ಎಸ್.ಎಂ.ಕೃಷ್ಣ ಅವರ ಅಳಿಯ ವಿಜಿ ಸಿದ್ದಾರ್ಥ ಮಂಗಳೂರಿನ ಸಮೀಪ ನಾಪತ್ತೆಯಾಗಿರುವ ಪ್ರಕರಣ ಇದೀಗ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ನಾಪತ್ತೆಯಾಗುವುದಕ್ಕೂ ಮುನ್ನ ಸುದಿರ್ಘವಾದ ಪತ್ರ ಬರೆದಿರುವ ಸಿದ್ದಾರ್ಥ್ ತಮ್ಮ ಉದ್ಯಮದಲ್ಲಾದ ನಷ್ಟ ಮತ್ತು ಅದರಿಂದಾದ ಸಾಲವೇ ನನಗೆ ಹೆಚ್ಚು ಕಿರಿಕಿರಿ ಉಂಟು ಮಾಡಿದೆ ಎಂದಿದ್ದಾರೆ.
ಇನ್ನು ಅಚ್ಚರಿ ಎಂದರೆ ಸಿದ್ದಾರ್ಥ್ ಮಾಡಿರುವ ಸಾಲ 8 ಸಾವಿರ ಕೋಟಿ. ಆದರೆ ಸಿದ್ದಾರ್ಥ್ ಅವರ ಒಟ್ಟು ಆಸ್ತಿಯ ಮೌಲ್ಯ 22 ಸಾವಿರ ಕೋಟಿ ರೂಪಾಯಿ. 24 ಬ್ಯಾಂಕ್ ಗಳಿಂದ ಸಿದ್ದಾರ್ಥ ಅವರು 8 ಸಾವಿರ ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ ಎನ್ನಲಾಗಿದೆ.