ಹೋಂ ವರ್ಕ್ ಮಾಡಿ ಬಂದ ಅನೀಶ್ : ರಾಮಾರ್ಜುನ ಟ್ರೈಲರ್ ನಲ್ಲಿ ಮಿಂಚಿಂಗು!

0
147

ಅನೀಶ್ ತೇಜೇಶ್ವರ್,ನಮ್ ಏರಿಯಾಲ್ ಒಂದ್ ದಿನ ಚಿತ್ರದ ಮೂಲಕ ಚೆಂದನವನಕ್ಕೆ ಕಾಲಿಟ್ಟ ಒಬ್ಬ ಪ್ರಭವಾನ್ವತ ನಟ! ನಂತರ ಪೊಲೀಸ್ ಕ್ವಾರ್ಟರ್ಸ್, ಕಾಫಿ ವಿಥ್ ಮೈ ವೈಫ್, ನನ್ ಲೈಫ್ ಅಲ್ಲಿ, ಎಂದೆಂದೂ ನಿನಗಾಗಿ ,ನೀನೇ ಬರೀ ನೀನೆ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು !
ತದನಂತರ 2016 ರಲ್ಲಿ ತೆರೆಕಂಡ ಅಕಿರ ಎಂಬ ಚಿತ್ರದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.. ತಮ್ಮ ಡ್ಯಾನ್ಸ್ ಮತ್ತು ಖಡಕ್ ಡೈಲಾಗ್ಸ್ ಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು !

ತದನಂತರ ತೆರೆ ಕಂಡ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರವೂ ಸಹಿತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು !
ಇನ್ನು ಈ ಚಿತ್ರದ ಹಾಡುಗಳು ಇಂದಿಗೂ ಸಹಿತ ಸೂಪರ್ ಹಿಟ್ ಆಗಿಯೇ ಇದೆ..

ರಾಮಾರ್ಜುನ ಟ್ರೈಲರ್ ಬಿಡುಗಡೆ !
ರಾಮಾರ್ಜುನ,ಇದೇ ಮೊದಲ ಬಾರಿಗೆ ಅನೀಶ್ ಅಭಿನಯ ಮಾಡುವುದರ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾ !

ಕಮರ್ಷಿಯಲ್ ಸಿನಿಮಾಗಳನ್ನು ಮಾಡುತ್ತಾ ಹೆಸರು ಮಾಡಿದ್ದ ಅನೀಶ್ ಸಾಕಷ್ಟು ಹೋಂ ವರ್ಕ್ ಮಾಡಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಅವರ ರಾಮಾರ್ಜುನ ಟ್ರೈಲರ್ನಲ್ಲಿ ಎದ್ದುಕಾಣುತ್ತಿದೆ..

ಇನ್ನು ಅನೀಶ್ ಅವರ ಕಳೆದ ಚಿತ್ರ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಿಶ್ವಿಕಾ ನಾಯ್ಡು ,ರಾಮಾರ್ಜುನ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ !ಟ್ರೈಲರ್ ನಲ್ಲಿ ಈ ಜೋಡಿ ಫ್ರೆಶ್ ಅನಿಸುತ್ತದೆ !

ನಾಯಕನದ್ದು ವಿಮೆ ಕ್ರೈಂ ಮಾಡುವ ಕೆಲಸ, ಅವನ ಏರಿಯಾದಲ್ಲಿ ಮಾಸ್ ಮರ್ಡರ್ ಆದಾಗ ನಾಯಕ ಏನು ಮಾಡುತ್ತಾನೆ !?ನಾಯಕನ ಕ್ಯಾರೆಕ್ಟರೇ ಹೇಗೆ ಬದಲಾವಣೆಯಾಗುತ್ತದೆ ಎಂಬುದು ಚಿತ್ರದ ತಿರುಳು ! ಇನ್ನು ಚಿತ್ರದಲ್ಲಿ ಕಮರ್ಷಿಯಲ್ ಫೈಟಿಂಗ್ ಹಾಗೂ ಲವ್ ಇರುವುದು ಎದ್ದು ಕಾಣುತ್ತದೆ !

ಒಟ್ಟಾರೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾಗಿದೆ ..ಇನ್ನು ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತದೆ ಎಂಬುವ ನಿರೀಕ್ಷೆಗಳಿವೆ

LEAVE A REPLY

Please enter your comment!
Please enter your name here