‘ಮುಸ್ಲಿಂ-ಕ್ರಿಶ್ಚಿಯನ್ನರಿಗಿಂತ ಹಿಂದುಗಳೇ ನಂಬಿಕೆಗೆ ಅರ್ಹರು’ ನ್ಯೂಜಿಲೆಂಡ್ ಸಮೀಕ್ಷೆ

0
264

ಧಾರ್ಮಿಕ ಹಿನ್ನಲೆಯನ್ನಿಟ್ಟುಕೊಂಡು ನಡೆಸಲಾದ ಸಮೀಕ್ಷೆಯೊಂದು ಅಚ್ಚರಿಯ ಫಲಿತಾಂಶ ಹೊರಹಾಕಿದೆ. ಹೌದು, “ನ್ಯೂಜಿಲ್ಯಾಂಡ್‍ನಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿ ಹಲವು ಧರ್ಮೀಯರಿಗಿಂತ ಹಿಂದೂಗಳೇ ಹೆಚ್ಚು ನಂಬಿಕಸ್ಥರು” ಎಂದು ವಿಲ್ಲಿಂಗ್ ಟನ್‍ನ ವಿಕ್ಟೋರಿಯಾ ವಿವಿ ನಡೆಸಿದ ‘ಹೂ ಡು ವಿ ಟ್ರಸ್ಟ್ ಇನ್ ನ್ಯೂಜಿಲ್ಯಾಂಡ್’ ಎಂಬ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಆದಿ ಅನಾದಿ ಕಾಲದಿಂದಲೂ ಬೇರೆ ಯಾವುದೇ ಧರ್ಮದ ಮೇಲೆ ದಾಳಿ ಮಾಡದ, ಧರ್ಮ ಸಹಿಷ್ಣುತೆ ಜತೆಗೆ ಸಂಪ್ರದಾಯ, ಸಂಸ್ಕೃತಿಯ ಹಿರಿಮೆ ಹೊಂದಿರುವ ಹಿಂದೂ ಧರ್ಮವು ಜಗತ್ತಿನಲ್ಲೇ ಗೌರವಯುತ ಸ್ಥಾನ ಗಳಿಸಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಇನ್ನು ನ್ಯೂಜಿಲ್ಯಾಂಡ್ ನಲ್ಲಿ 89 ಸಾವಿರ ಹಿಂದೂಗಳಿದ್ದು, ಸಮೀಕ್ಷೆ ನಡೆಸಿದ ಎಲ್ಲ ಜನರಲ್ಲಿ ಶೇಕಡಾ 29.3ರಷ್ಟು ಜನ ಹಿಂದೂಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಬೇರೆ ಧರ್ಮೀಯರಿಗಿಂತ ಹೆಚ್ಚಿದೆ. ಅದರಲ್ಲೂ, ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರಿಗಿಂತ ಹಿಂದೂಗಳೇ ಹೆಚ್ಚು ನಂಬಿಕೆಗೆ ಅರ್ಹರು ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಇನ್ನು ಸಮೀಕ್ಷೆಯಲ್ಲಿ ಅನೇಕ ಅಚ್ಚರಿಯ ಮಾಹಿತಿಗಳು ಲಭ್ಯವಾಗಿದ್ದು, ಹಿಂದೂಗಳು ಅಂತರ್ಮುಖಿ ಇರುವವರು, ಜ್ಞಾನದ ದಾಹ ಇರುವವರು, ಧಾರ್ಮಿಕ, ಅಧ್ಯಾತ್ಮದಲ್ಲಿ ನಂಬಿಕೆ ಇರುವುದರಿಂದ ಅವರ ಮನಸ್ಥಿತಿ ಉತ್ತಮವಾಗಿರುತ್ತದೆ ಹಾಗೂ ನಿಷ್ಕಲ್ಮಷ ಭಾವನೆ ಇರುವುದಿಲ್ಲ. ಇನ್ನೊಬ್ಬರ ಬಗ್ಗೆ ಸಹಿಷ್ಣುತೆ ಸಹ ಹೊಂದಿರುತ್ತಾರೆ ಎಂದು ನ್ಯೂಜಿಲ್ಯಾಂಡ್ ಜನ ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here