ಕುರುಕ್ಷೇತ್ರ ಚಿತ್ರದ 10 ದಿನದ ಕಲೆಕ್ಷನ್ ಎಷ್ಟು ಗೊತ್ತಾ ?

0
242

ಕುರುಕ್ಷೇತ್ರ ಚಿತ್ರ ಕನ್ನಡದ ಹೆಮ್ಮೆ ಅಂತಾನೇ ಹೇಳಬಹುದು. ಕನ್ನಡದ ಬಹುಕೋಟಿ ವೆಚ್ಚದ ಸಿನಿಮಾ.. ಹಾಗೆಯೇ ಎಲ್ಲಾ ಚಿತ್ರರಂಗದ ತಾರೆಯರು ಒಟ್ಟಾಗಿ ಅಭಿನಯಿಸಿರುವ ಚಿತ್ರ .. ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂನಲ್ಲೂ ಕುರುಕ್ಷೇತ್ರ ಹವಾ ಜೋರಾಗಿಯೆ ಇದೆ. ಇನ್ನು ಚಿತ್ರದಲ್ಲಿ ದುರ್ಯೋಧನನ ಪಾತ್ರ ಮಾಡಿರುವ ದರ್ಶನ್ ಅವರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ .. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರರಂಗದವರು ದರ್ಶನ್ ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.ಈ ಪಾತ್ರ ಕಮ್ಮಿ ಆಯ್ತು, ಈ ಪಾತ್ರ ಜಾಸ್ತಿಯಾಯಿತು ಎಂದು ಹೇಳಲಾರದೆ ಎಲ್ಲ ಪಾತ್ರಗಳಿಗೂ ಸರಿಸಮನಾದ ತೂಕ ನೀಡಿದ್ದಾರೆ ನಿರ್ದೇಶಕ ನಾಗಣ್ಣ .

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್, ಡಿ.ಬಾಸ್ ದರ್ಶನ್ ರವರ ಕುರುಕ್ಷೇತ್ರ ಚಿತ್ರ, ಹತ್ತು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ ?ದರ್ಶನ್ ಅವರ ಕುರುಕ್ಷೇತ್ರ ಚಿತ್ರ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆಯಾ, ಇಲ್ಲವಾ?

ಕುರುಕ್ಷೇತ್ರ ಬಿಡುಗಡೆಯಾಗಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅಲ್ಲದೆ ಚಿತ್ರ ಇತ್ತೀಚೆಗೆ ಮಲಯಾಳಂ ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಿ ಅಲ್ಲಿಯೂ ಸಹ ದಚ್ಚು ರವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಹಾಗಾದರೆ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿರಬಹುದು ಅಂದ್ರೆ ಕುರುಕ್ಷೇತ್ರ ಮೊದಲನೇ ದಿನವೇ ಹದಿಮೂರು ಕೋಟಿ ಕಲೆಕ್ಷನ್ ಮಾಡಿತ್ತು.

ಎರಡನೆ ದಿನ ಹನ್ನೆರಡು ಕೋಟಿ ಹಾಗೆಯೇ ಮೂರನೇ ದಿನ ಎಂಟು ಕೋಟಿ ಅರವತ್ತು ಲಕ್ಷ, ನಾಲ್ಕನೇ ದಿನ ಏಳು ಕೋಟಿ ನಲವತ್ತು ಲಕ್ಷ ! ಹೀಗೆ ಎಲ್ಲ ಭಾಷೆಯಲ್ಲೂ ಕುರುಕ್ಷೇತ್ರ ಅರುವತ್ತು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಮೂಲಗಳಿಂದ ತಿಳಿದು ಬರುತ್ತಿದೆ.ಇನ್ನು ಕೆಲವೇ ದಿನಗಳಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತದೆ ಎಂಬುದು ಕೆಲವು ಸಿನಿ ತಂತ್ರಜ್ಞರ ಲೆಕ್ಕಾಚಾರ.ಯಾಕೆಂದರೆ ಕುರುಕ್ಷೇತ್ರ ಬಿಡುಗಡೆಯಾಗಿ ಹತ್ತು ದಿನದ ಮೇಲಾದರೂ ಸಾಕಷ್ಟು ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.ಅಷ್ಟೇ ಅಲ್ಲದೆ ಇನ್ನೂ ನೂರು ಕೋಟಿ ಆಗುವ ಸಂಭವವೂ ಇದೆ.

ಯಾಕೆಂದರೆ ಹಿಂದಿಯಲ್ಲೂ ಸಹಿತ ಕುರುಕ್ಷೇತ್ರ ಬಿಡುಗಡೆಗೆ ಸಜ್ಜಾಗಿದೆ. ಭಾರತಾದ್ಯಂತ ಹಿಂದಿಯಲ್ಲಿ ಕುರುಕ್ಷೇತ್ರವನ್ನು ನೋಡಲು ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಹಿಂದಿ ಭಾಷೆಯಲ್ಲಿ ಸಿನಿಮಾವನ್ನು ನೋಡುವ ಪ್ರೇಕ್ಷಕರು ಭಾರತಾದ್ಯಂತ ಸಿಕ್ಕಾಪಟ್ಟೆ ಇರುವುದರಿಂದ ಕುರುಕ್ಷೇತ್ರ ಚಿತ್ರಕ್ಕೆ ಉತ್ತಮ ಪ್ರೇಕ್ಷಕ ವರ್ಗ ದೊರೆಯುವ ಅವಕಾಶ ತುಂಬಾ ಇದೆ !ಅಷ್ಟೇ ಅಲ್ಲದೆ ದುರ್ಯೋಧನ ದರ್ಶನ್ ಅವರಿಗೆ ಭಾರತಾದ್ಯಂತ ಅಭಿಮಾನಿಗಳ ಸಂಖ್ಯೆ ಹೆಚ್ಚುವ ಭರವಸೆಯು ಇದೆ !ಕುರುಕ್ಷೇತ್ರ ಇಷ್ಟೊಂದು ಕಲೆಕ್ಷನ್ ಮಾಡಲು ಹಾಗೂ ಜನಸಾಮಾನ್ಯರ ಬಳಿ ಇಷ್ಟು ವೇಗವಾಗಿ ತಲುಪಲು ಮುಖ್ಯವಾದ ಕಾರಣ ಕರ್ತರು ಯಾರೆಂದರೆ ಅದು ಡಿ. ಬಾಸ್ ಅಭಿಮಾನಿಗಳು. ಹೌದು ಡಿ. ಬಾಸ್ ಅಭಿಮಾನಿಗಳು ತಮ್ಮ ತಾಕತ್ತು ಏನೆಂಬುದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ !

LEAVE A REPLY

Please enter your comment!
Please enter your name here