ವರ್ಣರಂಜಿತ ವ್ಯಕ್ತಿತ್ವದ ನಾಯಕಿ: ಸುಷ್ಮಾ ಸ್ವರಾಜ್

0
123

ಎ.ಬಿ.ವಿ.ಪಿ. ಹಾಗೂ ಜನಸಂಘದ ಗರಡಿಯಲ್ಲಿ ಬೆಳೆದ ವಿದ್ಯಾವಂತ ಮಹಿಳೆ ಸುಷ್ಮಾ ಸ್ವರಾಜ್ ರಾಷ್ಟ್ರ ಕಂಡ ಅಪರೂಪದ ಜನ ನಾಯಕಿ.

ಇಂದಿರಾ ಗಾಂಧಿ ಅವರಂತೆ ಇವರು ಕೂಡ ಕರ್ನಾಟಕದ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದು ಕಾಕತಾಳೀಯ.
1999 ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ಎದುರು ಸ್ಪರ್ಧೆ ಮಾಡಿ ತೀವ್ರ ಪೈಪೋಟಿ ಒಡ್ಡಿದರು.

ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ, ಸುಷ್ಮಾ ಅವರ ಸ್ಪರ್ಧೆಯ ಪರಿಣಾಮದಿಂದ ಬಳ್ಳಾರಿಯಲ್ಲಿ ಕಮಲ ಅರಳಲು ಸಾಧ್ಯವಾಯಿತು.

ದೆಹಲಿ ರಾಜಕಾರಣದ ತಮ್ಮ ಪ್ರಭಾವವನ್ನು ರಾಜ್ಯದಲ್ಲಿ ಕೂಡ ಪಸರಿಸಿದರು.
ಸೋಲಿನ ನಂತರವೂ ಬಳ್ಳಾರಿ ಜನರ ಸಂಪರ್ಕ ಮುಂದುವರೆಸಿಕೊಂಡು ಹೊದದ್ದು ಬಳ್ಳಾರಿ ಬಿಜೆಪಿ ನಾಯಕರಿಗೆ ವರವಾಯಿತು.

ಸುಷ್ಮಾ ಅವರ ನಾಮ ಬಲದಿಂದ ಬಳ್ಳಾರಿ ಧಣಿಗಳು ತಮ್ಮ ರಾಜಕೀಯ ಜಾಲ ವಿಸ್ತರಿಸಿಕೊಂಡರು.
ಗಣಿ ವ್ಯಾಪಾರದಲ್ಲಿ ಸುಷ್ಮಾ ಅವರ ಪಾಲುದಾರಿಕೆ ಇರದಿದ್ದರೂ ಪ್ರಭಾವ ಮಾತ್ರ ಕಂಗೊಳಿಸುತ್ತಿತ್ತು.‌

ಅಂತರರಾಷ್ಟ್ರೀಯ ಖ್ಯಾತಿಯ ನಾಯಕಿಯ ಸಂಪರ್ಕ ಕೆಲವರಿಗೆ ರಾಜಕಾರಣದಲ್ಲಿ ಪ್ರಭಾವ ಬೆಳೆಸಿಕೊಳ್ಳಲು ಅಸ್ತ್ರವಾಯಿತೆಂಬ ಆರೋಪ ಮಾತ್ರ ಹಾಗೆ ಉಳಿದುಕೊಂಡಿತು.

ಆದರೆ ತುಂಬಾ ಮುತ್ಸದ್ದಿ ನಾಯಕಿಯಾಗಿದ್ದ ಸುಷ್ಮಾ ತಮಗೆ ಯಾವುದೇ ರೀತಿಯ ಕಳಂಕ ಅಂಟಿಕೊಳ್ಳದಂತೆ ಜಾಗೃತಿ ವಹಿಸಿ ತಮಗೆ ಹಾಗೂ ಅವರಿಗೆ ಯಾವುದೇ ಸಂಬಂಧ ಇಲ್ಲ ಎಂಬ ಹೇಳಿಕೆ ನೀಡಿದರು.

ಆದರೂ ಬಳ್ಳಾರಿ ಜನರ ಮುಗ್ಧತೆ ಮಾತ್ರ ಇವರನ್ನು ಅಪಾರವಾಗಿ ಆಕರ್ಷಿಸಿತ್ತು.

ವಾಜಪೇಯಿ ಅವರ ಪ್ರಭಾವದಿಂದಾಗಿ ಕೊಂಚ ಹೆಚ್ಚು ಸೆಕ್ಯೂಲರ್ ಮನಸ್ಥಿತಿ ಹೊಂದಿದ್ದ ಸುಷ್ಮಾ ಎಲ್ಲಾ ಪಕ್ಷಗಳ ಪ್ರೀತಿ ಪಾತ್ರರಾಗಿದ್ದರು.

