ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ‘ಗಟ್ಟಿಮೇಳ’. ಈ ಧಾರವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತದೆ. ಅಲ್ಲದೇ, ಅತ್ಯಂತ ಕಡಿಮೆ ಅವಧಿಯಲ್ಲೇ ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ತಮವಾದ ಕಥಾಹಂದರವನ್ನು ಹೊಂದಿರುವ ಈ ಧಾರವಾಹಿ ಜನರ ಮೆಚ್ಚುಗೆ ಪಡೆಯುವ ಯಶಸ್ವಿಯಾಗಿದೆ. ಈ ಧಾರವಾಹಿಯಲ್ಲಿ ನಟಿಸಿರುವ ಪಾತ್ರಧಾರಿಗಳು ಕೂಡ ಜನರ ಮನಸ್ಸಿನಲ್ಲಿ ಜಾಗ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಅದರಲ್ಲೂ ಗಟ್ಟಿಮೇಳ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಆರತಿ ಪಾತ್ರಧಾರಿ ಅಶ್ವಿನಿ ಅವರು ಪ್ರತಿ ಎಪಿಸೋಡ್ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬ ಕುತೂಹಲ ಸಾಮಾನ್ಯವಾಗಿ ಧಾರವಾಹಿ ಪ್ರೇಕ್ಷಕರಾದ ನಿಮಗೆ ಇದ್ದೇ ಇರುತ್ತದೆ.
ಸಂಜೆ ಆದರೆ ಸಾಕು ಧಾರವಾಹಿಯ ಅಭಿಮಾನಿಗಳು ತಪ್ಪದೇ ಟಿವಿ ಮುಂದೆ ಹಾಜರಾಗುತ್ತಾರೆ. ಅದರಲ್ಲೂ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಟಿಆರ್ಪಿ ಪಡೆಯುತ್ತಿರುವ ಗಟ್ಟಿಮೇಳ ಧಾರವಾಹಿ ಮುಂಚೂಣಿಯಲ್ಲಿದೆ. ಈ ಧಾರವಾಹಿಯಲ್ಲಿ ಅಮೂಲ್ಯ ಹಾಗೂ ವೇದಾಂತ್ ಪಾತ್ರವನ್ನು ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ. ಉಳಿದ ಕಲಾವಿದರ ಪಾತ್ರಗಳನ್ನು ಇಷ್ಟ ಪಟ್ಟಿದ್ದಾರೆ. ಅವರಲ್ಲಿ ಆರತಿ ಪಾತ್ರವನ್ನು ನಿರ್ವಹಿಸುತ್ತಿರುವ ಅಶ್ವಿನಿ ಕೂಡ ಒಬ್ಬರಾಗಿದ್ದಾರೆ.

ಗಟ್ಟಿಮೇಳ ಧಾರವಾಹಿಯಲ್ಲಿ ನಟಿಸುವುದಕ್ಕೂ ಮುನ್ನಾ ಬೇರೆ ಧಾರವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಇವರಿಗೆ ಅತಿ ಹೆಚ್ಚು ಹೆಸರು ತಂದುಕೊಟ್ಟ ಧಾರವಾಹಿ ಗಟ್ಟಿಮೇಳ. ಕನ್ನಡ ಕಿರುತೆರೆಯಲ್ಲಿ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ಇವರು ಗಟ್ಟಿಮೇಳ ಧಾರವಾಹಿಯಲ್ಲಿ ನಟಿಸಲು ಪ್ರತಿ ಎಪಿಸೋಡ್ಗೆ ಬರೋಬ್ಬರಿ 8,000 ದಿಂದ 12,000ದಷ್ಟು ಸಂಭಾವನೆಯನ್ನು ಪಡೆಯುತ್ತಾರೆ. ಆರತಿ ಅಲಿಯಾಸ್ ಅಶ್ವಿನಿಗೆ ಮತ್ತಷ್ಟು ಅವಕಾಶಗಳು ಒದಗಿ ಬರಲಿ. ಆ ಮೂಲಕ ಕನ್ನಡ ಧಾರವಾಹಿ ಪ್ರೇಮಿಗಳಿಗೆ ಮನರಂಜನೆ ನೀಡಲಿ ಎಂದು ನಾವೂ ಕೂಡ ಹಾರೈಸುತ್ತೇವೆ.