ಅಷ್ಟ ಲಕ್ಷ್ಮೀಯರ ಬಗ್ಗೆ ನಿಮಗೆಷ್ಟು ಗೊತ್ತು…

0
254

ಲಕ್ಷ್ಮೀ , ಮಹಾಲಕ್ಷ್ಮೀ , ಅಷ್ಟ ಲಕ್ಷ್ಮೀ ಇವು ಸಮೃದ್ಧಿ – ಸಂಪತ್ತು ಸೂಚಿಸುವ ಪದಗಳು. ಲಕ್ಷ್ಮೀ ಸಮುದ್ರ ಮಂಥನದಲ್ಲಿ ಉಧ್ಭವಿಸಿದವಳು ಹಾಗೆಯೇ ಭೃಗು ಮಹರ್ಷಿಯ ಮಗಳು ಅನ್ನುವ ಉಲ್ಲೇಖಗಳಿವೆ. ದುರ್ವಾಸರ ಶಾಪದಿಂದ ಸ್ವರ್ಗಲೋಕದಿಂದ ಕ್ಷೀರ ಸಾಗರಕ್ಕೆ ಬಂದು ನೆಲೆಸಿದಳು ಹೀಗೆ ಲಕ್ಷ್ಮೀಯ ಬಗ್ಗೆ ಅನೇಕ ಕಥೆಗಳಿವೆ.
ಲಕ್ಷ್ಮೀ ದೇವಿಗೆ ಪದ್ಮಪ್ರಿಯೆ , ಪದ್ಮಜ ,ಪದ್ಮಮುಖಿ, ವಿಷ್ಣು ಪ್ರಿಯೆ ಇತ್ಯಾದಿ ಹೆಸರುಗಳಿವೆ. ಲಕ್ಷ್ಮೀ ಅಷ್ಟ ತ್ರಿಕೋನಗಳಲ್ಲಿ ನೆಲೆಸಿರುತ್ತಾಳೆ. ಹೀಗಾಗಿ ಅಷ್ಟ ತ್ರಿಕೋನ ಲಕ್ಷ್ಮೀಯ ಸಾನಿಧ್ಯದ ಸಂಕೇತವಾಗಿದೆ. ಲಕ್ಷ್ಮೀಗೆ ಅನೇಕ ರೂಪಗಳಿವೆ, ಅವತಾರಗಳಿವೆ, ಬಹು ಜನಪ್ರಿಯವಾಗಿರುವ ಅಷ್ಟಲಕ್ಷ್ಮೀಯರ ಪರಿಚಯ ಇಲ್ಲಿಯ ಮುಖ್ಯ ಉದ್ದೇಶ ಹಾಗು ಅವುಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಲು ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

