ದಿಢೀರ್ ಮಸಾಲಾ ರೈಸ್ ಮಾಡುವುದಾದರೂ ಹೇಗೆ ?

0
126

ಪ್ರತಿದಿನ ಬೆಳಗ್ಗೆ ಆದರೆ ಸಾಕು ಹೆಣ್ಣುಮಕ್ಕಳು ವಿಶೇಷವಾದ ಅಡುಗೆ ಮಾಡಬೇಕಲ್ಲ.. ಏನು ಮಾಡಲಿ ಅದರಲ್ಲೂ ವೇಗವಾಗಿ ಶುಚಿಯಾಗಿ ರುಚಿಯಾಗಿ ಮಾಡಬೇಕಾದ ತಿಂಡಿಗಳನ್ನು ನಿದ್ರೆ ಮಾಡುವಾಗ ಕನಸಲ್ಲೂ ಯೋಚನೆ ಮಾಡುತ್ತಿರುತ್ತಾರೆ !!

ಅದೇ ರೀತಿ ಹತ್ತು ನಿಮಿಷದಲ್ಲಿ ರುಚಿಯಾದ ಮತ್ತು ಬಹಳ ಸುಲಭವಾಗಿ ಮಾಡುವ ‘ಮಸಾಲಾ ರೈಸ್’ ರೆಸಿಪಿಯನ್ನು ನಾವು ತಿಳಿಸುತ್ತೇವೆ !

ಮಸಾಲಾ ರೈಸ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು :-

-2 table spoon ತುಪ್ಪ ಅಥವಾ ಕಡಲೆ ಕಾಯಿ ಎಣ್ಣೆ

-1/2 cup ಈರುಳ್ಳಿ (ಸಣ್ಣದಾಗಿ ಕತ್ತರಿಸಿಕೊಂಡಿರಬೇಕು )

-2 ಹಸಿ ಮೆಣಸಿನಕಾಯಿ

-1 tea spoon ಅಷ್ಟು ಶುಂಠಿ – ಬೆಳ್ಳುಳ್ಳಿ ಪೇಸ್ಟ್

-1/2 cup ಟೊಮೆಟೊ (ಸಣ್ಣದಾಗಿ ಕತ್ತರಿಸಿಕೊಂಡಿರಬೇಕು )

-1/4 cup ಬೀನ್ಸ್ (ಸಣ್ಣದಾಗಿ ಕತ್ತರಿಸಿಕೊಂಡಿರಬೇಕು )

-1/2 ಹಸಿ ಬಟಾಣಿ

-1/2 ಕ್ಯಾರೇಟ್ (ಸಣ್ಣದಾಗಿ ಕತ್ತರಿಸಿಕೊಂಡಿರಬೇಕು )

-1/2 ದಪ್ಪ ಮೆಣಸಿನಕಾಯಿ (ಸಣ್ಣದಾಗಿ ಕತ್ತರಿಸಿಕೊಂಡಿರಬೇಕು )

-1 tea spoon ಅಷ್ಟು ಅಚ್ಚಕಾರದ ಪುಡಿ

-1 tea spoon ಅಷ್ಟು ಧನ್ಯಾ ಪುಡಿ

-1/4 ಅರಿಶಿನ ಪುಡಿ

-1 tea spoon ಅಷ್ಟು ಗರಂ ಮಸಾಲಾ ಪುಡಿ

  • 2 cupe rice

-2 tea spoon ಅಷ್ಟು ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:-
( ಮೊದಲು ಅನ್ನವನ್ನು ಮಾಡಿಕೊಂಡಿರಬೇಕು )
ಒಲೆಯ ಮೇಲೆ ಒಂದು ಕುಕ್ಕರನ್ನು ಇಡಬೇಕು, ಕುಕ್ಕರ್ಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿಕೊಳ್ಳಬೇಕು. ಚೆನ್ನಾಗಿ ಕಾದ ನಂತರ 1/2 ಕ್ಕ ಪಕ್ಕ ಮಾಡಿಟ್ಟುಕೊಂಡ ಈರುಳ್ಳಿಯನ್ನು ಹಾಕಬೇಕು, ನಂತರ ಎರಡು ಹಸಿ ಮೆಣಸಿನಕಾಯಿಯನ್ನು ಉದ್ದವಾಗಿ ಕತ್ತರಿಸಿ ಹಾಕಬೇಕು
ನ೦ತರ 1 table spoon ಅಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ , ಹಸಿ ವಾಸನೆ ಹೋಗುವ ತನಕ ಚೆನ್ನಾಗಿ ಮಾಡಿಸಿಕೊಳ್ಳಬೇಕು ..
ನಂತರ 1/2 ಕತ್ತರಿಸಿಟ್ಟುಕೊಂಡಂತಹ, ಟೊಮೆಟೊವನ್ನು ಹಾಕಿ ಉರಿದುಕೊಳ್ಳಬೇಕು !

