ಪ್ರೀತಿಗೆ ಜಾತಿ ಧರ್ಮವಿಲ್ಲ ಎಂಬುದಕ್ಕೆ ಸಾಕ್ಷಿ ಈ ಸಲಿಂಗಿಗಳ ಮದುವೆ !!

0
155

ಅಮೆರಿಕದಲ್ಲಿ ಆದಿತ್ಯ ಮತ್ತು ಅಮಿತ್ ಎನ್ನುವವರು ಭಾರತೀಯ ಸಂಪ್ರದಾಯ ಪ್ರಕಾರ ಮದುವೆಯಾಗಿದ್ದಾರೆ !

ಅವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೀಗೆ..

ಅಮಿತ್ ಹಾಗೂ ಆದಿತ್ಯ ತಮ್ಮ ಮೊದಲ ಭೇಟಿಯಲ್ಲೇ ಪರಸ್ಪರ ಫೋನ್ ನಂಬರ್ ಎಕ್ಸ್​ಚೇಂಜ್ ಮಾಡ್ಕೊಂಡು ನಂತರ ಒಳ್ಳೆಯ ಗೆಳೆಯರಾಗಿದ್ದರಂತೆ. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ತಮ್ಮ ಸಂಬಂಧದ ಬಗ್ಗೆ ಅಮಿತ್ ಹಾಗೂ ಆದಿತ್ಯ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ನಾವು ಪರಸ್ಪರ ಡೇಟ್ ಮಾಡುತ್ತಿದ್ದಾಗ ಮುಂದೆ ನಾವಿಬ್ಬರು ಮದುವೆ ಆಗುತ್ತೇವೆ ಎಂದುಕೊಂಡಿರ್ಲಿಲ್ಲ. ಬಳಿಕ ಒಟ್ಟಿಗೆ ಕಾಲ ಕಳೆಯುತ್ತಿದ್ದಾಗ ನಾವು ಒಬ್ಬರಿಗೊಬ್ಬರು ಹುಟ್ಟಿದ್ದೇವೆ ಎಂದು ಅನಿಸುತ್ತಿತ್ತು ಅಂತ ತಮ್ಮ ಮನದಾಳವನ್ನ ಬಿಚ್ಚಿಟ್ಟಿದ್ದರು.
ಅಮಿತ್​ ಹಾಗೂ ಆದಿತ್ಯರ ಮದುವೆಯ ಫೋಟೋಸ್ ಇನ್​​ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ.

ಪ್ರೀತಿ ಅಂದ್ರೆ ಹಾಗೆ ಅದಕ್ಕೆ ಜಾತಿ, ಧರ್ಮ, ಅನ್ನೋದಿಲ್ಲ. ಗಂಡು, ಹೆಣ್ಣು ಅನ್ನೋ ಭೇದ-ಭಾವವೂ ಇರೋದಿಲ್ಲ. ಸಂಪ್ರದಾಯ-ಕಟ್ಟಲೆಗಳಿಗೂ ಮೀರಿ ಪ್ರೀತಿ ಪಕ್ಷಿಯಂತೆ ಹಾರಿ ನಲಿದಾಡುತ್ತೆ. ಬಹುಶಃ ಇದೇ ಕಾರಣಕ್ಕೋ ಏನೋ ಪ್ರೇಮ ಕವಿ ವಿಲಿಯಂ ಷೇಕ್ಸ್‌ಪಿಯರ್, ಲವ್​ ಲುಕ್ಸ್​ ನಾಟ್​ ವಿತ್​ ದ ಐಸ್​​, ಬಟ್ ವಿತ್​ ದ ಮೈಂಡ್​ ಅಂದಿದ್ದಾರೆ. ಈಗ ಈ ಜೋಡಿನ ನೋಡಿದ್ರೆ ಹಾಗೇ ಅನಿಸುತ್ತೆ.

ಯಾಕಂದ್ರೆ ಈ ಜೋಡಿ ಸ್ಪೆಷಲ್. ಅದರಲ್ಲೂ ಸಂಪ್ರದಾಯ, ಪದ್ಧತಿಗಳಿಗೆ ಹೆಚ್ಚು ಬೆಲೆ ಕೊಡುವಂಥ ಭಾರತೀಯ ಮೂಲದ ಈ ಜೋಡಿ, ಸಲಿಂಗಿಗಳು. ಭಾರತ ಮೂಲದ ಸಲಿಂಗಿಗಳಿಬ್ಬರು ಅಮೆರಿಕಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ ವಿಜೃಂಭಣೆಯ ಮದುವೆ ಕಾರ್ಯಕ್ರಮದಲ್ಲಿ ಕೋರಿಯೋಗ್ರಾಫರ್​ ವೃತ್ತಿಯಲ್ಲಿರುವ ಅಮಿತ್​ ಹಾಗೂ ಆದಿತ್ಯ ಮದಿರಾಜು ಎಂಬ ಸಲಿಂಗಿಗಳು ಭಾರತೀಯ ಸಂಪ್ರದಾಯಂತೆ ಮದುವೆಯಾಗಿದ್ದಾರೆ.

ಇನ್ನು ವಿಶೇಷವಂದ್ರೆ ತಮ್ಮ ಪುತ್ರರ ನಿರ್ಧಾರವನ್ನ ಒಪ್ಪಿಕೊಂಡ ಇಬ್ಬರ ಪೋಷಕರು, ತಾವೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಈ ಸಂಭ್ರಮಕ್ಕೆ ಕುಟುಂಬಸ್ಥರು, ಸಂಬಂಧಿಕರು, ಗೆಳೆಯರು ಸಾಕ್ಷಿಯಾಗಿದ್ದಾರೆ. ಈ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​​ ಮಾಡುವ ಮೂಲಕ ಹೊಸ ದಂಪತಿಗೆ ಗುಡ್​ಲಕ್​ ಅಂದಿದ್ದಾರೆ

LEAVE A REPLY

Please enter your comment!
Please enter your name here