ಸಿನಿಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳನ್ನು ಹೇಗೆ ಚಿತ್ರೀಕರಿಸುತ್ತಾರೆ…ಅದು ರೀಲಾ…ರಿಯಲ್ಲಾ…?

0
199

ಮನೆಮಂದಿಯೆಲ್ಲಾ ಕುಳಿತು ಸಿನಿಮಾ ನೋಡುವಾಗ ಇದ್ದಕ್ಕಿದ್ದಂತೆ ರೊಮ್ಯಾನ್ಸ್ ದೃಶ್ಯವಾಗಲಿ , ಲಿಪ್ಲಾಕ್ ದೃಶ್ಯವಾಗಲಿ ಬಂದರೆ ಅಲ್ಲಿದ್ದವರು ಮುಜುಗರಕ್ಕೆ ಒಳಗಾಗುವುದು ಸಹಜ. ಆ ವೇಳೆ ಚಾನೆಲ್ ಬದಲಿಸಲೂ ಸಾಧ್ಯವಾಗದೆ, ಅಲ್ಲಿಂದ ಎದ್ದು ಹೋಗಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕುವವರೇ ಹೆಚ್ಚು.

 

 

ಹಿಂದಿನ ಕಾಲದ ಸಿನಿಮಾಗಳಲ್ಲಿ ರೊಮ್ಯಾನ್ಸ್ ದೃಶ್ಯಗಳಿಗಾಗಿ ಎರಡು ಹೂಗಳನ್ನು ಜೊತೆಯಲ್ಲಿ ತೋರಿಸುವುದು, ಪೋಟೋದಲ್ಲಿ ಇರುವ ಪ್ರಣಯ ಪಕ್ಷಿಗಳನ್ನು ತೋರಿಸುವುದು ನಡೆಯುತ್ತಿತ್ತು. ಆದರೆ ಈಗ ಆ ರೀತಿ ಅಲ್ಲ, ಕಾಲ ಬದಲಾಗಿದೆ. ಪಾತ್ರಕ್ಕಾಗಿ ನಾವು ಯಾವ ದೃಶ್ಯಗಳಲ್ಲಾದರೂ ನಟಿಸಲು ರೆಡಿ ಎಂದು ಮುಂದೆ ಬರುವವರೇ ಹೆಚ್ಚು. ಆದರೆ ಕೆಲವರು ಯಾವುದೇ ಕಾರಣಕ್ಕೂ ಅಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ಇನ್ನೂ ಕೆಲವೊಮ್ಮೆ ಅಂತಹ ದೃಶ್ಯಗಳಲ್ಲಿ ನಟಿಸಲು ಸಂಭಾವನೆಗಿಂತ ಹೆಚ್ಚು ಹಣ ಪಡೆಯುವುದೂ ಉಂಟು.

 

 

ನಾನು ಲಿಪ್ಲಾಕ್, ಇಂಟಿಮೇಟ್ ದೃಶ್ಯದಲ್ಲಿ ನಟಿಸಲು ರೆಡಿ ಎನ್ನುವವರು ನಿಜಕ್ಕೂ ಯಾವುದೇ ಮುಜುಗರಕ್ಕೆ ಒಳಗಾಗದೆ ಅಂತಹ ದೃಶ್ಯಗಳಲ್ಲಿ ನಟಿಸುತ್ತಾರೆ. ಇಲ್ಲಿ ನಾಯಕ, ನಾಯಕಿ ಅಥವಾ ಆ ದೃಶ್ಯದಲ್ಲಿ ನಟಿಸುವವರ ಇಬ್ಬರ ಒಪ್ಪಿಗೆ ಹಾಗೂ ಕೆಮಿಸ್ಟ್ರಿ ಬಹಳ ಮುಖ್ಯ. ಕೆಲವೊಮ್ಮೆ ಅಂತಹ ದೃಶ್ಯಗಳು ನೈಸರ್ಗಿಕವಾಗಿ ಬರಬೇಕು ಎಂಬ ಕಾರಣಕ್ಕೆ ದೃಶ್ಯವನ್ನು ಚಿತ್ರೀಕರಿಸುವ ಕೋಣೆಯಲ್ಲಿ ನಿರ್ದೇಶಕ, ನಟಿಸುವ ಇಬ್ಬರು ಬಿಟ್ಟರೆ ಬೇರೆ ಯಾರೂ ಇರುವುದಿಲ್ಲ.

