ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ವಿಶ್ವದ ಅಗ್ಗದ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಮೂರು ನಗರಗಳು ಸ್ಥಾನ ಪಡೆದುಕೊಂಡಿವೆ. ಕರ್ನಾಟಕ ರಾಜಧಾನಿ ಬೆಂಗಳೂರು 5ನೇ ಸ್ಥಾನ ಪಡೆದುಕೊಂಡಿದ್ದರೆ, ಚೆನ್ನೈ ಹಾಗೂ ದೆಹಲಿ ಕ್ರಮವಾಗಿ 8 ಮತ್ತು 10ನೇ ಸ್ಥಾನ ಪಡೆದುಕೊಂಡಿವೆ.
ವಿಶ್ವದ 10 ಅತಿ ಅಗ್ಗದ ನಗರಗಳು
- ಕ್ಯಾರಕಾಸ್- ವೆನಿಜುವೆಲಾ
- ಡಮಾಸ್ಕಸ್- ಸಿರಿಯಾ
- ತಾಷ್ಕೆಂಟ್- ಉಜ್ಬೇಕಿಸ್ತಾನ
- ಅಲ್ಮಾಟಿ- ಕಜಕಸ್ತಾನ
- ಬೆಂಗಳೂರು- ಭಾರತ
- ಕರಾಚಿ- ಪಾಕಿಸ್ತಾನ
- ಲಾಗೋಸ್- ನೈಜೀರಿಯಾ
- ಚೆನ್ನೈ- ಭಾರತ
- ಬ್ಯೂನಸ್ ಐರಸ್ – ಅಜೆರ್ಂಟೀನಾ
- ನವದೆಹಲಿ- ಭಾರತ
ಇನ್ನು ವಿಶ್ವದ ಅತಿ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ, ಪ್ಯಾರಿಸ್ ಹಾಗೂ ಹಾಂಕಾಂಗ್ ಮೊದಲ ಸ್ಥಾನ ಪಡೆದುಕೊಂಡಿವೆ.