ಹಿಟ್ಲರನ ಮೀಸೆ ಚಾರ್ಲಿ ಚಾಪ್ಲಿನ್ ಮೀಸೆ ತರ ಯಾಕೆ ಇತ್ತು ಗೊತ್ತಾ?

0
198

ಅಡಾಲ್ಫ್ ಹಿಟ್ಲರ್ ನಾಝಿ ಜನಾಂಗದ ಓರ್ವ ನಿರಕುಂಶ ಪ್ರಭುವಾಗಿದ್ದು,ಪ್ರಪಂಚವನ್ನು ವಿನಾಶದಂಚಿಗೆ ತಲುಪಿಸಿದ ಮಹಾಕ್ರೂರಿಯಾಗಿದ್ದನು. ನಾಝಿ ಜನಾಂಗದ ಈ ನಾಯಕನ ಮೈ ನವಿರೇಳಿಸುವ ವಿಷಯಗಳಿವೆ. 1889 ರಲ್ಲಿ ಆಸ್ಟ್ರಿಯಾದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹಿಟ್ಲರ್ 1913 ರಲ್ಲಿ ವಿಯನ್ನಾದಿಂದ ಮ್ಯೂನಿಕ್ ಓಡಿ ಬರುವ ಮುನ್ನ ಕಲಾವಿದನಾಗಿ ಹೆಸರನ್ನು ಮಾಡಿದ.ಹಿಟ್ಲರ್ ಎಂಬ ಹೆಸರು ಅವನ ಕುಟುಂಬದ ಮೂಲ ಹೆಸರಲ್ಲ. ಹಿಟ್ಲರ್ ನ ತಂದೆ 1887ರಲ್ಲಿ ಕುಟುಂಬದ ಹೆಸರನ್ನು ಹಿಟ್ಲರ್ ಎಂದು ಬದಲಾಯಿಸಿದನು.


ಹಿಟ್ಲರ್ ತನ್ನ ಜೀವನದಲ್ಲಿ ಇಷ್ಟ ಪಟ್ಟ ವಿಷಯಗಳಲ್ಲಿ ಒಂದು ಅವನ ತಾಯಿ,ಇನ್ನೊಂದು ಜರ್ಮನಿ.ಹಿಟ್ಲರ್ ಮತ್ತು ಅವನ ತಂದೆಯ ನಡುವಿನ ಸಂಬಂಧ ಅಷ್ಟರ ಮಟ್ಟಿಗೆ ಇತ್ತು.ಹಿಟ್ಲರನ ಮೊದಲ ಕನಸು ಕಲಾವಿದನಾಗಿ ಸಾಧನೆಯನ್ನು ಮಾಡಬೇಕೆಂಬುದು.ಆದ್ರೆ ಅವರ ತಂದೆಗೆ ಅದೆಲ್ಲಾ ಇಷ್ಟ ಇರಲ್ಲ.ಹಿಟ್ಲರ್ ಹುಟ್ಟಿದ್ದು ಆಸ್ಟ್ರಿಯಾದಲ್ಲಾದರೂ ಹಿಟ್ಲರ್ಗೆ ಅದರ ಪಕ್ಕದಲ್ಲಿದ್ದ ಜರ್ಮನಿಯ ಮೇಲೆ ವಿಶೇಷ ಆಸಕ್ತಿ ಕಾರಣ ಜರ್ಮನಿಯ ಸೈನಿಕರು ಯುದ್ಧದಲ್ಲಿ ರೆಬೆಲ್ ಆಗಿ ಹೋರಾಡುತ್ತಿದಿದ್ದು.ಇವರ ತಾಯಿಯ ಸಾವಿನಿಂದ ಹಿಟ್ಲರ್ ತುಂಬಾ ನೋವನ್ನು ಅನುಭವಿಸುತ್ತಿದ್ದ ಅವರು ಅವಾಗ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬರುತ್ತಾರೆ.

ಹೊಟ್ಟೆಪಾಡಿಗಾಗಿ ಪೈಂಟಿಂಗ್ ಕೆಲಸವನ್ನು ಶುರು ಮಾಡ್ತಾರೆ.ಜೊತೆಗೆ ಪೋಸ್ಟ್ ಕಾರ್ಡನ್ನು ಹಂಚುವ ಕೆಲಸವನ್ನು ಮಾಡುತ್ತಿದ್ದರು. ಎಲ್ಲದರ ನಂತರ ಅವನು ಇಷ್ಟ ಪಡುತ್ತಿದ್ದ ಜರ್ಮನಿಯ ಸೇನೆಯಲ್ಲಿ ಸೇರುತ್ತಾರೆ. ತನ್ನ ತಂದೆಯ ಮಾಡಿದ ಈ ಒಂದು ಕೆಲಸವನ್ನು ಅಡಾಲ್ಫ್ ಮೆಚ್ಚಿಕೊಂಡಿದ್ದನು. ಮೊದಲನೆಯ ವಿಶ್ವ ಯುದ್ದದ ಅವಧಿಯಲ್ಲಿ ಹಿಟ್ಲರನು ಜರ್ಮನ್ ಜನಗಳ ಪರವಾಗಿ ಹೋರಾಡುವಾಗ ಆತನ ಎಡ ತೊಡೆಗೆ ಗಾಯವಾಯಿತು. ಸೇನಾ ವೈದ್ಯರಾಗಿದ್ದ ಜೋಹಾನ್ ಜಂಬಾರ್ ಅವರು ಸಮರ್ಥಿಸಿಕೊಳ್ಳುವ ಪ್ರಕಾರ ಯುದ್ಧಭೂಮಿಯಲ್ಲಿ ಗಾಯಗೊಂಡಿದ್ದ ಹಿಟ್ಲರನನ್ನು ಕಂಡು ಅವರು ಆತನ ಜೀವ ಉಳಿಸಿದ್ದರು.ಇತಿಹಾಸ ಕಂಡ ಕ್ರೂರ, ಅಷ್ಟೇ ವರ್ಣರಂಜಿತ ವ್ಯಕ್ತಿತ್ವಗಳಲ್ಲಿ ಹಿಟ್ಲರ್ ಕೂಡಾ ಒಬ್ಬ. ಅವನ ಆಡಳಿತ ಅವಧಿಯಲ್ಲಿ ಲಕ್ಷಾಂತರ ಜನ ಸಾವು ನೋವಿಗೆ ಗುರಿಯಾಗಬೇಕಾಯಿತು.

