಡ ಪತಿ! ಮುಂದೇನಾಯ್ತು ಗೊತ್ತೆ ?

0
492

ಕೆಲವರು ಮದುವೆಯಾಗಿ ಮಕ್ಕಳಿದ್ದರು ಮತ್ತೋಬ್ಬರ ಜೊತೆ ಅನೈತಿಕ ಸಂಪರ್ಕ ಬೆಳೆಸಿಕೊಂಡಿರುತ್ತಾರೆ. ಇದನ್ನು ಪ್ರೇಮ ಎನ್ನಬೇಕಾ? ಅಥವಾ ಕಾಮದಾಸೆ ಎನ್ನಬೇಕಾ? ತಿಳಯದು. ಮನೆಯಲ್ಲಿ ಗಂಡ-ಹೆಂಡತಿಯರ ಮಧ್ಯೆ ಮನಸ್ತಾಪ ಬಂದರೆ ಬೇರೊಬ್ಬರ ಜೊತೆ ಅನೈತಿಕ ಸಂಪರ್ಕ ಬೆಳೆಸಿಕೊಳ್ಳುವುದು ಸಹಜ. ಆದರೆ ಇನ್ನೂ ಕೆಲವರು ಕಾಮದಾಸೆಗೆ ಬೇರೋಬ್ಬರ ಜೊತೆ ಲೈಂಗಿಕ ಸಂಪರ್ಕ ಹೊಂದಿರುತ್ತಾರೆ. ಈ ರೀತಿ ಪತಿಯೊಬ್ಬ ತನ್ನ ಪ್ರೇಮಿಯ ಜೊತೆ ಬೆಡ್‍ರೂಮಿನಲ್ಲಿ ಅರೆ ನಗ್ನವಾಗಿರುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಹೈದರಾಬಾದ್‍ನ ಅಲ್ವಾಲ್ ಸುಭಾಶ್ ನಗರದಲ್ಲಿ ನಡೆದಿದೆ.

ಆರೋಪಿ ಗೋಪಾಲ್ ಏಳು ವರ್ಷಗಳ ಹಿಂದೆ ಎಸ್ತರ್ ಏಂಜಲ್ ಅವರನ್ನು ಪದುವೆಯಾಗಿದ್ದನು. ಈ ದಂಪತಿಗಳಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಕೆಲವು ದಿನಗಳಿಂದ ಗೋಪಾಲ್ ತನ್ನ ಪತ್ನಿಯಿಂದ ದೂರವಿರುತ್ತಿದ್ದನು ಕಾರಣ ಗೋಪಾಲ್ ಆದೇ ನಗರದಲ್ಲಿದ್ದ ಇನ್ನೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದನು. ಈ ಮಹಿಳೆಗಾಗಿ ತನ್ನ ಪತ್ನಿ ಮತ್ತು ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಿದ್ದನು. ದಿನ ಕಳೆದಂತೆ ಪತ್ನಿ ಎಸ್ತರ್ ಏಂಜಲ್ ಅವರಿಗೆ ತನ್ನ ಪತಿ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿರಬಹುದು ಎಂದು ಅನುಮಾನ ಬಂದಿದೆ.

ಒಂದು ದಿನ ಗೋಪಾಲ್ ಮಹಿಳೆಯ ಮನೆಗೆ ಹೋಗುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ಎಸ್ತರ್ ಏಂಜಲ್‍ಗೆ ತಿಳಿಸಿದ್ದಾರೆ. ಇದನ್ನು ಕೇಳಿ ಕೋಪಗೊಂಡ ಪತ್ನಿ ಇವರಿಬ್ಬರನ್ನು ರೆಂಡ್‍ಹ್ಯಾಂಡಾಗಿ ಹಿಡಿಯಲೆಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಳು. ಶನಿವಾರ ಗೋಪಾಲ್ ತನ್ನ ಪ್ರೇಯಸಿ ಮನೆಗೆ ಹೋಗಿ ಬೆಡ್‍ರೂಮಿನಲ್ಲಿ ಅರೆನಗ್ನನಾಗಿದ್ದನು. ಈ ವೇಳೆ ಪತ್ನಿ ತಮ್ಮ ಕುಟುಂಬಸ್ಥರ ಜೊತೆ ಬಂದು ರೆಂಡ್‍ಹ್ಯಾಂಡಾಗಿ ಪತಿಯನ್ನು ಹಿಡಿದಿದ್ದಾಳೆ. ಕೋಪಕೊಂಡ ಪತ್ನಿ, ಪತಿಯನ್ನು ಬೆಡ್‍ರೂಮಿನಿಂದ ಅರೆನಗ್ನವಾಗಿಯೇ ರಸ್ತೆಗೆ ಎಳೆದುಕೊಂಡು ಬಂದು ಚಪ್ಪಲಿಯಲ್ಲಿ ಹೊಡೆದಿದ್ದಾಳೆ.

ಸಂಬಂಧಿಕರು ಸಹ ಗೋಪಾಲ್ ಮತ್ತು ಆ ಮಹಿಳೆಗೆ ಧರ್ಮದೇಟು ಕೊಟ್ಟಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳಿಯರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಲು ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here