ಬಹಳಷ್ಟು ಜನಕ್ಕೆ ಶ್ರೀಗಂಧವನ್ನ ಬೇಳೆಯಬಹುದೊ,ಇಲ್ಲವೊ ಎಂದು ಅನುಮಾನವಿರುತ್ತದೆ. ಆದರೆ ಶ್ರೀಗಂಧವನ್ನ ನಾವು ಬೆಳೆಬಹುದು. ಇನ್ನು ಈ ಶ್ರೀಗಂಧದ ಗಿಡ ನಿಮಗೆ ಹತ್ತರಿಂದ ಇಪ್ಪತ್ತು ರೂಪಾಯಿಗೆ ಸಿಗುತ್ತದೆ.. ಮತ್ತು ಈ ಶ್ರೀಗಂಧವನ್ನ ಬೆಳೆಸುವುದಕ್ಕೆ ತುಂಬಾ ನೀರಿನ ಅವಶ್ಯಕತೆ ಇರುವುದಲ್ಲ,ಸ್ವಲ್ಪ ದಿನ, ಅದು ಬೆಳೆಯುವವರಿಗೆ ಹಾಕಿದರೆ ಸಾಕು ಆ ನಂತರ ಅದು ತಾನಗಿಯೆ ಬೆಳೆಯುತ್ತದೆ.

ಇನ್ನು ಗಿಡ ನೆಟ್ಟ ಏಳೆಂಟು ವರ್ಷದಲ್ಲಿ ಅದು ಶ್ರೀಗಂಧ ಬಿಡುತ್ತದೆ. ಅಂದಾಜಿನ ಪ್ರಕಾರ ಒಂದು ಎಕರೆಯಲ್ಲಿ ನೀವು ಸುಮಾರು ಒಂದು ಕೋಟಿಯಷ್ಟು ಸಂಪಾದನೆ ಮಾಡಬಹುದು. ಇನ್ನು ಹತ್ತರಿಂದ ಹದಿನೈದು ವರ್ಷಗಳಾದ ನಂತರ ಶ್ರೀ ಗಂಧಕ್ಕೆ ಎಷ್ಟು ಬೆಲೆಇರುತ್ತದೊ,ಅಷ್ಟು ನೀವು ಸಂಪಾದನೆ ಮಾಡಬಹುದು. ಇದರ ಜೊತೆಗೆ ಬೇಕಾದರೆ ನೀವು ಹೆಬ್ಬೇವು,ದಾಳಿಂಬೆ ಹೀಗೆ ಹಲಾವಾರು ಗಿಡಗಳನ್ನ ಬೆಳೆಯಬಹುದು.

ಹತ್ತು,ಹದಿನೈದು ವರ್ಷಗಳ ನಂತರ ನೀವು ಶ್ರೀಗಂಧದ ಜೊತೆ ಇನ್ನೊಂದು ಗಿಡ ಹಾಕಿದರೆ, ಇವೆರೆಡರಿಂದನೂ ಲಾಭ ಪಡೆಯಬಹುದು. ಆದರೆ ಶ್ರೀಗಂಧದ ಮರವನ್ನ ನೀವು ಯಾರಿಗು ಮಾರುವಂತಿಲ್ಲ,ಕೇವಲ ಸರ್ಕಾರಕ್ಕೆ ಮಾತ್ರ ನೀವು ಮಾರಟ ಮಾಡಬೇಕು. ಸ್ವಲ್ಪ ಶ್ರಮೆಬಿದ್ದರೆ ಹದಿನೈದು ವರುಷದಲ್ಲಿ ನಾವು ಸಹಿತ ಶ್ರೀಗಂಧದ ಮರದಿಂದ ಶ್ರೀಮಂತರಾಗಬಹುದು!