ಜೇನುತುಪ್ಪದ ಉಪಯೋಗಗಳು….

0
280

ನಮ್ಮ ಹಿರಿಯರು, ಆಚಾರ್ಯರು, ಗುರುಗಳು, ಯತಿಗಳು, ಮಹರ್ಷಿಗಳು ಹಲವಾರು ಸಂಸ್ಕಾರ, ವೇದ, ಪುರಾಣ, ಆಯುರ್ವೇದ ಇನ್ನಿತರ ಹಲವಾರು ವಿಚಾರಧಾರೆಗಳನ್ನು ತಮ್ಮ ಅನುಭವಪೂರ್ವಕವಾಗಿ ನಮಗೋಸ್ಕರ ಬಿಟ್ಟು ಹೋಗಿದ್ದಾರೆ . ಅಂತಹ ಗುರುಗಳ ಮಾರ್ಗದರ್ಶನದಲ್ಲಿ ಬಂದಿರುವಂತಹ ಹಲವಾರು ಆಯುರ್ವೇದ –  ಮನೆ ಮದ್ದಿನ ವಿಚಾರಗಳನ್ನು ಕ್ರೋಢೀಕರಿಸಿ ಮನೆ ಮದ್ದು –  ಗೃಹ ಸಂಜೀವಿನಿ ಎಂಬ ಬರಹಗಳ ಸರಣಿಯನ್ನು ಶ್ರೀ. ಶ್ರೀ. ರವಿಶಂಕರ್ ಗುರೂಜಿರವರು ನಿಮ್ಮ ಮುಂದೆ ಪುಟ್ಟದಾಗಿ  ಸಮರ್ಪಿಸುತ್ತಿದ್ದಾರೆ. ಈ ಬರಹಗಳ ಸರಣಿಯು ನಿಮ್ಮ ಮನೆಗೊಂದು – ಬದುಕಿಗೊಂದು – ಆರೋಗ್ಯ ಜೀವನಕ್ಕೊಂದು ಯಶೋಗಾಥೆಯಾಗಲಿ. ನಮ್ಮ ಹಿರಿಯರು ನಮಗೆ ಕೊಟ್ಟಿರುವ ಈ ಮನೆಮದ್ದು ಸಂಜೀವಿನಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಂಡು ಅದನ್ನು  ಸಮರ್ಪಕವಾಗಿ  ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೀವು ನಿಮ್ಮ ಜೀವನವನ್ನು ಹಾಲು – ಸಕ್ಕರೆಯಂತಾಗಿಸಿಕೊಂಡರೆ ಅದುವೇ  ಬಹು ದೊಡ್ಡ ಸಂತಸ.

. ಜೇನು ತುಪ್ಪದೊಡನೆ ಶುಂಠಿಯ ರಸವನ್ನು ಎಳೆಯ ಮಕ್ಕಳಿಗೆ ಕೊಡುವುದರಿಂದ ಕರುಳಿಗೆ ಸಂಬಂಧಿಸಿದಂತಹ ತೊಂದರೆಗಳು ದೂರವಾಗುತ್ತವೆ.

. ತುಳಸಿ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಮಕ್ಕಳಿಗೆ ಕೆಮ್ಮು ಮತ್ತು ಜ್ವರ ನಿವಾರಣೆಯಾಗುತ್ತದೆ.

. ಮಕ್ಕಳಿಗೆ ಹಾಲಿನ ಜೊತೆ ಜೇನುತುಪ್ಪವನ್ನು ಬೆರೆಸಿ ಕೊಟ್ಟರೆ ರೋಗ ನಿರೋಧಕ ಶಕ್ತಿ ವೃದ್ದಿಸಿ ಬೆಳವಣಿಗೆ ಚೆನ್ನಾಗಿ ಆಗುತ್ತದೆ.

. ಮಕ್ಕಳಿಗೆ ಹಸಿಶುಂಠಿಯ ರಸವನ್ನು ಜೇನುತುಪ್ಪದಲ್ಲಿ ಬೆರೆಸಿ ಕೊಡುವುದರಿಂದ ಕರುಳು ಮತ್ತು ಜಠರಕ್ಕೆ  ಸಂಬಂಧಿಸಿದ ತೊಂದರೆಗಳು ದೂರ ಆಗುತ್ತವೆ.