ತಮ್ಮ ದಿಟ್ಟ ಪರಿಣಾಮಕಾರಿ ಮಾತಿನ ಶೈಲಿಯಿಂದ ಇಂದಿರಾ ಗಾಂಧಿ ಅವರ ನಂತರ ಸಂಸತ್ತಿನಲ್ಲಿ ಹೆಚ್ಚು ಪ್ರಭಾವಿತ ಮಹಿಳೆ ಎನಿಸಿಕೊಂಡರು.

ಹಿಂದಿ ಭಾಷೆಯ ಮೇಲಿನ ಪ್ರಭುತ್ವ, ಕಾವ್ಯಮಯ ಮಾತುಗಾರಿಕೆಯಿಂದ ಇಡೀ ದೇಶದ ಗಮನ ಸೆಳೆದರು.
ಹಿರಿಯ ನಾಯಕರ ಒಡನಾಟ, ಗಂಭೀರ ನಡೆ ನುಡಿಯಿಂದ ತಮ್ಮ ಸಜ್ಜನಿಕೆ ಉಳಿಸಿಕೊಂಡರು. ‌
ರಾಜಕೀಯ ಸ್ಥಾನಮಾನ ಗಳಿಸಲು ಹಪಾಹಪಿಸದೇ ನಿಧಾನವಾಗಿ ಉನ್ನತ ಹುದ್ದೆಗಳನ್ನು ಗಳಿಸಿದರು.

ಕಳೆದ ಸರಕಾರದಲ್ಲಿ ವಿದೇಶಾಂಗ ಖಾತೆಯ ಸಚಿವರಾಗಿ ಅನೇಕ ವಿನೂತನ ಯೋಜನೆಗಳನ್ನು ಜಾರಿಗೊಳಿಸಿದರು.
ಮೋದಿ ಅವರ ಸರಕಾರದಲ್ಲಿ ಕೆಲವೇ ಕೆಲವು ಮಂತ್ರಿಗಳಿಗೆ ಮಾತ್ರ ಆ ಸಾಮರ್ಥ್ಯ ಮತ್ತು ಸ್ವಾತಂತ್ರ್ಯ ಇತ್ತು.

ಆ ಸ್ವಾತಂತ್ರ್ಯದ ಸದುಪಯೋಗ ಪಡೆದುಕೊಳ್ಳಲು ಅವರು ಯಶಸ್ವಿಯಾದರು.

ತಮಗಿಂತ ರಾಷ್ಟ್ರ ರಾಜಕೀಯದಲ್ಲಿ ಕಿರಿಯರಾಗಿದ್ದ ಮೋದಿ ಮತ್ತು ಶಾ ಜೋಡಿಯ ಅಬ್ಬರವನ್ನು ಸಮ ಚಿತ್ತರಾಗಿ ನಿಭಾಯಿಸಿದರು.
ಕಾಲನ ಅಣತಿಯಂತೆ ಮೌನವಾಗಿ ಸಹಿಸಿಕೊಂಡರು.

ಆರೋಗ್ಯ ಹದೆಗೆಟ್ಟ ಮೇಲೆ ಸಕ್ರಿಯ ರಾಜಕಾರಣದಿಂದ ಸ್ವಯಂ ನಿವೃತ್ತರಾಗಿ ತುಂಬ ಕಿರಿಯ ವಯಸ್ಸಿನಲ್ಲಿ ಕಣ್ಮರೆಯಾದರೂ ತಮ್ಮ ಅಪರೂಪದ ನೆನಪುಗಳನ್ನು ರಾಜಕೀಯ ಪುಟಗಳಲ್ಲಿ ಅರ್ಥಪೂರ್ಣವಾಗಿ ದಾಖಲಿಸಿದ್ದಾರೆ.

ಬಳ್ಳಾರಿ ಧಣಿಗಳ ಸಂಪರ್ಕವನ್ನು ತುಂಬ ಜಾಣತನದಿಂದ ಕಡಿದುಕೊಂಡು. ತಮ್ಮ ರಾಷ್ಟ್ರೀಯ ಇಮೇಜಿಗೆ ಧಕ್ಕೆ ಬಾರದಂತೆ ಎಚ್ಚರವಹಿಸಿದರು.

ಈಗಿನ ಬಿಜೆಪಿ ಪಕ್ಷ ತಮ್ಮ ಸೇವಾ ಹಿರಿತನವನ್ನು ಅಲಕ್ಷ್ಯ ಮಾಡಿದೆ ಎಂಬ ಸಣ್ಣ ಕೊರಗಿದ್ದರೂ ಅದನ್ನು ಹೊರ ಹಾಕದೇ ಸುಮ್ಮನೆ ಸಹಿಸಿಕೊಂಡು ನಸು ನಗುತ್ತ ಕಾಲನ ಅಬ್ಬರದಲ್ಲಿ ಸದ್ದಿಲ್ಲದೆ ದೈಹಿಕವಾಗಿ ಮರೆಯಾಗಿದ್ದಾರೆ.

#ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here