ಹೀಗೆ ಹಿಟ್ಲರ್ ಮೀಸೆ ಬಗ್ಗೆ ಒಂದು ರೋಚಕ ಕತೆ ಇದೆ.ಹಿಟ್ಲರ್ ಮೀಸೆ ಮೊದಲು ಹೀಗೆ ಇರಲಿಲ್ಲ.ಎಲ್ಲರ ಮೀಸೆ ತರಹ ದೊಡ್ಡ ಮತ್ತು ದಪ್ಪ ಮೀಸೆಯಾಗಿತ್ತು. ಯುದ್ಧದ ಸಮಯದಲ್ಲಿ ಹಾನಿಕಾರಕ ಅನಿಲಗಳನ್ನು ಸೈನಿಕರ ಮೇಲೆ ಪ್ರಯೋಗ ಮಾಡುತ್ತಿದ್ದರು.ಅದರಿಂದ ತಪ್ಪಿಸಿಕೊಳ್ಳಲು ಸಹಾಯ ಆಗಲಿ ಎಂದು ಅಲ್ಲಿನ ಆರ್ಮಿ ಅವರಿಗೆ ವಿಶೇಷ ಮಾಸ್ಕ್ ಅನ್ನು ಕೊಟ್ಟಿರುತ್ತಾರೆ.ಆದರೆ ಹಿಟ್ಲರ್ ಆ ಮಾಸ್ಕ್ ಧರಿಸುತ್ತಿರಲಿಲ್ಲ ಕಾರಣ ಅವರಿಗೆ ಆ ಮಾಸ್ಕ್ ಸರಿಯಾಗುತ್ತಿರಲಿಲ್ಲ ಅವರ ಮೀಸೆ ಅದಕ್ಕೆ ಅಡ್ಡಿಯನ್ನು ಮಾಡುತಿತ್ತು.ಮೊದಲನೆಯ ವಿಶ್ವಯುದ್ಧ ಮಾಡುವಾಗ ಅವರು ಮಾಸ್ಕ್ ಧರಿಸಲು ನಿರ್ಧರಿಸಿ ಅವರ ಮೀಸೆಯನ್ನು ಚಿಕ್ಕ ಮೀಸೆಯಾಗಿ ಮಾಡಿಕೊಂಡರು ಹಾಗೆ ಮಾಡಿಕೊಂಡಿದ್ದರಿಂದ ಅವರಿಗೆ ಮಾಸ್ಕ್ ಧರಿಸಲು ಸಹಾಯವಾಯಿತು. ಆ ದಿನ ಮಾಸ್ಕ್ ಧರಿಸದೆ ಇದ್ದಿದ್ದರೆ ಹಿಟ್ಲರನ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು.

ಆದ ಕಾರಣ ಅವನು ಅವತ್ತಿನಿಂದ ಅವನ ಮೀಸೆಯನ್ನು ಚಿಕ್ಕ ಮೀಸೆಯನ್ನಾಗಿ ಮಾಡಿಕೊಂಡನು.ಅವತ್ತಿನಿಂದ ಅವನಿಗೆ ಅವನ ಚಿಕ್ಕ ಮೀಸೆಯ ಬಗ್ಗೆ ವಿಶೇಷ ಪ್ರೀತಿ ಬೆಳೆಯಿತು.ಈ ಹಿಟ್ಲರ್ ಕೊನೆಗೆ ಒಂದು ದಿನ ತನ್ನನ್ನು ತಾನೇ ಜರ್ಮನಿಯ ಸರ್ವಾಧಿಕಾರಿ ಎಂದು ಘೋಷಿಕೊಳ್ಳುತ್ತಾನೆ.ಈ ಹಿಟ್ಲರ್ಗೆ ಕರುಣೆ ಪದದ ಅರ್ಥವೇ ಗೊತ್ತಿರಲಿಲ್ಲ.ಎಷ್ಟೋ ಸಾಮಾನ್ಯ ಜನರ ಸಾವು ನೋವಿಗೆ ಕಾರಣವಾದ ಈ ಹಿಟ್ಲರ್ ಸಾವು ಕೂಡಾ ಅಷ್ಟೇ ಕೆಟ್ಟದಾಗಿತ್ತು.

LEAVE A REPLY

Please enter your comment!
Please enter your name here