ಮಂಡಿ ನೋವಿನಿಂದ ಬಳಲುತ್ತಿದ್ದರೆ ಇಲ್ಲಿದೆ ಸುಲಭ ಮನೆ ಮದ್ದು..!

0
463

ಮಂಡಿ ನೋವು ಕೂಡ ಒಂದು ದೊಡ್ಡ ಸಮಸ್ಯೆಯಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿದೆ ಎನ್ನಬಹುದು. ಮುಂಚೆ ಐವತ್ತು ವರ್ಷಗಳನ್ನು ದಾಟಿದವರಲ್ಲಿ ಮಂಡಿ ನೋವು ಹೆಚ್ಚಾಗಿ ಕಾಣಿಸುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಮೂವತ್ತು ವರ್ಷದೊಳಗಿನವರಿಗೂ ಕೂಡ ಮಂಡಿ ನೋವಿನ ಸಮಸ್ಯೆ ಉಲ್ಬಣವಾಗಿದೆ ಎನ್ನಬಹುದು. ಒಂದಿಷ್ಟು ಸಮಯ ನಡೆದುಕೊಂಡು ಹೋದರೆ ಸಾಕು ಮಂಡಿ ನೋವು ಹೆಚ್ಚಾಗುತ್ತದೆ ಎಂದು ಪರದಾಡುತ್ತೀರಿ. ಮಂಡಿ ನೋವಿನ ಸಮಸ್ಯೆಯಿಂದ ಶೀಘ್ರ ಪರಿಹಾರ ಪಡೆಯಲು ಮನೆಯಲ್ಲೇ ಸಿಗುವ ಔಷಧಗಳನ್ನು ಬಳಸಿ. ಮಂಡಿ ನೋವನ್ನು ನಿವಾರಿಸಲು ಇಲ್ಲಿದೆ ಸುಲಭ ಮನೆ ಮದ್ದು ಅನುಸರಿಸಿ,

  1. ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ರೂಡಿಸಿಕೊಂಡರೆ ಮಂಡಿ ನೋವಿನಿಂದ ಮುಕ್ತರಾಗಬಹುದು. ವ್ಯಾಯಾಮ ಮಾಡುವದರಿಂದ ಮಂಡಿ ನೋವಿಗೆ ಸಂಬಂಧಿಸಿದ ಹಲವು ಸಮಸ್ಯೆಯನ್ನು ನಿಯಂತ್ರಿಸಬಹುದು.
  2. ದೇಹದ ತೂಕ ಕಡಿಮೆ ಮಾಡಿಕೊಂಡರೆ ಮಂಡಿ ನೋವಿನ ಸಮಸ್ಯೆಯಿಂದ ಹೊರಬರಬಹುದು. ದೇಹದ ತೂಕ ಹೆಚ್ಚಿದ್ದರೆ ನಡೆದಾಡಲು ಕಷ್ಟ ಅನಿಸುತ್ತದೆ ಹಾಗೂ ಹೆಚ್ಚು ಅಯಾಸವಾಗುತ್ತದೆ. ಹೆಚ್ಚಾಗಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ ಮಂಡಿ ನೋವು ಕಡಿಮೆಯಾಗಲಿದೆ.
  3. ಮಂಡಿ ನೋವನ್ನು ಸುಲಭವಾಗಿ ನಿವಾರಿಸಲು ನಿಮ್ಮ ಬೆರಳಿನಿಂದ ಮಂಡಿ ಸುತ್ತ ಮಸಾಜ್ ಮಾಡಿಕೊಳ್ಳಿ ಇದರಿಂದ ಮಂಡಿ ನೋವು ಕಡಿಮೆಯಾಗಲಿದೆ.
  4. ಐಸ್‍ಗಳನ್ನು ಒಂದು ಬಟ್ಟೆಯೊಳಗೆ ಇಟ್ಟುಕೊಂಡು ಮಂಡಿ ನೋವಿರುವ ಜಾಗದಲ್ಲಿ ಇಟ್ಟುಕೊಳ್ಳುದರಿಂದ ಮಂಡಿ ನೋವನ್ನು ನಿವಾರಿಸಿಕೊಳ್ಳಬಹುದು.
  5. ನಿಮ್ಮ ನಿತ್ಯದ ಅಡುಗೆಯಲ್ಲಿ ಶುಂಠಿಯನ್ನು ಬಳಸುವುದು ಉತ್ತಮ. ಶುಂಠಿ ಮಂಡಿ ನೋವನ್ನು ನಿವಾರಣೆ ಮಾಡುವುದರಲ್ಲಿ ಉತ್ತಮವಾಗಿದೆ. ನಿಂಬೆಹಣ್ಣು ಕೂಡ ಮಂಡಿ ನೋವು ವಿರುದ್ದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನಿಂಬೆ ರಸವನ್ನು ಮಂಡಿ ಸುತ್ತಮುತ್ತ ಹಚ್ಚಿ ಮಸಾಜ್ ಮಾಡುವುದರಿಂದ ಮಂಡಿ ನೋವು ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here