ಚಳಿಗಾಲದ ಸಮಯದಲ್ಲಿ ನಿಮ್ಮ ಮಗುವಿನ ಆರೈಕೆ ಹೇಗಿರಬೇಕು ಗೊತ್ತಾ.?

0
580

ಚಳಿಗಾಲ ಬಂತೆಂದರೆ ಮಕ್ಕಳನ್ನು ಆರೈಕೆ ಮಾಡುವುದೇ ದೊಡ್ಡ ಕೆಲಸವಾಗಿ ಹೋಗುತ್ತದೆ. ಚಳಿಗಾಲದಲ್ಲಿ ಮಗುವಿನ ಚರ್ಮ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ತಾಯಂದಿರು ಪರದಾಡುತ್ತಿರುತ್ತಾರೆ. ಚಳಿಗಾಲದಲ್ಲಿ ಚರ್ಮ ಬಹಳ ಬೇಗ ಒಣಗುತ್ತದೆ. ಈ ವೇಳೆ ಬಹಳ ಎಚ್ಚರಿಕೆ ವಹಿಸಬೇಕೆಂದು ತಜ್ಞರು ತಾಯಂದಿರಿಗೆ ಸಲಹೆ ನೀಡುತ್ತಾರೆ. ಬಿಸಿ ಗಾಳಿಗಿಂತಲೂ ತಂಪಾದ ಗಾಳಿ ಚರ್ಮವನ್ನು ಬಹಳ ಬೇಗ ಒಣಗಿಸುತ್ತದೆ. ಹೀಗಾಗಿ ಮಕ್ಕಳಿಗೆ ಪ್ರತಿ ದಿನ ಸ್ನಾನ ಮಾಡಿಸುವುದು ಉತ್ತಮ. ಆದರೆ, ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಿಸಬಾರದು. ಆದರೆ, ದೀರ್ಘ ಕಾಲದವರೆಗೆ ಸ್ನಾನ ಮಾಡಿಸಬಾರದು.

 

ಚಳಿಗಾಲದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವಾಗ ಮೈಲ್ಡ್ ಸೋಪ್ ಗಳನ್ನು ಬಳಕೆ ಮಾಡಬೇಕು. ಮಕ್ಕಳ ಚರ್ಮ ಉತ್ತಮವಾಗಿರಬೇಕೆಂದರೆ ಬಾದಾಮಿ ಎಣ್ಣೆ, ಆಲಿವ್ ಆಯಿಲ್ ಗಳಿಂದ ಮಸಾಜ್ ಮಾಡಿ ಇದು ಚರ್ಮ ಒಣಗದಂತೆ ನೋಡಿಕೊಳ್ಳುತ್ತದೆ. ವಿಟಮಿನ್ ಇ ಇರುವ ಕ್ರೀಮ್ ಗಳು ಮಗುವಿನ ಚರ್ಮಕ್ಕೆ ಸೂಕ್ತವಾಗಿರುತ್ತದೆ. ಯಾವುದೇ ಲೋಷನ್ ಹಚ್ಚಿದ ನಂತರ ಮಗುವಿನ ಚರ್ಮ ಒಣಗುತ್ತಿದೆ ಎಂದೆನಿಸಿದರೆ, ಕೂಡಲೇ ಅಂತಹ ಲೋಷನ್ ಗಳನ್ನು ಬಳಸಿದಿರಿ.

 

ಎಣ್ಣೆಯಿಂದ ಮಸಾಜ್ ಮಾಡುವುದರಿಂದ ದೇಹದ ಉಷ್ಣಾಂಶವನ್ನು ಸೂಕ್ತ ಪ್ರಮಾಣದಲ್ಲಿ ಕಾಪಾಡಲು ಸಹಾಯಕವಾಗುತ್ತದೆ. ವಿಟಮಿನ್ ಇ ಅಂಶ ಇರುವ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುತ್ತದೆ. ಅಲ್ಲದೆ, ಮಗುವಿಗೂ ಆರಾಮ ಎನಿಸುತ್ತದೆ. ಚಳಿಗಾಲದಲ್ಲಿ ಮಕ್ಕಳಿಗೆ ಶೀತ ನೆಗಡಿ ಸಾಮಾನ್ಯ. ಅವರು ಬರದಂತೆ ಎಚ್ಚರಿಕೆ ವಹಿಸಿ. ನೈಸರ್ಗಿಕವಾಗಿರುವ ಪದಾರ್ಥಗಳನ್ನೇ ಹೆಚ್ಚಾಗಿ ಬಳಸಿಕೊಳ್ಳಬೇಕು. ಡೈಪರ್ ಹಾಕುವ ಸ್ಥಳವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

LEAVE A REPLY

Please enter your comment!
Please enter your name here