ಮಂಗನಿಂದ ಮಾನವನಾದರೂ ಬುದ್ಧಿ ಕಲಿಯಲಿಲ್ಲ ಮಾನವ. ಕೋತಿಯ ನೀತಿಪಾಠ ನೋಡಿ.

0
237

ನೀರನ್ನು ಮಿತವಾಗಿ ಬಳಸಬೇಕು ಅಂತ ಎಲ್ಲರಿಗೂ ಗೊತ್ತು. ಆದರೂ ಭಂಡ ಧೈರ್ಯ ನಮ್ಮ ಜನಗಳಿಗೆ ಬೇಕಾಬಿಟ್ಟಿ ಯಾಗಿ ನೀರನ್ನು ವೇಸ್ಟ್ ಮಾಡ್ತಾರೆ. ಕಣ್ಮುಂದೆ ನೀರು ಸುಮ್ಮನೆ ವೇಸ್ಟ್ ಆಗ್ತಾ ಇದ್ರು ನಲ್ಲಿ ವಾಲಾ ಆಫ್ ಮಾಡೋಕೆ ಆಗೋಲ್ಲ ಅಷ್ಟೊಂದು ಸೋಂಬೇರಿತನ ಹಲವರಿಗೆ. ಗಂಟೆಗಟ್ಟಲೆ ಟ್ಯಾಂಕರ್ ನೀರಿಗಾಗಿ ಕಾಯೋ ಗಂಟ ನೀರಿನ ಬೆಲೆ ಗೊತ್ತಾಗೊಲ್ಲ ಬಿಡಿ.
ಕೋತಿಯೊಂದು ಬಾಯಾರಿಕೆಯಿಂದ ನಲ್ಲಿ ವಾಲ್ ಅನ್ನುತ್ತಾನೆ ತಿರುಗಿಸಿ ನೀರು ಕುಡಿದು ಆಫ್ ಮಾಡಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದ್ದು ಈ ಕೋತಿಯು ಮಾನವರಿಗೆ ಆದರ್ಶವಾಗಿದೆ . ಇನ್ನಾದರೂ ಈ ಕೋತಿ ಯನ್ನಾದರೂ ನೋಡಿ ಬುದ್ಧಿ ಕಲಿಯಿರಿ ಸ್ವಾಮಿ ಅಂತ ಬುದ್ಧಿಜೀವಿಗಳು ವಿಡಿಯೋಸ್ ಶೇರ್ ಮಾಡುತ್ತಲೇ ಇದ್ದಾರೆ.
ನೀವೇ ಮನಸಲ್ಲಿ ಅಂದುಕೊಳ್ಳುತ್ತಾ ಇರಬಹುದು ಇದೇನ್ ಮಹಾನ ಅಂತ. ನಾವೇ ನೋಡ್ತಾ ಇರ್ತೀವಿ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸಿ ಶುಚಿಯಾಗಿ ಇಡಲು ಕಷ್ಟ ನಮ್ಮ ಜನಗಳಿಗೆ . ಇನ್ನೂ ಕೆಲವರಿರುತ್ತಾರೆ ಕಾರ್ಪೊರೇಷನ್ ರವರು ಕ್ಲೀನ್ಮಾಡ್ತಾರೆ ಅಂತ ಬೇಕಾಬಿಟ್ಟಿ ಎಲ್ಲಂದ್ರಲ್ಲಿ ಕಸ ಎಸೆದು ಹೋಗ್ತಾರೆ ಕಸದ ಬುಟ್ಟಿ ಪಕ್ಕದಲ್ಲೇ ಇದ್ದರೂ ಕಸವನ್ನು ಬುಟ್ಟಿಗೆ ಹಾಕುವಷ್ಟು ಟೈಮಿಲ್ಲ ಪಾಪ.
ದಿನದ ಒಂದುವರೆ ಗಂಟೆನೂ ಬರೀ ಹರಟೆ ಹೊಡ್ಕೊಂಡು ಸಿಗರೇಟ್ ಸೇದೋಕೆ ಮೇಕಪ್ ಮಾಡಿಕೊಳ್ಳುವ ಮೀಸಲಿಡುತ್ತಾರೆ. ಆದರೆ ಟ್ರಾಫಿಕ್ಕಲ್ಲಿ ಇದ್ದಾಗ ಲೇಟಾಯ್ತು ಅಂತಾ ರೂಲ್ಸ್ ಬ್ರೇಕ್ ಮಾಡಿ ಪರರ ಪ್ರಾಣಕ್ಕೆ ಹಾನಿ ಮಾಡಿದರೆ ಗ್ಯಾರೇಜಿಗೆ ಗಾಡಿ ಹರಿಶ್ಚಂದ್ರಘಾಟ್ ಗೆ ಬಾಡಿ ಅಂತ ಹೋಗ್ತಾರೆ. ಇಂಥವರ ಮಧ್ಯೆ ಕೋತಿಯ ಒಳ್ಳೆತನಕ್ಕೆ ಬುದ್ಧಿಜೀವಿಗಳು ಫಿದಾ ಆಗಿದ್ದಾರೆ . ಮಂಗನಿಂದ ಮಾನವನಾದರೂ ಮಂಗನ ಬುದ್ಧಿಯು ಬರಲಿಲ್ಲವಲ್ಲ ನಮ್ಮ ಸತ್ತ ಜನಗಳಿಗೆ ಎಂಬ ಚರ್ಚೆಗಳು ಮುಂದುವರೆಯುತ್ತಲೇ ಇದೆ.

LEAVE A REPLY

Please enter your comment!
Please enter your name here