ಕೂದಲು ಉದುರುವಿಕೆ ಸಮಸ್ಯೆ ತಡೆಗಟ್ಟಲು ಇಲ್ಲಿದೆ ಸುಲಭ ಮನೆ ಮದ್ದು..!

0
200

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಬಹುತೇಕವಾಗಿ ಕಾಡುವ ಸಮಸ್ಯೆ ಅಂದರೆ ಕೂದಲು ಉದುರುವಿಕೆ. ಹೌದು, ಇಂದಿನ ಯುವಕ ಮತ್ತು ಯುವತಿಯರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ. ಆನೇಕ ಶ್ಯಾಂಪೂ, ವಿವಿಧ ರೀತಿಯ ಎಣ್ಣೆಗಳನ್ನು ಬಳಸಿದರೂ ಕೂಡ ಕಡಿಮೆಯಾಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆ. ಹಾಗಾಗಿ ಮನೆಯಲ್ಲೆ ಕೂದಲು ಉದುರುವಿಕೆ ತಡೆಗಟ್ಟಲು ಸುಲಭ ಮನೆ ಮದ್ದು ಇಲ್ಲಿ ತಿಳಿಸಲಾಗಿದೆ ಅನುಸರಿಸಿ,

  1. ಈರುಳ್ಳಿ: ತಲೆಗೆ ಸ್ನಾನ ಮಾಡುವ ಮುನ್ನ ಈರುಳ್ಳಿ ರಸವನ್ನು ತಲೆಯ ಬುಡಕ್ಕೆ ಲೇಪಿಸಿಕೊಂಡು ಅರ್ಧ ಗಂಟೆ ಬಳಿಕ ಸ್ನಾನ ಮಾಡಿದರೆ ಕೂದಲು ಉದುರುವಿಕೆ ಕಡಿಮೆಯಾಗುವುದರ ಜೊತೆಗೆ ಹೊಟ್ಟು ನಿವಾರಣೆಯಾಗುತ್ತದೆ.
  2. ಬಾದಾಮಿ : ಬಾದಾಮಿ ಎಣ್ಣೆಗೆ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಬೆರಸಿ ತಲೆಗೆ ಹಚ್ಚಿಕೊಂಡು ಮಲಗಿದರೆ ಕೂದಲಿನ ಬುಡವನ್ನು ಗಟ್ಟಿ ಮಾಡುವಲ್ಲಿ ಸಹಕರಿಸುತ್ತದೆ.
  3. ನೆಲ್ಲಿಕಾಯಿ: ನೆಲ್ಲಿಕಾಯಿ ಕೂದಲಿಗೆ ಪೋಷಣೆ ಒದಗಿಸುವಲ್ಲಿ ಸದಾ ಮುಂದು. ನೆಲ್ಲಿಕಾಯಿಯಲ್ಲಿ ವಿಟಮಿನ್ `ಸಿ’ ಅಂಶ ಹೆಚ್ಚಿರುತ್ತದೆ ಜೊತೆಗೆ ಹೆಚ್ಚು ಅಂಟಿ ಆಂಕ್ಸಿಡೆಂಟ್ಗಳು ಇರುವುದರಿಂದ ಕೂದಲಿನ್ನು ಗಟ್ಟಿ ಮಾಡುತ್ತದೆ ಹಾಗೂ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ.
  4. ಕರಿಬೇವು : ಕರಿಬೇವಿನ ಎಲೆಯಲ್ಲಿ ಹೆಚ್ಚು ಅಂಟಿ ಆಂಕ್ಸಿಡೆಂಟ್‍ಗಳು ಹಾಗೂ ವಿಟಮಿನ್ ಎ,ಸಿ ಮತ್ತು ಇ. ಮಿನರಲ್ಸ್, ಕಾಲ್ಸಿಯಂ ಅಂಶ ಹೆಚ್ಚಿರುವ ಕಾರಣ ಕೂದಲಿಗೆ ಬಹು ಉಪಯೋಗ. ಕರಿಬೇವಿನ ಎಲೆಗಳನ್ನು ಕೊಬ್ಬರಿ ಎಣ್ಣೆಯೊಂದಿಗೆ ಕುದಿಸಿ ತಲೆಗೆ ಲೇಪಿಸಿಕೊಳ್ಳುವದರಿಂದ ತಲೆಯ ಹೊಟ್ಟು ಹಾಗೂ ಬಳಿ ಕೂದಲು ಸಮಸ್ಯೆ ನಿವರಣೆಯಾಗುತ್ತದೆ.

LEAVE A REPLY

Please enter your comment!
Please enter your name here