ಮನೆಯಲ್ಲೇ ತಯಾರಿಸಿ ರುಚಿಯಾದ ‘ಫ್ರೆಂಚ್ ಫ್ರೈಸ್’

0
164

ಫ್ರೆಂಚ್ ಫ್ರೈಸ್ ತಿನ್ನಲು ನೀವು ಹೊರಗೆ ಹೋಗಬೇಕಿಲ್ಲ, ಅಥವಾ ಆರ್ಡರ್ ಮಾಡಬೇಕಿಲ್ಲ. ಹೊರಗಿನ ರುಚಿಗಿಂತ ನೀವು ಮನೆಯಲ್ಲೇ ರುಚಿ, ಶುಚಿಯಾದ ಫ್ರೆಂಚ್ ಫ್ರೈಸ್ ಮನೆಯಲ್ಲೇ ತಯಾರಿಸಬಹುದು.

 

 

ಬೇಕಾಗುವ ಸಾಮಗ್ರಿಗಳು

ದೊಡ್ಡ ಆಲೂಗಡ್ಡೆ-2
ಚಾಟ್ ಮಸಾ¯ -1 ಸ್ಪೂನ್
ಅಚ್ಚಖಾರದಪುಡಿ – 1 ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

 

 

1. ಆಲೂಗಡ್ಡೆ ಸಿಪ್ಪೆ ತೆಗೆದು ಸಣ್ಣದಾಗಿ ಉದ್ದವಾಗಿ ಹೆಚ್ಚಿಕೊಳ್ಳಿ
2. ಹೆಚ್ಚಿಕೊಂಡ ಆಲೂಗಡ್ಡೆಯನ್ನು 10 ನಿಮಿಷ ನೀರಿನಲ್ಲಿ ನೆನೆಯಲು ಬಿಟ್ಟು ನಂತರ ನೀರು ಶೋಧಿಸಿ ಮತ್ತೆ ಬೇರೆ ನೀರು ಹಾಕಿ 10 ನಿಮಿಷದ ನಂತರ ತೊಳೆಯಿರಿ. ಇದೇ ರೀತಿ 3-4 ಬಾರಿ ತೊಳೆಯಿರಿ.
3. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಆಗಲು ಇಡಿ, ನೀರು ಬಿಸಿಯಾಗುತ್ತಿದ್ದಂತೆ, ಸ್ವಲ್ಪ ಉಪ್ಪು, ಆಲೂಗಡ್ಡೆ ಸೇರಿಸಿ ಮುಚ್ಚಳ ಮುಚ್ಚಿ ಅತಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ.

 

4. ಬಿಸಿನೀರಿನಲ್ಲಿ ಬೇಯಿಸಿಕೊಂಡ ಆಲೂಗಡ್ಡೆಯನ್ನು ತಣ್ಣೀರಿಗೆ ಸೇರಿಸಿ 5-10 ನಿಮಿಷ ತಣ್ಣಗಾಗಲು ಬಿಡಿ.
5. ನೀರು ಶೋಧಿಸಿ ಆಲೂಗಡ್ಡೆಯನ್ನು ಒಂದು ಶುದ್ಧವಾದ ಬಟ್ಟೆ ಮೇಲೆ ಹರಡಿ ನೀರು ಹೀರಿಕೊಳ್ಳುವಂತೆ ಬಟ್ಟೆಯಿಂದ ಮೃದುವಾಗಿ ಒತ್ತಿ ಅರ್ಧ ಗಂಟೆ ಬಿಡಿ.
5. ಬಳಿಕ ಬಿಸಿ ಎಣ್ಣೆಯಲ್ಲಿ ಆಲೂಗಡ್ಡೆಯನ್ನು ತಿಳಿ ಕಂದು ಬಣ್ಣ ಬರುವವರೆಗೂ ಕರಿದು ಸ್ಟೌ ಆಫ್ ಮಾಡಿ.
6. ಆಲೂಗಡ್ಡೆ ಸಂಪೂರ್ಣ ತಣ್ಣಗಾದ ನಂತರ 2ನೇ ಬಾರಿ ಮತ್ತೆ ಬಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ.

 

7. ಕರಿದ ಫ್ರೆಂಚ್‍ಫ್ರೈಸ್‍ಗೆ ಸ್ವಲ್ಪ ಉಪ್ಪು, ಚಾಟ್‍ಮಸಾ¯ ಹಾಗೂ ಅಚ್ಚಖಾರದ ಪುಡಿ ಸೇರಿಸಿ ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ.

ರುಚಿಯಾದ, ಗರಿಗರಿ ಫ್ರೆಂಚ್ ಫ್ರೈಸನ್ನು ಬಿಸಿ ಬಿಸಿ ಕಾಫಿಯೊಂದಿಗೆ ಎಂಜಾಯ್ ಮಾಡಿ.

LEAVE A REPLY

Please enter your comment!
Please enter your name here