ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ, ಬೆಳಗಾವಿ,ರಾಯಚೂರು ,ವಿಜಯಪುರ, ಕೊಪ್ಪಳ ಸೇರಿದಂತೆ ಅರ್ಧ ಉತ್ತರ ಕರ್ನಾಟಕವೇ ಮುಳುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಕೆರೆ,ಕಟ್ಟೆಗಳೆಲ್ಲ ಸಂಪೂರ್ಣವಾಗಿ ತುಂಬಿದ್ದು, ಶಿವಮೊಗ್ಗ ಜಿಲ್ಲೆಯಲ್ಲೂ ಇದೆ ರೀತಿ ಧಾರಾಕಾರವಾಗಿ ಸುರಿದ ಮಳೆಯಿಂದ ಮುಖ್ಯ ರಸ್ತೆಗಳು ಕುಸಿದಿರುವ ಪರಿಣಾಮ ರಸ್ತೆ ಸಂಪರ್ಕ ಪೂರ್ಣವಾಗಿ ಸ್ಥಗಿತಗೊಂಡಿದೆ.
ಉತ್ತರ ಭಾಗದ ಆನೇಕ ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ, ಇನ್ನು ಹಲವರು ಪ್ರವಾಹಕ್ಕೆ ತುತ್ತಾಗಿ ಸಾವನಪ್ಪಿದ್ದಾರೆ. ಈ ಘಟನೆಗಳನ್ನು ಗಮನಿಸಿದರೆ, ವಿಧಿಯ ಆಟ ಬಹಳ ಕ್ರುರವಾಗಿದೆ ಎಂದು ಹೇಳಬಹುದು. ಈಗಾಗಲ್ಲೇ ಉತ್ತರ ಕರ್ನಾಟಕದಲ್ಲಿ ಸಿಲುಕಿರುವ ಪ್ರವಾಹ ಸಂತ್ರರಸ್ತರಿಗೆ ರಾಜ್ಯದ ಜನರು ಆನೇಕ ರೀತಿಯಲ್ಲಿ ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆಯನ್ನು ತೋರಿದ್ದಾರೆ. ನಿನ್ನೆ ರಾಜ್ಯ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡಲು ಕೇಂದ್ರಕ್ಕೆ ಮನವಿ ಮಾಡುವ ಮೂಲಕ ಪತ್ರ ಬರೆದು ರವಾನಿ ಮಾಡಿತು. ರಾಜ್ಯ ಸರ್ಕಾರದಿಂದ ಈಗಾಗಲ್ಲೇ 100 ಕೋಟಿ ಬಿಡುಗಡೆ ಮಾಡಿತ್ತು, ಇಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮನವಿ ಆಧರಿಸಿ, ಪ್ರವಾಹ ಪರಿಹಾರವಾಗಿ 126 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.