ಅಲ್ಲಾ ಮನೆಯೊಳಗಿದ್ದ ಚಂದನ್ ಅವರಿಗೆ ಶ್ರೀಮನ್ನಾರಯಣ ಸ್ಟೆಪ್ ಹೇಗೆ ಗೊತ್ತಾಯಿತು?

0
398

ಈಗಾಗಲೇ ಬಿಗ್‍ಬಾಸ್ ಮನೆಯಲ್ಲಿ 60 ದಿನಗಳನ್ನು ಮುಗಿಸಿರುವ ಬಿಗ್‍ಬಾಸ್ ಸ್ಪರ್ಧಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ, ತಮಗೆಲ್ಲರಿಗೂ ಗೊತ್ತಿರುವ ಹಾಗೆ ಬಿಗ್‍ಬಾಸ್ ಮನೆಯಲ್ಲಿರುವವರುಗೆ, ಹೊರಗೆ ನಡೆಯುವ ವಿಚಾರಗಳು, ಸುದ್ಧಿಗಳು ತಿಳಿದಿರುವುದಿಲ್ಲ, ಪ್ರಪಂಚದ ಯಾವ ಸುಳಿವಿ ಇರುವುದಿಲ್ಲ ಎಂಬುದು ನಿಯಮ. 2016 ರಲ್ಲಿ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದ್ದ ಮೋದಿ ಯವರ ನೋಟ್ ಬ್ಯಾನ್ ನಿರ್ದಾರವು ಸಹ ಬಿಗ್‍ಬಾಸ್ ಸ್ಪರ್ಧಿಗಳಿಗೆ ಮಾಹಿತಿ ನೀಡಿರಲಿಲ್ಲ.

 

 

ಆದರೆ ಇದೀಗ ಈ ಸೀಸನ್ ನಲ್ಲಿ ಆಶ್ಚರ್ಯಕಾರಿ ಘಟನೆಯೊಂದು ನಡೆದಿದೆ. ಹೌದು ಸೋಮವಾರ ಪ್ರಸಾರವಾದ ಸಂಚಿಕೆ ವೀಕ್ಷಕರಿಗೆ ಒಂದು ಸಣ್ಣ ಅನುಮಾನವನ್ನು ಉಂಟು ಮಾಡಿದೆ. ಅದೇನು ಎಂದು ತಿಳಿದುಕೊಳ್ಳಲು ಮುಂದೇ ಓದಿ..

ಇತ್ತೀಚಿಗೆ ಕನ್ನಡ ಚಿತ್ರರಂಗದ ದೊಡ್ಡ ಬಜೆಟ್ ನ ಪ್ಯಾನ್ ಇಂಡಿಯ ಸಿನಿಮಾಗಳು ಹೆಚ್ಚಾಗುತ್ತಿದ್ದು, ದೇಶಾದ್ಯಂತ ಸದ್ದು ಮಾಡುತ್ತಿವೆ. ಅದರಲ್ಲಿಯೂ ಕೆ.ಜಿ.ಎಫ್ ಚಾಪ್ಟರ್ 2 ಗಾಗಿ ವಿಶ್ವದ ಮೂಲೆಮೂಲೆಯಲ್ಲಿರುವ ಭಾರತೀಯರು ಕಾಯುತ್ತಿರುವುದು ವೀಶೆಷ. ಇದೀಗ ಇದರ ಬೆನ್ನಲ್ಲೆ ರಕ್ಷಿತ್ ಶೆಟ್ಟಿ ಅವರು ಬರೆದು ನಟಿಸಿರುಬ ಅವನೇ ಶ್ರೀಮನ್ನಾರಯಣ ಸಿನಿಮಾ ಕೂಡ ಕೆ.ಜಿ.ಎಫ್ ನಂತೆ ಟ್ರೆಂಡ್ ಸೆಟ್ ಮಾಡೀದೆ. ಅಲ್ಲದೇ ಬುಕ್ ಮೈ ಶೋ ನಲ್ಲು ಶ್ರೀಮನ್ನಾರಯಣನದ್ದೆ ಹವಾ.

