ಪ್ರಭಾಸ್ ಸಂಭಾವನೆ ಎಷ್ಟು ಗೊತ್ತಾ ?

0
124

ಪ್ರಭಾಸ್,ತೆಲುಗು ಚಿತ್ರರಂಗದ ಒಬ್ಬ ಪ್ರತಿಭಾನ್ವಿತ ನಟ !
2002 ರಲ್ಲಿ ‘ಈಶ್ವರ್’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಭಾಸ್ ಅವರ ತದನಂತರ ವರ್ಷಂ (2004), ಚತ್ರಪತಿ (2005), ಚಕ್ರ (2005), ಬಿಲ್ಲಾ (2009), ಡಾರ್ಲಿಂಗ್ (2010), ಮಿಸ್ಟರ್ ಪರ್ಫೆಕ್ಟ್ (2011), ಮತ್ತು ಮಿರ್ಚಿ (2013) ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಡುತ್ತಾ ಬಂದಿದ್ದಾರೆ!

ನಂತರ ರಾಜಮೌಳಿ ನಿರ್ದೇಶನದಲ್ಲಿ ಬಂದ ಬಾಹುಬಲಿ ದ ಬಿಗಿನಿಂಗ್(2015) ಸಿನಿಮಾದಲ್ಲಿ ಅಭಿನಯ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು..ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ನಾಲ್ಕನೇ ಚಿತ್ರವಾಗಿದೆ..

ನಂತರ ಬಾಹುಬಲಿಯ ಮುಂದಿನ ಭಾಗವಾದ ಬಾಹುಬಲಿ ಕನ್ಕ್ಲೂಷನ್ (2017) ಈ ಸಿನಿಮಾ ವಿಶ್ವಾದ್ಯಂತ ಭಾರಿ ಸದ್ದು ಮಾಡಿತ್ತು !ಇದು ಕೇವಲ ಹತ್ತು ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲಿ ₹ 1,000 ಕೋಟಿ (ಯುಎಸ್ $ 155 ಮಿಲಿಯನ್) ಗಳಿಸಿದ ಮೊದಲ ಭಾರತೀಯ ಚಲನಚಿತ್ರವಾಯಿತು!

ಈಗ ಎರಡು ವರ್ಷಗಳ ಬಳಿಕ ಡಾರ್ಲಿಂಗ್ ಪ್ರಭಾಸ್ ,ಸಾಹೋ ಎಂಬ ಚಿತ್ರದಲ್ಲಿ ಮತ್ತೆ ರಿ ಎಂಟ್ರಿ ತೆಗೆದುಕೊಂಡಿದ್ದಾರೆ ! ಇನ್ನು ಸಾಹೋ ದೊಡ್ಡ ಬಜೆಟ್ನ ಸಿನಿಮಾ! ಆ್ಯಕ್ಷನ್ ಮತ್ತು ರೊಮ್ಯಾಂಟಿಕ್ ಕಥೆಯುಳ್ಳ ಸಾಹು , ತೆಲುಗು ,ತಮಿಳು ಹಿಂದಿ ಸೇರಿದಂತೆ ಮೂರು ಭಾಷೆಯಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ!
ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾಗೆ , ಸುಜಿತ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ !

ಇನ್ನು ಈ ಚಿತ್ರಕ್ಕೆ ಬಾಹುಬಲಿ ಪ್ರಭಾಸ್ 100 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ! ಈ ಮೂಲಕ ಬಾಲಿವುಡ್ ತಾರೆಗಳನ್ನು ಹಿಂದಿಕ್ಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ!

ಇನ್ನು ಈ ಚಿತ್ರಕ್ಕೆ ಬಿ ಟೌನ್ ನ ಬೆಡಗಿ ಶ್ರದ್ಧಾ ಕಪೂರ್ ನಾಯಕಿ ನಟಿಯಾಗಿ ಅಭಿನಯಿಸಿದ್ದು,ಈ ಸಿನಿಮಾಗೆ 7 ಕೋಟಿ ಸಂಭಾವನೆಯನ್ನು ತೆಗೆದುಕೊಂಡಿದ್ದಾರಂತೆ !

ಸಾಹೋದಲ್ಲಿ ಚಂಕಿ ಪಾಂಡೆ, ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ ಮತ್ತು ಜಾಕಿ ಶ್ರಾಫ್ ನಟಿಸಿದ್ದಾರೆ. ಸಾಹೋ ಇದೇ ಆಗಸ್ಟ್ 30, 2019 ರಂದು ಬಿಡುಗಡೆಯಾಗಲಿದೆ

LEAVE A REPLY

Please enter your comment!
Please enter your name here