ರಾನು ಮಂಡಲ್ ವಿಚಾರವಾಗಿ ಹಿಮೇಶ್ ರೇಷ್ಮಿಯಾ ಕೆಂಡಾಮಂಡಲ.!

0
157

ರಾತ್ರೋರಾತ್ರಿ ಸ್ಟಾರ್ ಆದ ನಾನು ಮಂಡಳಿ ಯಾರಿಗೆ ಗೊತ್ತಿಲ್ಲ ಹೇಳಿ.? ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅದ್ಭುತ ಕಂಠ ಸಿರಿಯಿಂದಲೇ ಜನರನ್ನು ತಲುಪಿದ ರಾನು ಮಂಡಲ್ ಅತಿ ಕಡಿಮೆ ಅವಧಿಯಲ್ಲಿ ಜನಸಾಮಾನ್ಯರ ಮನಗೆದ್ದಂತ ವ್ಯಕ್ತಿ. ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಅವರನ್ನು ಹಾಡಲು ಪ್ರೇರೇಪಿಸಿ, ಅವರಿಂದ ಹಾಡಿಸಿ ಜನರಿಗೆ ಪರಿಚಯಿಸಿದ್ದು ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ.

 

 

ಸದ್ಯ ರಾನು ಮಂಡಲ್ ಅವರ ವಿಚಾರವನ್ನು ಮಾಧ್ಯಮದವರು ಹಿಮೇಶ್ ಅವರ ಬಳಿ ಪ್ರಶ್ನಿಸಿದ್ದಕ್ಕೆ, ಹಿಮೇಶ್ ಕೋಪಗೊಂಡು ಉತ್ತರಿಸಿದ್ದಾರೆ. ಹೌದು, ಕೆಲ ದಿನಗಳ ಹಿಂದೆಯಷ್ಟೇ ಮುಂಬೈನಲ್ಲಿ ನಡೆದ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಹಿಮೇಶ್ ಭಾಗಿಯಾಗಿದ್ದರು. ಈ ವೇಳೆ ಹಲವು ಮಾಧ್ಯಮದ ತಂಡಗಳು ಅಲ್ಲಿ ಉಪಸ್ಥಿತರಾಗಿತ್ತು. ಕಾರ್ಯಕ್ರಮದಿಂದ ರಮೇಶ್ ಹೊರಬರುತ್ತಿದ್ದಂತೆ ಅವರ ಬಳಿ ರಾನು ಮಂಡಲ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

 

 

ಪ್ರಶ್ನೆ ಕೇಳುತ್ತಿದ್ದಂತೆ ಹಿಮೇಶ್ ಅವರು ನಾನೇನು ರಾನು ಮಂಡಲ್ ಅವರ ಮ್ಯಾನೇಜರಾ.? ಅವರ ಮ್ಯಾನೇಜ್ ನಾನಲ್ಲ.! ಅವರ ಬಗ್ಗೆ ನನ್ನ ಬಳಿ ಏಕೆ ಕೇಳುತ್ತಿದ್ದೀರಿ.? ನಾನು ಅವರಿಗೆ ಹಾಡಲು ಅವಕಾಶ ಕೊಟ್ಟೆ ಅಷ್ಟೇ.! ಅವರ ಜೊತೆಗೆ ಆರ್ಯನ್, ದರ್ಶನ್, ಫಲಕ್, ಅವರಿಗೆ ಹಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದೇನೆ ಎಂದು ಗರಂ ಆಗಿ ಉತ್ತರಿಸಿದ್ದಾರೆ.

 

 

ರಾನು ಮಂಡಲ್ ಅವರ ಬಗ್ಗೆ ಮಾಧ್ಯಮದವರು ಕೆಲ ವಿಚಾರಗಳನ್ನು ಪ್ರಸ್ತಾಪಿಸಿದಾಗ ಅದಕ್ಕೆ ಹಿಮೇಶ್ ರಾನು ಅವರನ್ನು ಹೊಗಳಿ ಕೂಡ ಮಾತನಾಡಿದ್ದಾರೆ. ರಾನು ಅವರು ಉತ್ತಮ ಕಲಾವಿದೆ, ಗಾಯಕಿ, ಅವರ ಧ್ವನಿ, ಹಾಡು ಬಹಳ ಸೊಗಸಾಗಿದೆ. ಅವರ ಪ್ರತಿಭೆಗೆ ಗೌರವಿಸಿ ನಾನು ಕೆಲ ಸಂಗೀತ ನಿರ್ದೇಶಕರು, ನಿರ್ಮಾಪಕರೊಡನೆ ಚರ್ಚಿಸಿ ಅವರಿಗೆ ಚಿತ್ರರಂಗದಲ್ಲಿ ಕೆಲಸ ಕೊಡಲು ಹೇಳುತ್ತೇನೆ ಎಂದು ಹೇಳಿದರು. ಟ್ರಾಲ್ ವಿಚಾರಗಳ ಬಗ್ಗೆ ನನ್ನನ್ನು ಏನೂ ಕೇಳಬೇಡಿ, ಅವರ ಟ್ರೋಲಿಂಗ್ ಬಗ್ಗೆ ನೀವು ನಾನು ಅವರನ್ನೇ ನೇರವಾಗಿ ಕೇಳಿ ನಿಮಗೆ ಸರಿಯಾದ ಉತ್ತರ ಸಿಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದರು.

 

 

ಒಟ್ಟಿನಲ್ಲಿ ರಾನು ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಹಾಡಲು ವೇದಿಕೆ ನೀಡಿ ಅವರನ್ನು ಹೊರ ಜಗತ್ತಿಗೆ ಪರಿಚಯಿಸಿದವರು ಹಿಮೇಶ್. ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಅವರಿಗೆ ಸಿನಿಮಾಗಳಲ್ಲಿ ಹಾಡಲು ಅವಕಾಶ ಕೊಟ್ಟು ಜೊತೆಗೆ ರಿಯಾಲಿಟಿ ಶೋಗಳಲ್ಲಿ ಪರಿಚಯಿಸಿದರು. ಇದರಿಂದ ರಾನು ಅವರಿಗೆ ಇಂದು ಉತ್ತಮ ಸ್ಥಾನ ಸಿಕ್ಕಿದ್ದು, ತಮ್ಮ ಪ್ರತಿಭೆಯನ್ನು ಮತ್ತಷ್ಟು ಅನಾವರಣ ಮಾಡಲು ಉತ್ತಮ ವೇದಿಕೆಗಳು ಸಿಗುತ್ತಿದೆ ಎಂದರೆ ತಪ್ಪಾಗಲಾರದು.

LEAVE A REPLY

Please enter your comment!
Please enter your name here