” ಅಷ್ಟ ಲಕ್ಷ್ಮೀಯರು “

1) ಆದಿ ಲಕ್ಷ್ಮೀ – ಚತುರ್ಭುಜಾಂಗಿನಿ, ಕಮಲದ ಹೂ, ಬಿಳಿ ಧ್ವಜ ಹೊಂದಿದವಳು, ಅಭಯ ಮುದ್ರಾ, ವರದ ಮುದ್ರಾ ಹೊಂದಿದವಳು.
2) ಧನಲಕ್ಷ್ಮಿ- ಸಂಪತ್ತಿನ ಒಡತಿ, ಕೆಂಪು ವಸ್ತ್ರ ಧರಿಸಿದವಳು, ಶಂಕ , ಚಕ್ರ, ಗಧೆ, ಕಳಸ ಹೊಂದಿದವಳು. ಅಭಯ ಮುದ್ರಾದಿಂದ ಚಿನ್ನವನ್ನು ಸುರಿಸುವವಳು, ವರದ ಮದ್ರಾದಲ್ಲಿ
ತಾಳೆ/ ಕತ್ತಿ ಹಿಡಿದವಳು.
3) ಧಾನ್ಯ ಲಕ್ಷ್ಮೀ – ಅಷ್ಟ ಭುಜಾಂಗಿನಿ, ಹಸಿರು ವಸ್ತ್ರವುಳ್ಳವಳು ಎರಡು ಹಸ್ತದಲ್ಲಿ ಕಮಲ, ಬಾಳೆ, ತಾಳೆಯ ಎಲೆ ಹೊಂದಿರುವವಳು.
4) ಗಜಲಕ್ಷ್ಮೀ – ಚತುರ್ಭುಜಾಂಗಿನಿ, ಕಮಲ ಹಸ್ತದವಳು , ಎರಡು ಮುದ್ರೆಗಳಿಗೆ ಗಜದಿಂದ ಜಲ ಪೂರಣ , ಕೆಂಪು ವಸ್ತ್ರವುಳ್ಳವಳು.
5) ಸಂತಾನ ಲಕ್ಷ್ಮೀ – ಷಟ್ ಭುಜಾಂಗಿನಿ, ಎರಡು ಹಸ್ತಗಳಲ್ಲಿ ಕಳಸ ಹೊಂದಿದವಳು, ತೊಡೆಯ ಮೇಲೆ ಮಗು, ಮಗುವಿನ ಕೈಯಲ್ಲಿ ಕಮಲ ಸಂತಾನ ಕರುಣಿಸುವ ಲಕ್ಷ್ಮೀ.
6)ಧೈರ್ಯ ಲಕ್ಷ್ಮೀ – ಅಷ್ಟ ಭುಜಾಂಗಿನಿ, ಕೆಂಪು ವಸ್ತ್ರ , ಶಂಕ, ಚಕ್ರ , ಗಧೆ, ಕತ್ತಿ, ತ್ರಿಶೂಲ
ಹೊಂದಿದವಳು, ಶಕ್ತಿ ಹಾಗು ಧೈರ್ಯ ನೀಡುವ ಲಕ್ಷ್ಮೀ.
7) ವಿಜಯ ಲಕ್ಷ್ಮೀ – ಯುದ್ಧ ಹಾಗು ಇತರೆ ಸಂಧರ್ಭಗಳಲ್ಲಿ ವಿಜಯಿಯನ್ನಾಗಿ ಮಾಡುವ ಲಕ್ಷ್ಮೀ ವಿಜಯಲಕ್ಷ್ಮೀ, ಅಷ್ಟ ಭುಜಾಂಗಿನಿ, ಕೆಂಪುವಸ್ತ್ರ, ಶಂಕ , ಚಕ್ರ, ಗಧೆ, ಕತ್ತಿ ಹೊಂದಿದವಳು.
8) ವಿದ್ಯಾಲಕ್ಷ್ಮೀ – ಜ್ಞಾನಲಕ್ಷ್ಮೀ, ಬಿಳಿ ವಸ್ತ್ರ ಧಾರಿಣಿ, ಹಸ್ತಗಳಲ್ಲಿ ವೇದಗಳ ತಾಳೆಗಳನ್ನು ಹಿಡಿದಿರುವವಳು.

ಐಶ್ವರ್ಯ ಲಕ್ಷ್ಮೀ, ಸೌಭಾಗ್ಯ ಲಕ್ಷ್ಮೀ , ವರಮಹಾಲಕ್ಷ್ಮೀ ಹೀಗೆ ಇನ್ನು ಅನೇಕ ಬಗೆಯ ಲಕ್ಷ್ಮೀಯ ರೂಪಗಳಿವೆ. ಅಷ್ಟ ಲಕ್ಷ್ಮೀಯರ ದೇವಸ್ಥಾನಗಳು ಚೆನೈ , ಹೈದರಾಬಾದ್, ಮಹಾರಾಷ್ಟ್ರಗಳಲ್ಲಿವೆ. ಸಿಡ್ನಿ, ಕ್ಯಾಲಿಪೋರ್ನಿಯಾ , ನೇಪಾಳ ಸೇರಿದಂತೆ ವಿದೇಶಗಳಲ್ಲೂ ಇವೆ. ಅಷ್ಟ ಲಕ್ಷ್ಮೀಯರ ಜೊತೆ ಹಲವಾರು ಲಕ್ಷ್ಮೀಯರು ನಮ್ಮ ಜೀವನ ಬೆಳಗುವ ಬೆಳಕಿನ ಲಕ್ಷ್ಮೀಗಳಾಗಿ ದ್ದಾರೆ. ಎಲ್ಲಿ ಲಕ್ಷ್ಮೀ ಇರುತ್ತಾಳೋ , ಅಲ್ಲಿ ಸಕಲ ಸೌಭಾಗ್ಯಗಳಿರುತ್ತವೆ, ಹೀಗಾಗಿ ನಾವು ಸದಾ ಲಕ್ಷ್ಮೀಯನ್ನು ಪೂಜಿಸಿ, ಲಕ್ಷ್ಮೀಯ ಕೃಪೆ ಕಟಾಕ್ಷೆಗೆ ಪಾತ್ರರಾಗೋಣ.

LEAVE A REPLY

Please enter your comment!
Please enter your name here