ಟೊಮೆಟೊ ಚೆನ್ನಾಗಿ ಮೃದುವಾಗುವ ತನಕ ಹುರಿದುಕೊಂಡ ಮೇಲೆ, 1/2 cup ಬೀನ್ಸ್, 1/4 cup ಹಸಿ ಬಟಾಣಿ, 1/4 cup ಕ್ಯಾರೆಟ್, ಸಣ್ಣದಾಗಿ ಕತ್ತರಿಸಿ ಕೊಂದಂತಹ ದಪ್ಪ ಮೆಣಸಿನಕಾಯಿ ಎಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು( ನೆನಪಿರಲಿ ಉರಿ ಕಮ್ಮಿ ಇರಬೇಕು )

ನಂತರ ಕುಕ್ಕರ್ ಮೇಲೆ ಮುಚ್ಚಳವನ್ನು ಹಾಕಿ ,ಐದು ನಿಮಿಷಗಳ ಕಾಲ ಅಥವಾ ಒಂದು ವಿಷಲ್ ಆಗುವ ತನಕ ಬಿಡಬೇಕು..

ಐದು ನಿಮಿಷಗಳು ಆದ ನಂತರ ಮುಚ್ಚಳ ತೆಗೆದರೆ ತರಕಾರಿ ಗಳೆಲ್ಲವೂ ಚೆನ್ನಾಗಿ ಬೆಂದಿರುತ್ತದೆ .
ಎಲ್ಲವನ್ನೂ ಒಂದು ಸಲ ಮಿಕ್ಸ್ ಮಾಡಿಕೊಳ್ಳಬೇಕು

ನಂತರ ಇದಕ್ಕೆ 1 tea spoon ಅಚ್ಚಕಾರದ ಪುಡಿ , 1 tea spoon ಧನಿಯಾ ಪುಡಿ ,
1/4 tea spoon ಅರಿಶಿನ ಪುಡಿ , 1 tea spoon ಗರಂ ಮಸಾಲಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು..
( ನೆನಪಿಡಿ ಹುರಿ ಕಮ್ಮಿ) ಇರಬೇಕು ಎಲ್ಲಾ ಮಿಕ್ಸ್ ಆದ ಬಳಿಕ ಎರಡು ದೊಡ್ಡ ಕಪ್ ನಲ್ಲಿ ಮಾಡಿಟ್ಟುಕೊಂಡ ಅನ್ನವನ್ನು ಹಾಕಿಕೊಳ್ಳಬೇಕು (ಬಾಸ್ಮತಿ ರೈಸ್ ಬಳಸಿದರೆ ಉದುರು ಉದರಾಗಿರುತ್ತದೆ)..
ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಬೇಕು ನಂತರ ಎಲ್ಲವನ್ನೂ ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಬೇಕು.. ಮಿಕ್ಸ್ ಆದ ಬಳಿಕ ಮುಚ್ಚಳವನ್ನು ಮುಚ್ಚಬೇಕು. ಎರಡು ನಿಮಿಷಗಳ ಆದ ಮೇಲೆ
ಮುಚ್ಚಳ ತೆಗೆದು ಕತ್ತರಿಸಿ ಕೊಂಡಂತಹ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮಸಾಲಾ ರೈಸ್ ರೆಡಿ …!

ಟೈಮ್ ಇಲ್ಲದ ಸಮಯದಲ್ಲಿ, ಸಾರು ಮಾಡಲು ಬೇಚಾರದಲ್ಲಿ, ಕೇವಲ ಹತ್ತು ನಿಮಿಷದಲ್ಲಿ ದಿಢೀರ್ನೆ ಸಾಗರ್ ಮಾಡಿಕೊಳ್ಳಬಹುದು ಒಮ್ಮೆ ಪ್ರಯತ್ನಿಸಿ

LEAVE A REPLY

Please enter your comment!
Please enter your name here