 

 

ಆದರೆ ಯಾವುದೇ ಮುಜುಗರ ಇಲ್ಲ ಎನ್ನುವವರು ಧೈರ್ಯವಾಗಿ ಎಲ್ಲರ ಮುಂದೆ ಲಿಪ್ಲಾಕ್ ಮಾಡಲು ರೆಡಿಯಿರುತ್ತಾರೆ. ನಾನು ಪಾತ್ರಕ್ಕಾಗಿ ಈ ದೃಶ್ಯದಲ್ಲಿ ನಟಿಸುತ್ತಿದ್ದೇನೆ, ನನ್ನ ಸುತ್ತ ಜನರು ಇದ್ದಾರೆ ಎಂಬ ಪರಿಜ್ಞಾನ ನಟಿಸುವವರಿಗೆ ಇದ್ದೇ ಇರುತ್ತದೆ. ಅದು ಕೇವಲ ಪಾತ್ರಕ್ಕಾಗಿ ಅಷ್ಟೇ. ಶೂಟಿಂಗ್ ಮುಗಿದ ನಂತರ ಕೆಲವರು ಅವರು ಯಾರೋ , ನಾವು ಯಾರೋ ಎಂಬಂತೆ ಇದ್ದರೆ, ಮತ್ತೆ ಕೆಲವರು ಸ್ನೇಹಿತರಂತೆ ಇರುತ್ತಾರೆ.

 

 

ಆದರೆ ಸಿನಿಮಾದಲ್ಲಿ ತೋರಿಸುವ ಎಲ್ಲಾ ಕಿಸ್ಸಿಂಗ್ ಸೀನ್ಗಳು ರಿಯಲ್ ಅಲ್ಲ, ಒಂದು ವೇಳೆ ಪಾತ್ರಕ್ಕೆ ಆ ದೃಶ್ಯ ಅಗತ್ಯವಿದ್ದು, ನಟ-ನಟಿಯರು ಲಿಪ್ಲಾಕ್ ಮಾಡಲು ಒಪ್ಪಿಗೆ ಇಲ್ಲದಿದ್ದರೆ, ಆ ಸಮಯದಲ್ಲಿ ಗ್ರಾಫಿಕ್ಸ್ ಬಳಸಲಾಗುತ್ತದೆ. ಆದರೆ ಶೂಟಿಂಗ್ ಸಮಯದಲ್ಲಿ ನಾಯಕ ಅಥವಾ ನಾಯಕಿ ಹಸಿರು ಬಣ್ಣದ ಬಾಲ್ ಅಥವಾ ಬೇರಾವುದೋ ವಸ್ತುವಿಗೆ ಕಿಸ್ ಮಾಡುವಂತೆ ಚಿತ್ರೀಕರಿಸಿ ನಂತರ ಎಡಿಟಿಂಗ್ ಸಮಯದಲ್ಲಿ ಗ್ರೀನ್ಮ್ಯಾಟ್ ತೆಗೆದು ಇಬ್ಬರೂ ಲಿಪ್ಲಾಕ್ ಮಾಡುತ್ತಿರುವಂತೆ ಮಾಡಲಾಗುತ್ತದೆ. ಆದರೆ ನೋಡುವವರು ಮಾತ್ರ ಇದು ನಿಜ ಎಂದೇ ನಂಬುತ್ತಾರೆ.

 

 

ಈಗ ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಮುಂದುವರೆದಿದೆ. ಅದರಲ್ಲೂ ಸಿನಿಮಾಗಳಲ್ಲಿ ಹೆಚ್ಚಾಗಿ ವಿಎಫ್ಎಕ್ಸ್ಗಳನ್ನು ಬಳಸಲಾಗುತ್ತದೆ. ಚಿತ್ರೀಕರಣದ ವೇಳೆ ಮಾಡಲಾಗದ ಎಷ್ಟೋ ದೃಶ್ಯಗಳನ್ನು ವಿಎಕ್ಸ್ಎಫ್ ಮೂಲಕ ಕ್ರಿಯೇಟ್ ಮಾಡಲಾಗುತ್ತದೆ. ಆದರೆ ಪಾತ್ರ ನೈಸರ್ಗಿಕವಾಗಿ ಬರಲಿ ಎನ್ನುವವರು ಗ್ರಾಫಿಕ್ಸ್ ಬಳಸುವುದಿಲ್ಲ ಅಷ್ಟೇ.

LEAVE A REPLY

Please enter your comment!
Please enter your name here