ದೇಶದ ಪ್ರಗತಿಯನ್ನು ಹೀಗೆ ನೋಡಿದ್ರೆ ಹೇಗಿರುತ್ತೆ..!?

0
245

ದೇಶವೇ ಹೆಮ್ಮೆ ಪಡುವ ಸಾಧನೆಯೊಂದು ಸದ್ದಿಲ್ಲದೆ ನಡೆದಿದೆ. ಹೆಣ್ಣು ಮಕ್ಕಳ ಈ ಸಾಧನೆ ಈಗ ಹೆಮ್ಮೆಯ ಜೊತೆಗೆ ದಿಟ್ಟ ನಿರ್ಧಾರ ಮತ್ತು ಪರಿಶ್ರಮಕ್ಕಿರುವ ಫಲವನ್ನು ತೆರೆದಿಟ್ಟಿದೆ. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಸಾಧನೆ ಮಾಡುವುದು ಎಲ್ಲರಿಗೂ ಸಾಧ್ವಿಲ್ಲ ಎಂಬ ಮಾತಿಗೆ ಈ ಹೊಸ ಸಾಧನೆಯ ಕಥೆ ಮತ್ತಷ್ಟು ಜನರಿಗೆ ಸ್ಫೂರ್ತಿಯಾಗಬಹುದು.

ಭಾರತದ ನಾಗರಿಕ ಸೇವಾ ಪರೀಕ್ಷೆ ಮುಖ್ಯವಾಗಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗ ಬಯಸುವವರು ಕಠಿಣ ಸವಾಲುಗಳನ್ನು ಎದುರಿಸಬೇಕು. ಇನ್ನು ಬಡವರಾಗಿದ್ದರೆ ಇದು ನಿಜಕ್ಕೂ ಆಗಸದಲ್ಲಿನ ಚಂದ್ರನಂತೆ ನೋಡಲು ಚೆನ್ನಾಗಿ ಕಂಡರೂ ಬಲು ಕಷ್ಟ ಎನ್ನವುದೇ ವಾಡಿಕೆ.

ಬಡತನದ ಸವಾಲನ್ನು ಯಶಸ್ವಿಯಾಗಿ ಎದುರಿಸಿ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಹೆಣ್ಣು ಮಕ್ಕಳು ಈಗ ದೇಶವ್ಯಾಪಿ ಸುದ್ದಿಯಾಗಿದ್ದಾರೆ. ರಾಜಸ್ಥಾನದ ಒಂದೇ ಕುಟುಂಬದ ಮೂವರು ಯುವತಿಯರ ಈ ಸಾಧನೆ ಎಲ್ಲರ ಹುಬ್ಬೇರಿಸಿದೆ.

ಹೆಣ್ಣುಮಕ್ಕಳ ಶೋಷಣೆ ಮತ್ತು ಬಾಲ್ಯವಿವಾಹಗಳಂತಹ ಸಮಸ್ಯೆ ಹೆಚ್ಚಾಗಿರುವ ರಾಜಸ್ಥಾನದಲ್ಲಿಯೇ ಇಂತಹ ಅಪರೂಪದ ಘಟನೆ ನಡೆದಿರುವುದು ಯುವತಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಕಮಲ, ಗೀತ ಮತ್ತು ಮಮತಾ ಎಂಬ ಸಹೋದರಿಯರು ಕ್ರಮವಾಗಿ 32, 64, 128 ರ್ಯಾಂಕ್ ಪಡೆಯುವ ಮೂಲಕ ಸಾಧಕರಾಗಿದ್ದಾರೆ.

ಮಕ್ಕಳ ಬೆಳವಣಿಗೆಯಲ್ಲಿ ತಾಯಿ ತ್ಯಾಗಮಯಿ ಮತ್ತು ಆಕೆಯ ನಿಸ್ವಾರ್ಥ ಪ್ರೀತಿ ಮತ್ತು ಧೈರ್ಯ ಎಂತಹ ಕೆಲಸವನ್ನಾದ್ರೂ ಮಾಡಿಸುತ್ತೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ವೃತಿಯಲ್ಲಿ ಅಗಸರಾಗಿ ತನ್ನ ಮೂವರು ಹೆಣ್ಣು ಮಕ್ಕಳನ್ನು ಉನ್ನತ ಅಧಿಕಾರಿಗಳಾಗಿ ರೂಪಿಸುವÀ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಇನ್ನು ವರ್ಷದಿಮದ ವರ್ಷಕ್ಕೆ ಮಹಿಳಾ ಅಧಿಕಾರಿಗಳ ಸಂಖ್ಯೆಯಲ್ಲಿ ಹೆಚ್ಚಾಗುತ್ತಿರುವುದು ಮಹತ್ತರ ಬೆಳವಣಿಗೆ ಎಂದೇ ಪರಿಗಣಿಸಬೇಕು.

ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಇರುವ ಕಟ್ಟುಪಾಡುಗಳು ಬೇರೆ ಎಲ್ಲೂ ಇಲ್ಲ ಹೀಗಿರುವಾಗ ಇಂತಹ ಲಕ್ಷ ಲಕ್ಷ ಸವಾಲುಗಳನ್ನು ಮಹಿಳೆಯರು ಪ್ರತಿದಿನ ಮೆಟ್ಟುತ್ತಲೇ ಇದ್ದಾರೆ. ಇಂತಹ ಘಟನೆಗಳು ಮತ್ತೆ ಮತ್ತೆ ದೇಶದಲ್ಲಿ ಪ್ರಗತಿಯ ವಿಚಾರವನ್ನು ತನ್ನ ಸೂಚ್ಯಂಕದ ಮೂಲಕ ತಿಳಿಸುತ್ತದೆ. ಹಣಕಾಸು ವಿಚಾರದಲ್ಲಿ ಪ್ರಗತಿ ಲೆಕ್ಕಹಾಕುವ ಬದಲು ಇಂತಹ ವಿಚಾರದಲ್ಲಿ ದೇಶದ ಪ್ರಗತಿಯನ್ನು ಅಳೆದು ನೊಡದಿದ್ರೆ ನಾವು ಸಾಧನೆಯ ಹಾದಿಯಲ್ಲಿದ್ದೇವೆ ಎಂದು ತಿಳಿಯುತ್ತದೆ.

LEAVE A REPLY

Please enter your comment!
Please enter your name here