. ಓಮ ಮತ್ತು ಮೆಂತ್ಯದ ಕಷಾಯವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಮೂರು ಬಾರಿ ಕುಡಿದರೆ ಕಫ ನಿವಾರಣೆಯಾಗುತ್ತದೆ .

. ಚಿಕ್ಕ ಮಕ್ಕಳಿಗೆ ಹಾಲು ಕೊಡುವಾಗ ಜೇನುತುಪ್ಪವನ್ನು ಬೆರೆಸಿ ಕೊಟ್ಟರೆ ರೋಗ ನಿರೋಧಕ ಶಕ್ತಿಯು ವೃದ್ಧಿಸುತ್ತದೆ .

. ದೊಡ್ಡಪತ್ರೆ ಎಲೆ, ತುಳಸಿ, ವೀಳ್ಯದೆಲೆಯ ಎಲೆಗಳನ್ನು ಜಜ್ಜಿ ರಸ ತೆಗೆದು, ಜೇನು ತುಪ್ಪ ಬೆರೆಸಿ ಮಗುವಿಗೆ ಕುಡಿಸಿದರೆ ನೆಗಡಿ ನಿವಾರಣೆಯಾಗುತ್ತದೆ .

. ಹಾಲು ಮತ್ತು ಜೇನು ತುಪ್ಪದೊಡನೆ ಬಾಳೆಹಣ್ಣನ್ನು ಎಳೆ ಮಕ್ಕಳಿಗೆ ಕೊಡುವುದರಿಂದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ರಕ್ತ ಪುಷ್ಟಿಯಾಗುತ್ತದೆ.

. ಜೇನುತುಪ್ಪವನ್ನು ಕ್ರಮವಾಗಿ ಸೇವಿಸುತ್ತಿದ್ದರೆ ಕ್ಷಯರೋಗಿಗಳ ಮತ್ತು ಮಧುಮೇಹ ರೋಗಿಗಳ ಶಾರೀರಿಕ ಕ್ರಮ ಸಲೀಸಾಗಿ ರೋಗ ಉಲ್ಬಣಿಸುವುದಿಲ್ಲ.

೧೦. ಜೇನು ತುಪ್ಪದ ಸೇವನೆಯಿಂದ ಕಣ್ಣಿಗೆ ಹಿತವಾಗುತ್ತದೆ ಮತ್ತು ಬುದ್ಧಿ ಶಕ್ತಿಯೂ ವೃದ್ಧಿಯಾಗುತ್ತದೆ.

‍೧೧. ಜೇನುತುಪ್ಪದೊಂದಿಗೆ ಕಿತ್ತಳೆ ರಸವನ್ನು ಸೇವಿಸಿದರೆ ಹೃದ್ರೋಗಕ್ಕೆ ತುಂಬಾ ಒಳ್ಳೆಯದು.

೧೨. ಒಂದು ಟೀ ಚಮಚ ಹುಣಸೇ ಗೊಜ್ಜಿನಲ್ಲಿ ಅರ್ಧ ಟೀ ಚಮಚ ಜೀರಿಗೆ ಚೂರ್ಣ ಕಲೆಸಿ ಜೇನುತುಪ್ಪದೊಂದಿಗೆ ನಾಲ್ಕು ದಿನಗಳವರೆಗೆ ಸೇವಿಸಿದರೆ ಅರಿಶಿನ ಕಾಮಾಲೆ ವಾಸಿಯಾಗುವುದು. ಪಿತ್ತ ಶಾಂತಿ ಯಾಗಲು ಇದೇ ಕ್ರಮವನ್ನು ಅನುಸರಿಸಬಹುದು.

೧೩. ಶುದ್ಧವಾದ ಜೇನುತುಪ್ಪವನ್ನು ಊಟವಾದ ನಂತರ ಮಲಗುವುದಕ್ಕೆ ಮುಂಚೆ ಮೂರು ಟೀ ಚಮಚ ಸೇವಿಸುತ್ತಾ ಬಂದರೆ ಬಹುಮೂತ್ರ ರೋಗವೇ ಇಲ್ಲವಾಗುವುದು.

೧೪. ವಸಡುಗಳು ಊದಿಕೊಂಡು ಹಲ್ಲು ನೋವು ಉಂಟಾದರೆ ಜೇನುತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ನಾಲ್ಕಾರು ಬಾರಿ ದಿನ ಇಟ್ಟುಕೊಂಡರೆ ಹಲ್ಲು ನೋವು ಮತ್ತು ವಸಡಿನ ಉತ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here