ಚೆನೈನ ಬೀದಿ ಬೀದಿಗಳಲ್ಲಿ ತಿರುಗುತ್ತಿದ್ದಾರೆ `ಹುಚ್ಚ ವೆಂಕಟ್’…!

0
983

ಕನ್ನಡ ಸಿನಿಮಾಗಳಲ್ಲಿ ನಾಯಕ ನಟನಾಗಿ, ನಿರ್ದೇಶಕರಾಗಿದ್ದ ಹುಚ್ಚ ವೆಂಕಟ್ ಚೆನೈನ ರಸ್ತೆಗಳಲ್ಲಿ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ತಿರುಗುಡಾತ್ತಿದ್ದಾರೆ. ಹೌದು, ಚೆನೈನ ರಸ್ತೆಯಲ್ಲಿ ಹುಚ್ಚ ವೆಂಕಟ್ ಅವರು ಕೊಳೆಯಾಗಿರುವ ಬಟ್ಟೆಗಳನ್ನು ಧರಿಸಿಕೊಂಡು, ಚಪ್ಪಲಿ ಇಲ್ಲದೆ ಒಡಾಡುತ್ತಿರುವ ದೃಶ್ಯವನ್ನು `ರಾಂಧಾವ’ ಚಿತ್ರತಂಡದ ಸದಸ್ಯರೊಬ್ಬರು ಪ್ರತ್ಯಕ್ಷವಾಗಿ ಗಮನಿಸಿ, ಅವರನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ.

ಆದರೆ ಅವರ ಯಾವ ಮಾತಿಗೂ ಪ್ರತಿಕ್ರಿಯೆ ನೀಡದೆ ವೆಂಕಟ್ ಮುಂದೆ ಹೋಗಿದ್ದಾರೆ. ರಾಂಧವ ಚಿತ್ರತಂಡ ಚೆನೈಗೆ ಸಿನಿಮಾ ವಿಚಾರವಾಗಿ ತರೆಳಿದ್ದು, ಆ ಸಮಯದಲ್ಲಿ ನಿರ್ದೇಶಕರಾದ `ಸುನೀಲ್ ಆಚಾರ್ಯ’ ವೆಂಕಟ್ ಅವರನ್ನು ನೋಡಿದ್ದಾರೆ. ತಕ್ಷಣ ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು ಅವರು ಉತ್ತರ ನೀಡದೆ ಹೋಗಿದ್ದಾರೆ ಎನ್ನಲಾಗಿದೆ.

ಸಿನಿಮಾ ತಂಡ ಅವರ ವೀಡಿಯೋ ಮಾಡಿ ಅದನ್ನು ರಾಂಧವ ಚಿತ್ರದ ನಾಯಕ ಭುವನ್ ಪೊನ್ನಣ್ಣ ಅವರಿಗೆ ಕಳುಹಿಸಿದ್ದಾರೆ. ಈಗಾಗಲೇ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‍ಗೊಂಡಿದೆ. ವೀಡಿಯೋ ಗಮನಿಸಿದ ನಟ ಭುವನ್ ಪೊನ್ನಣ್ಣ, ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಹುಚ್ಚ ವೆಂಕಟ್ ಅವರ ಸ್ಥಿತಿ ನೋಡಿ ನನಗೆ ಬಹಳ ಬೇಸರವಾಗುತ್ತಿದೆ, ಅವರು ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಓಡಾಡುತ್ತಿರುವ ವೀಡಿಯೋವನ್ನು ನಮ್ಮ ತಂಡದ ಸದಸ್ಯರು ನನಗೆ ಕಳುಹಿಸಿದ್ದಾರೆ. ದಯವಿಟ್ಟು ನಿಮಗೆ ಅವರ ಬಗ್ಗೆ ಹೆಚ್ಚು ಮಾಹಿತಿ ತಿಳಿದಲ್ಲಿ ನನಗೆ ತಿಳಿಸಿ. ನನ್ನ ಕೈಲಾದ ಸಹಾಯ ನಾನು ಮಾಡುತ್ತೇನೆ. ಪಾಪ ಅವರ ಪರಿಸ್ಥಿತಿ ನೋಡಲು ಕಷ್ಟವಾಗುತ್ತದೆ, ಬನ್ನಿ ಸಹಾಯ ಮಾಡಲು ಕೈ ಜೋಡಿಸಿ ಎಂದು ಎಲ್ಲರಲ್ಲೂ ಮನವಿ ಮಾಡುವ ಮೂಲಕ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here