 

 

ಇದೇ ತಿಂಗಳು ಪಂಚ ಭಾಷೆಯಲ್ಲಿ ಸಿನಿಮಾ ತೆರೆಕಾಣಿದ್ದು, ಸದ್ಯ ಚಿತ್ರತಂಡ ವೀಡಿಯೊ ಸಾಂಗ್ ಒಂದನ್ನು ಬಿಡುಗಡೆ ಮಾಡಿದೆ, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಂಗ್ ವೈರಲ್ ಆಗಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ, ಅಲ್ಲದೇ ಸೆಲೆಬ್ರೆಟಿಗಳು, ರಕ್ಷಿತ್ ಶೆಟ್ಟಿ ಅವರ ಸ್ಟೆಪ್ ಗಳನ್ನು ಹಾಕುತ್ತಿದ್ದು, ಹ್ಯಾಂಡ್ಸ್ ಅಪ್ ಚಾಲೆಂಜ್ ನಡೆಸುತ್ತಿದ್ದಾರೆ !

 

 

ಈ ಸಾಂಗ್ ಬಿಡುಗಡೆಯಾಗಿ ಕೇವಲ ಒಂದು ವಾರವು ಕೂಡ ಆಗಿಲ್ಲ, ಆದರೆ ಸುಮಾರು 60 ದಿನಗಳನ್ನು ಕಳೆದಿರುವ ಚಂದನ್ ಆಚಾರ್ ಅವರು, ರಕ್ಷಿತ್ ಶೆಟ್ಟಿ ಹಾಕಿರುವ ಸೇಮ್ ಸ್ಟೆಪ್ ಅನ್ನು ಹಾಕಿದ್ದಾರೆ. ಹೌದು ಸೋಮವಾರದ ಸಂಚಿಕೆ ಆರಂಭವಾಗುವ ಮುನ್ನ ಮುಂಜಾನೆ ಹಾಡನ್ನು ಹಾಕಿ ಎಬ್ಬಿಸುವುದು ವಾಡಿಕೆ. ಅಂತೆಯೇ ಅವನೇ ಶ್ರೀಮನ್ನಾರಯಣದ ಹ್ಯಾಂಡ್ಸ್ ಅಪ್ ಹಾಡನ್ನು ಹಾಕಲಾಯಿತು. ಉಳಿದ ಎಲ್ಲಾ ಸ್ಪರ್ಧಿಗಳಿ ಮಾಮೂಲಿಯಾಗಿ ನೃತ್ಯ ಮಾಡುತ್ತಿದ್ದರು, ಆದರೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಅವರ ಸ್ನೇಹಿತನಾಗಿ ಕಾಣಿಸಿಕೊಂಡ ಚಂದನ್ ಆಚಾರ್ ಸಾಂಗ್ ನಲ್ಲಿರುವಂತಹ ಸೇಮ್ ಸ್ಟೆಪ್ ಹಾಕಿದ್ದಾರೆ.

 

 

ಹಾಗದರೆ ಸಾಂಗ್ ರಿಲೀಸ್ ಆಗುವ ಮುನ್ನವೇ ಇದೇ ಸ್ಟೆಪ್ ಇದೆ ಎಂಬುದು ಚಂದನ್ ಗೆ ಗೊತ್ತಿತ್ತ, ಅಥವಾ ಬೇರೆ ಏನಾಧರು ನಡೆದಿದ್ದೀಯಾ ಎಂಬುವ ಹಲವು ಗೊಂದಲಗಳು ಪ್ರೇಕ್ಷಕರಿಗೆ ಕಾಡುತ್ತಿದ್ದೆ.

LEAVE A REPLY

Please enter your comment!
Please enter your name here