ನಮ್ಮನೆ ಯುವರಾಣಿ ಅಂಕಿತಾ ಅವರ ಸಂಭಾವನೆ ಎಷ್ಟು ಗೊತ್ತಾ….?

0
1434

ನಮ್ಮನೆ ಯುವರಾಣಿ ಕೋಳಿ ಮರಿ ಮೀರಾ ಅಂದ್ರೆ ತಟ್ಟನೆ ನೆನಪಿಗೆ ಬರೋದು ಅಂಕಿತ ಅವರ ನಟನೆ. ಬಾಲ ನಟಿಯಾಗಿ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟಿರುವ ಅಂಕಿತಾ ಅವರು ನಮ್ಮನೆ ಯುವರಾಣಿ ಸಿರಿಯಲ್’ನಲ್ಲಿ ತನ್ನ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಪ್ರತಿದಿನ ಪ್ರಸಾರವಾಗುವ ಪ್ರತಿಯೊಂದು ಸೀರಿಯಲ್ ಗಳು ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡು ಬಿಟ್ಟಿದೆ. ಸಂಜೆ ಆದರೆ ಸಾಕು ಟಿವಿ ಮುಂದೆ ಹಾಜರಾಗುತ್ತಾರೆ ಸೀರಿಯಲ್ ಪ್ರೇಕ್ಷಕರು. ಅದರಲ್ಲೂ ಇತ್ತೀಚೆಗೆ ಆರಂಭವಾದ ಹಲವಾರು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸನ್ನು ಈಗಾಗಲೇ ಗೆದ್ದಿದೆ. ಇನ್ನು ಟಿ ಆರ್ ಪಿ ವಿಚಾರದಲ್ಲೂ ಮುಂಚೂಣಿಯಲ್ಲಿರುವ ನಮ್ಮನೆ ಯುವರಾಣಿ ಕೂಡ ಅಪಾರ ಜನತೆಯ ಪ್ರೀತಿಯನ್ನು ಪಡೆದುಕೊಂಡಿದೆ.

ಇನ್ನು ನಮ್ಮನೆ ಯುವರಾಣಿ ಸೀರಿಯಲ್ ಕಥೆ ಏನೆಂದರೆ ಅದೊಂದು ಮುದ್ದಾದ ಕುಟುಂಬ ಶ್ರೀಮಂತಿಕೆಯಷ್ಟೇ ಪ್ರೀತಿಯೂ ಹೆಚ್ಚಾಗಿದೆ ಆ ಮನೆ ಮಗಳು ಮೀರಾ ಕೆಲಸದಾಕೆಯ ಮಗಳಾದರೂ ಮನೆಯ ಮಗಳಷ್ಟೇ ಪ್ರಾಮುಖ್ಯತೆ ಆಕೆಗಿದೆ. ಚಿಟಪಟ ಅಂತ ಮಾತಾಡುವ ಈಕೆಗೆ ಮನೆ ಮಂದಿ ಇಟ್ಟಿರುವ ಹೆಸರು ಕೋಳಿಮರಿ ಇದು ನಮ್ಮನೆ ಯುವರಾಣಿ ಸೀರಿಯಲ್’ನ ಕಥಾ ಹಂದರ. ಇನ್ನು ಮೀರಾ ಪಾತ್ರ ಮಾಡ್ತಾ ಇರುವ ಅಂಕಿತ ಅವರ ಕುಟುಂಬ ಕೂಡ ರಂಗಭೂಮಿ ಕಲಾವಿದರ ಕುಟುಂಬ.

ಇವರ ತಂದೆ ಮತ್ತು ತಾಯಿ ಸಿನಿಮಾ ಹಾಗೂ ಸೀರಿಯಲ್ನಲ್ಲಿ ನಟಿಸಿರುವ ಅನುಭವ ಇದೆ ಹಾಗಾಗಿ ಸಹಜವಾಗಿ ಇವರಿಗೆ ಬಾಲ್ಯದಿಂದಲೇ ನಟನಾ ಆಸಕ್ತಿ ಬೆಳೆದಿದೆ. ಹೀಗಿರುವಾಗ ನಟನೆ ಮಾಡೋದಕ್ಕೆ ಅಷ್ಟಾಗಿ ಕಷ್ಟ ಪಡದ ಅಂಕಿತ ಅವರು ಸುಲಭವಾಗಿ ನಮ್ಮನೆ ಯುವರಾಣಿ ಸೀರಿಯಲ್’ನಲ್ಲಿ ಮೀರಾ ಪಾತ್ರವನ್ನು ನಿರ್ವಹಿಸುತ್ತಾರೆ. ಇವರ ಅದ್ಭುತವಾದ ನಟನೆಯನ್ನು ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದಾರೆ. ಇನ್ನು ಅಂಕಿತ ನಟನೆ ಮಾಡುವುದು ಮಾತ್ರವಲ್ಲದೆ ಉತ್ತಮವಾದ ಹಾಡುಗಾರ್ತಿಯು ಹೌದು ಇಷ್ಟೆಲ್ಲಾ ಪ್ರತಿಭೆಯನ್ನು ಹೊಂದಿರುವ ಮೀರಾ ಅಲಿಯಾಸ್ ಅಂಕಿತ ಅವರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ 6 ರಿಂದ ಎಷ್ಟು 8 ಸಾವಿರದ ತನಕ ಸಂಭಾವನೆಯನ್ನು ಪಡೀತಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ
ಧನ್ಯವಾದಗಳು.

LEAVE A REPLY

Please enter your comment!
Please enter your name here