ಕೈ, ಕಾಲುಗಳಿಲ್ಲದೆ ನಿಕ್ ವುಜಿಸಿಸ್ ಇಷ್ಟೆಲ್ಲ ಸಾಧನೆ ಮಾಡಿದ್ದಾದರೂ ಹೇಗೆ ..?

0
103

ನಮ್ಮ ಜೀವನದಲ್ಲಿ ಏನಾದ್ರು ಏರುಪೇರಾದ್ರೆ ಸಾಕು ನಮಗೆ ಏಕೆ ಹೀಗಾಗುತ್ತದೆ, ನಮಗೆ ಎಲ ಕಷ್ಟ ಬರುತ್ತವೆ. ಏಕೆ ನಮ್ಮ ಜೀವನ ಸರಿಯಿಲ್ಲ ಎಂದು ಕೊರಗುತ್ತೇವೆ. ಆದರೆ ಕೈ,ಕಾಲುಗಳಿಲ್ಲದೆ ಜೀವನ ನಡೆಸುವ `ನಿಕೋಲಸ್ ಉಜಿಸಿಸ್’ ಬಗ್ಗೆ ಓದಿದಾಗ ಜೀವನಕ್ಕೆ ಸ್ಫೂರ್ತಿ ಸಿಗುತ್ತದೆ.

ನಿಕ್ ಡಿಸೆಂಬರ್ 4 ರ 1981 ರಲ್ಲಿ ಆಸ್ಟ್ರೇಲಿಯಾ ದ ಮೇಲ್ ಬರ್ನ್ ಎಂಬಲ್ಲಿ ಈತನ ಜನನವಾಗುತ್ತದೆ.ಇವನು ಕೈ, ಕಾಲಿಲ್ಲದೆ ಹುಟ್ಟುತ್ತಾನೆ. ಈಗಲೂ ಕೂಡ ಇವನಿಗೆ ಕೈ ಕಾಲುಗಳಿಲ್ಲ. ಈತನನ್ನು ವೈದ್ಯಕೀಯ ಕ್ಷೇತ್ರದಿಂದಲು ಗುಣ ಪಡಿಸಲು ಸಾಧ್ಯ ವಾಗಲಿಲ್ಲ.ಕೈ, ಕಾಲುಗಳು ಇಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ.! ಎಂದು ಇದರಿಂದ ಜಿಗುಪ್ಸೆ ಗೆ ಒಳಗಾಗಿ ಮೊದಮೊದಲು ಈ ಜೀವನ ನಡೆಸಲು ತುಂಬಾ ಕಷ್ಟ ಪಟ್ಟು 10 ನೆ ವಯಸ್ಸಿನಲ್ಲಿಯೇ ಅವನು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ.

ಆದರೆ ಒಂದು ದಿನ ಈತ ಒಬ್ಬ ಅಂಗವಿಕಲ ವ್ಯಕ್ತಿಯ ಸಕ್ಸೆಸ್ಫುಲ್ ಕಥೆ ಯನ್ನು ಓದಿ,ಅದರಿಂದ ಸ್ಫೂರ್ತಿಯನ್ನು ಪಡೆದ ನಿಕ್ ಇಂದು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂದು ಹೇಳುತ್ತಾನೆ. ಆಟಿಟ್ಯೂಡ್ ಇಸ್ ಆಟಿಟ್ಯೂಡ್ ಎಂಬ ಕಂಪನಿಯನ್ನು ಶುರು ಮಾಡಿದ್ದಾನೆ .ಇವನು ತನ್ನ ಇಪ್ಪತ್ತನೇ ವಯಸ್ಸಿನಲ್ಲಿಯೇ ಮೋಟಿವೆಶನಲ್ ಸ್ಪೀಕರ್ ಆಗಿದ್ದರು.

ಇವರು ಹಲವಾರು ದೇಶ ಸುತ್ತಿ ತಮ್ಮ ಪ್ರೇರಣಾತ್ಮಕ ಜೀವನದಿಂದ ಎಲ್ಲರಿಗೂ ಪ್ರೇರಣೆ ನೀಡಿದ್ದಾರೆ. ಜಗತ್ತಿನ ಅದ್ಬುತ ಮೋಟಿವೇಶನಲ್ ಸ್ಪೀಕರ್ಗಳಲ್ಲಿ ಇವರು ಕೂಡ ಒಬ್ಬರು ಇವರ ಜೀವನವೇ ಒಂದು ಸ್ಫೂರ್ತಿದಾಯಕ ಇವರಿಗೆ ಪ್ರಪಂಚದಾದ್ಯಂತ ಕೋಟ್ಯಂತರ ಫಾಲೋವರ್ಸ್ ಗಳು ಇದ್ದಾರೆ. ಇವರು ರೈಟರ್, ಸಿಂಗರ್, ಆರ್ಟಿಸ್ಟ್ ಕೂಡ ಹೌದು
ಇವರಿಗೆ ಸ್ವಿಮ್ಮಿಂಗ್ ,ಪೇಂಟಿಂಗ್, ಫಿಶಿಂಗ್ನಲ್ಲಿಯೂ ತುಂಬಾ ಆಸಕ್ತಿ ಇದೆ
.

ನಿಕ್ ಪ್ರಕಾರ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದು ಇಲ್ಲ ಆದರೆ, ನಮ್ಮಲ್ಲಿ ಸಾಧಿಸುವ ಛಲ ಇರಬೇಕಷ್ಠೆ.! ನಮ್ಮಲ್ಲಿ ಅದು ಇಲ್ಲ, ಇದು ಇಲ್ಲ ಎಂದು ದುಃಖ ಪಡುವ ಬದಲು ನಮಲ್ಲಿರುವುದರಲ್ಲೇ ಸಂತೋಷ ಪಡಬೇಕು ಜೀವನದಲ್ಲಿ ಯಾವುದೇ ಪರಿಸ್ಥಿತಿ ಬರಲಿ ಅಕ್ಸೆಪ್ಟ್ ಮಾಡಿಕೊಳ್ಳಬೇಕು. ಇಂತಹ ಪರಿಸ್ಥಿತಿಯಾಗಲಿ ಎದುರಿಸಿದರೆ ಅವರು ಸಾಧಕರಾಗುತ್ತಾರೆ. ಸಾಧನೆ ಮಾಡಲು ಇಷ್ಟು ಸ್ಫೂರ್ತಿ ಸಾಕಾಗುತ್ತದೆ ಎಂದೆನಿಸುತ್ತದೆ.

LEAVE A REPLY

Please enter your comment!
Please enter your name here