ಕನ್ನಡಿಗರ ಪಾಲಿಗೆ ಹುಚ್ಚ ವೆಂಕಟ್ ಒಂದು ತೆರನಾದ ಹೀರೋ. ಅದು ಯಾವುದರಲ್ಲಾದರೂ ಆಗಬಹುದು. ಇತ್ತೀಚೆಗೆ ಕೆಲ ವಿಚಾರಕ್ಕೆ ಕಿರಿಕ್ ಮಾಡಿಕೊಂಡಿದ್ದ ವೆಂಕಟ್ ಈ ಹಿಂದೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಬಣ್ಣ ಹಚ್ಚಿದ್ದರು. ಅಲ್ಲದೇ ತಾವೇ ನಿರ್ದೇಶನ, ಹೀರೋ ಆಗಿ ಅಭಿನಯಿಸಿದ್ದ ಚಿತ್ರಕ್ಕೆ ವಿಭಿನ್ನ ಹೆಸರನ್ನು ಇಟ್ಟುಕೊಂಡಿದ್ದರು ಕೂಡ.
ಆದರೆ ಅದೇ ಚಿತ್ರ ಈಗ ಟ್ರೋಲ್ ಬಾಯಿಗೆ ತುತ್ತಾಗಿದೆ. ಹೌದು, ಗೂಗಲ್ ವಿಕಿಪೀಡಿಯಾ ಪ್ರಕಾರ ‘ಹುಚ್ಚ ವೆಂಕಟ್‘ ಅಭಿನಯದ ಹುಚ್ಚ ವೆಂಕಟ್ ಹೆಸರಿನ ಸಿನಿಮಾ 30 ಲಕ್ಷ ರೂಪಾಯಿಯಲ್ಲಿ ನಿರ್ಮಾಣವಾಗಿದೆ ಎಂದು ತೋರಿಸುತ್ತಿದೆ ಅಂತೆಯೇ, ಈ ಸಿನಿಮಾ ತೆರೆ ಕಂಡ ಮೇಲೆ ಬರೋಬ್ಬರಿ 2500 ಕೋಟಿ ರೂಪಾಯಿ ಗಳಿಸಿದೆ ಅಂತೆ. ಅಲ್ಲದೇ ಈ ಚಿತ್ರಕ್ಕೆ ವೆಂಕಟ್ ಅವರೇ ಫೀಮೇಲ್ ಪಾತ್ರದಲ್ಲಿಯೂ ಆಗಿ ನಟಿಸಿದ್ದಾರೆ ಎಂದು ಗೂಗಲ್ ತೋರಿಸುತ್ತಿದೆ.
ಈ ಚಿತ್ರ ರಿಲೀಸ್ ಆಗಿದ್ದು 2014ರಲ್ಲಿ. ಆದರೆ ಈ ಸಿನಿಮಾ ಬಿಡುಗಡೆಯಾಗಿದೆ. 2002ರಲ್ಲಿ ರಿಲೀಸ್ ಆಗಿದೆ ಎಂದು ತೋರಿಸುತ್ತಿದೆ. ಈ ವಿಚಾರವೀಗ ಸಾಮಾಜಿಕ ತಾಣದಲ್ಲಿ ಬಾರೀ ಟ್ರೋಲ್ ಆಗುತ್ತಿದ್ದು, ಸಾಕಷ್ಟು ಜನರು ಹುಚ್ಚ ವೆಂಕಟ್ ಅವರ ಕಾಲೆಳೆಯುತ್ತಿದ್ದಾರೆ. ಇನ್ನು ಈ ವಿಕಿಪೀಡಿಯಾ ಮಾಹಿತಿಯನ್ನು ಯಾರು ಬೇಕಾದರೂ ಎಡಿಟ್ ಮಾಡಬಹುದಾಗಿದ್ದು ಹುಚ್ಚ ವೆಂಕಟ್ ರವರನ್ನು ಕಾಲೆಳೆಯಬೇಕೆಂದೇ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.