ಬಿಗ್ ಬಾಸ್ ಮನೆಯಲ್ಲಿ ಚಂದನ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ ?

0
664

ಕಳೆದ ಸೀಸನ್‍ಗಿಂತ ಈ ಬಾರಿಯ ಬಿಗ್‍ಬಾಸ್ ಸೀಸನ್ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವನ್ನು ಮೂಡಿಸಿದೆ. ಕಳೆದ ಸೀಸನ್ ನಲ್ಲಿ ಸೆಲೆಬ್ರಿಟಿಯ ಜೊತೆ ಜನಸಾಮನ್ಯರು ಇದ್ದರು. ಆದ ಕಾರಣಕ್ಕೋ ಏನೋ, ಕಳೆದ ಬಾರಿ ಬಿಗ್‍ಬಾಸ್‍ನ ಟಿ.ಆರ್.ಪಿ ಮಖಾಡೆ ಮಲಗಿತ್ತು. ಇದನ್ನು ಅರಿತ ಕಲರ್ಸ್ ವಾಹಿನಿಯವರು ಈ ಬಾರಿ ಸೆಲಬ್ರಿಟಿಗಳನ್ನೇ ಕಳುಹಿಸಬೇಕು. ಅದರಲ್ಲೂ ಜನರಿಗೆ ಬಹಳ ಹತ್ತಿರವಾಗಿರುವವರನ್ನೇ ಕಳುಹಿಸಬೇಕು ಎಂದು ನಿರ್ಧರಿಸಿ 18 ಸ್ಪರ್ದಿಗಳನ್ನು ಸೆಲಕ್ಟ್ ಮಾಡಿ ಪ್ರೇಕ್ಷಕರ ಮುಂದೆ ಇಟ್ಟಿದ್ದರು.

 

ಅವರ ಆಯ್ಕೆಯಂತೆ ಎಲ್ಲಾ ಸ್ಫರ್ದಿಗಳು ಪ್ರೇಕ್ಷರಿಗೆ ಬಹಳ ಇಷ್ಟವಾಗಿದ್ದಾರೆ. ಅದರಲ್ಲೂ ಮೊದಲನೇ ವಾರ ಹಿರಿಯ ಪತ್ರಕರ್ತ ರವಿಬೆಳಗೆರೆ ಅವರು ಬಿಗ್ ಬಾಸ್ ಎಂಟ್ರಿ ಕೊಟ್ಟಿದ್ದು, ಇಡೀ ಮಾದ್ಯಮ ಲೋಕದ್ದಲ್ಲೇ ಕುತೂಹಲ ಮೂಡಿಸಿತ್ತು. ಆದರೆ ಅನಾರೋಗ್ಯ ಕಾರಣದಿಂದ ಬೆಳಗೆರೆ ಅವರು ಹೊರ ಬರಬೇಕಾಯಿತು. ಈಗಾಗಲೇ 12 ವಾರಗಳನ್ನು ಮುಗಿಸಿರುವ ಬಿಗ್‍ಬಾಸ್ ಒಳ್ಳೆಯ ಟಿ.ಆರ್.ಪಿ.ಯನ್ನು ಪಡೆದುಕೊಂಡು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ. ಬರ್ತಾ ಬರ್ತಾ ಸ್ಪರ್ಧಿಗಳೆಲ್ಲ ಎಲಿಮಿನೇಟ್ ಆಗಿ ಮನೆ ಖಾಲಿ ಖಾಲಿ ಅನ್ನಿಸುತ್ತಿದೆ. ಇನ್ನು ಕಳೆದ ವಾರ ಮುದ್ದು ಗೊಂಬೆ ಚಂದನ ಅವರು ಮನೆಯಿಂದ ಹೊರ ಬಂದಿದ್ದು, ಕೆಲ ಪ್ರೇಕ್ಷಕರು ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

 

ಚಂದನಾ ಅವರ ಮುದ್ದು ಮುಖ, ಮಕ್ಕಳಂತೆ ಆಡುವ ಪರಿ, ಟಾಸ್ಕ್ ನಲ್ಲಿ ಮಾಡಿಕೊಳ್ಳುವ ಎಡವಟ್ಟು, ಅಳುಮುಂಜಿ ನಡುವಳಿಕೆ ಇವೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಹೆಚ್ಚಾಗಿ ಶೈನ್ ಮತ್ತು ವಾಸುಕಿ ಅವರ ಹೆಸರನ್ನೇ ತೆಗೆದುಕೊಂಡು ಅವರ ಮೇಲೆಯೇ ಅವಲಂಬಿತರಾಗಿದ್ದು, ಅಷ್ಟು ಇಷ್ಟ ಆಗಲಿಲ್ಲ ಅನಿಸುತ್ತದೆ ! ಇದೇ ಅವರು ಮನೆಯಿಂದ ಹೊರ ಬರಲು ಮುಖ್ಯ ಕಾರಣ ಎಂದು ಹೇಳಬಹುದು.

 

ಆದರೂ ಹನ್ನೆರಡು ವಾರ ಬಿಗ್ ಬಾಸ್ ಜರ್ನಿಯಲ್ಲಿದ್ದಿದ್ದು ತಮಾಷೆ ವಿಚಾರವಲ್ಲ.! ಅದೆಷ್ಟು ಸ್ಟ್ರಾಂಗ್ ಕಂಟೆಸ್ಟೆಂಟ್ ಗಳ ಮುಂದೆ ಗೆದ್ದು, ಮನೆ ಸದಸ್ಯರನ್ನೆಲ್ಲ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಚಂದನ ಅವರು ಬಿಗ್ ಬಾಸ್ ಮನೆಯಲ್ಲಿ ಪಡೆದುಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ ?

 

ಚಂದನದ ಗೊಂಬೆ ಚಂದನ ಬಿಗ್ ಬಾಸ್ ಮನೆಯಿಂದ ಪ್ರೇಕ್ಷಕರಿಗೆಲ್ಲ ಮನರಂಜನೆಯ ರಸದೌತಣ ನೀಡಿದ್ದು, ಬಿಗ್ ಬಾಸ್ ಮನೆಯ ಕಿರಿಯ ಸದಸ್ಯರಾಗಿದ್ದಾರೆ. ವಾರಕ್ಕೆ 59 ಸಾವಿರ ರೂ. ಸಂಭಾವನೆಯಂತೆ ಹನ್ನೆರಡು ವಾರಕ್ಕೆ ಚಂದನ ಅವರು ಬರೋಬ್ಬರಿ 6 ಲಕ್ಷ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ !

 

ಒಟ್ಟಾರೆ ಬಿಗ್ ಬಾಸ್ ಮನೆಯ ಜರ್ನಿಯನ್ನು ಉತ್ತಮವಾಗಿ ಅನುಭವಿಸಿದ ಚಂದನಾ ಅವರ ಮುಂದಿನ ಜೀವನ ಸುಖದಿಂದ ಕೂಡಿರಲಿ ಮತ್ತು ಅವರು ನಟಿಯಾಗಬೇಕು ಎಂಬ ಆಸೆ ಫಲಿಸಲಿ ಎಂದು ಹಾರೈಸೋಣ.

LEAVE A REPLY

Please enter your comment!
Please enter your name here